Breaking News
Home / Recent Posts / ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ, ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ

ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ, ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ

Spread the love

ಶ್ರೀಶೈಲ್ ಲೋಕನ್ನವರ


ಸುಪ್ರೀತ ಸೋನವಾಲಕರ


ಕೃಷ್ಣಾ ಕೆಂಪಸತ್ತಿ

 

ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ

ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2023-24ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಶೈಲ್ ಪಿ. ಲೋಕನ್ನವರ, ಕಾರ್ಯದರ್ಶಿಯಾಗಿ ಸುಪ್ರೀತ ಎಸ್. ಸೋನವಾಲಕರ ಹಾಗೂ ಖಜಾಂಚಿಯಾಗಿ ಕೃಷ್ಣಾ ಎಲ್. ಕೆಂಪಸತ್ತಿ ಅವರು ಆಯ್ಕೆಯಾಗಿರುವರು.
ಪದಗ್ರಹಣ: 2023-24ನೇ ಸಾಲಿನ ಲಯನ್ ಕ್ಲಬ್ ಮೂಡಲಗಿ ಪರಿವಾರದ ಪದಾಧಿಕಾರಿಗಳ ಪದಗ್ರಹಣವು ಜು.2ರಂದು ಸಂಜೆ 5ಕ್ಕೆ ಎಂಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಲಿದೆ.
ಪದಾಧಿಕಾರಿಗಳ ಪದಗ್ರಹಣ ಅಧಿಕಾರಿಯಾಗಿ ಜಮಖಂಡಿಯ ಡಾ. ರಂಗಣ್ಣ ಎನ್. ಸೋನವಾ¯ಕರ ಭಾಗವಹಿಸುವರು. ಮುಖ್ಯ ಅತಿಥಿಯಾಗಿ ಕೆಸರಗೊಪ್ಪದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎಂ. ಶೇಖ್ ಭಾಗವಹಿಸುವರು.
ಸಮಾರಂಭದ ಪೂರ್ವದಲ್ಲಿ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಲಾಗುದು ಎಂದು ಪ್ರಸಕ್ತ ನಿಕಟಪೂರ್ವ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಕಾರ್ಯದರ್ಶಿ ಸಂಗಮೇಶ ಕೌಜಲಗಿ ತಿಳಿಸಿದ್ದಾರೆ.

 


Spread the love

About inmudalgi

Check Also

ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ- ಎಸ್. ಎನ್. ಕುಂಬಾರ

Spread the loveಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ