Breaking News
Home / Uncategorized (page 5)

Uncategorized

ಫೆ. 9ರಂದು  ರಾಜಾಪುರದಲ್ಲಿ   ರೈತ ದಿನಾಚರಣೆ ಆಚರಣೆ, ಮಣ್ಣು ಆರೋಗ್ಯ ಚಿಂತನ ಕಾರ್ಯಕ್ರಮ

ಫೆ. 9ರಂದು  ರಾಜಾಪುರದಲ್ಲಿ   ರೈತ ದಿನಾಚರಣೆ ಆಚರಣೆ, ಮಣ್ಣು ಆರೋಗ್ಯ ಚಿಂತನ ಕಾರ್ಯಕ್ರಮ ಮೂಡಲಗಿ: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಗೋಕಾಕ ತಾಲ್ಲೂಕು ಘಟಕದಿಂದ ತಾಲ್ಲೂಕಿನ ರಾಜಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಫೆ. 9ರಂದು ಬೆಳಿಗ್ಗೆ 10ಕ್ಕೆ ರೈತ ದಿನಾಚರಣೆ ಮತ್ತು ಮಣ್ಣು ಆರೋಗ್ಯ ಕುರಿತು ಚಿಂತನ ಕಾರ್ಯಕ್ರಮವನ್ನು ಏರ್ಪಡಿಸಿರುವರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಜಾಪುರ ಗ್ರಾಮ ಪಂಚಾಯ್ತಿ …

Read More »

ಮೀರಜ್-ಮಂಗಳೂರ ವಾಯಾ ಅರಸೀಕೆರೆ ಮಾರ್ಗವಾಗಿ ರೈಲು ಓಡಾಟ ಶೀಘ್ರ ಆರಂಭಿಸಬೇಕು- ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ: ಕುಂದಾನಗರಿ ಬೆಳಗಾವಿ ಜಿಲ್ಲೆ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಸಾರ್ವಜನಿಕರ ಅನುಕೂಲಕ್ಕಾಗಿ ಮೀರಜ್-ಮಂಗಳೂರ ವಾಯಾ ಅರಸೀಕೆರೆ ಮಾರ್ಗವಾಗಿ ರೈಲು ಓಡಾಟ ಶೀಘ್ರ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು. ಬುಧವಾರ (ಆ.4) ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ …

Read More »

ಸತೀಶ ಶುಗರ್ಸ್‍ದಿಂದ ರೈತರಿಗೆ ರಿಯಾತಿಯಲ್ಲಿ ಸಕ್ಕರೆ ವಿತರಣೆ

ಸತೀಶ ಶುಗರ್ಸ್‍ದಿಂದ ರೈತರಿಗೆ ರಿಯಾತಿಯಲ್ಲಿ ಸಕ್ಕರೆ ವಿತರಣೆ ಮೂಡಲಗಿ: ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್ ಕಾರ್ಖಾನೆಯ ಆಡಳಿತ ಮಂಡಳಿಯು 2020-21ನೇ ಸಾಲಿನಲ್ಲಿ ಕಬ್ಬು ಮತ್ತು ಕಬ್ಬನ ಬೀಜ ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 500 ಕಿ.ಗ್ರಾಂ. ಸಕ್ಕರೆಯನ್ನು ರಿಯಾತಿ ದರದಲ್ಲಿ ಕೊಡಲಿದೆ. ಪ್ರತಿ ಒಂದು ಕಿ.ಗ್ರಾಂ.ಗೆ ರೂ. 20 ರಿಯಾತಿ ದರದಲ್ಲಿ ಸಕ್ಕರೆ ಕೊಡುವ ಬಗ್ಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಜುಲೈ 25ರಿಂದ ಆಗಷ್ಟ 21ರವರೆಗೆ ಹುಣಶ್ಯಾಳ …

Read More »

ಸೇತುವೆ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವಂತೆ ಅಜ್ಜರಣಿ ಗ್ರಾಮಸ್ಥರ ಆಗ್ರಹ

ಸೇತುವೆ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವಂತೆ ಅಜ್ಜರಣಿ ಗ್ರಾಮಸ್ಥರ ಆಗ್ರಹ ಬನವಾಸಿ: ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದಿಂದ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಅಜ್ಜರಣಿ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವಂತೆ ಹಾಗೂ ಕಾವiಗಾರಿಯಿಂದ ಜಮೀನುಗಳಲ್ಲಿ ಜಾಗ ಕಳೆದುಕೊಳ್ಳುವ ರೈತರಿಗೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಗುಡ್ನಾಪೂರ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಜ್ಜರಣಿಯ ಗ್ರಾಮಸ್ಥರು ಶಿರಸಿ ತಹಶೀಲ್ದಾರ ಎಂ.ಆರ್ ಕುಲಕರ್ಣಿ ಅವರಿಗೆ ಇತ್ತಿಚಿಗೆ ಮನವಿ …

Read More »

ಬನವಾಸಿಯಲ್ಲಿ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು”ಚಲನಚಿತ್ರದ ಚಿತ್ರೀಕರಣ

ಬನವಾಸಿಯಲ್ಲಿ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು”ಚಲನಚಿತ್ರದ ಚಿತ್ರೀಕರಣ ಬನವಾಸಿ: ಧರ್ಮರಕ್ಷಣೆಯ ಹಾಗೂ ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಉದ್ದೇಶದಿಂದ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು” ಎಂಬ ಚಲನಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ಮಾಧವನಂದ ಶೆಗುಣಸಿ ಹೇಳಿದರು. ಅವರು ಬನವಾಸಿ ಶ್ರೀ ಮಧುಕೇಶ್ವರ ದೇವಾಲಯದಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 12ನೇ ಶತಮಾನದಲ್ಲಿ ಬಹಳಷ್ಟು ಶರಣರು ಇದ್ದರು ಅವರನ್ನು ಶರಣರು ಎನ್ನುವರೇ ವಿನಃ ದೇವರು ಎಂದು ಯಾರು …

Read More »

ಶಾಸಕ ನಾರಾಯಣರಾವ್ ಸೋಂಕಿಗೆ ಬಲಿ

ಶಾಸಕ ನಾರಾಯಣರಾವ್ ಸೋಂಕಿಗೆ ಬಲಿ ಬೆಂಗಳೂರು ; ಬಸವ ಕಲ್ಯಾಣ ಕ್ಷೇತ್ರದ ಶಾಸಕ ನಾರಾಯಣರಾವ್ ಅವರು ಕೋರೋನಾ ಸೊ೦ಕಿಗೆ ಬಲಿಯಾದ ದಾರುಣ ಘಟನೆ ಇಂದು ಸಂಭವಿಸಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನದ ಆಘಾತವನ್ನು ಸಹಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತವನ್ನು ಕರ್ನಾಟಕ ಎದುರಿಸುವಂತಾಗಿದೆ. ಕರೋನಾ ಸೋಂಕು ತಗುಲಿದ ತಕ್ಷಣ 66 ವರ್ಷದ ಶಾಸಕ ನಾರಾಯಣರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು .ಉಪಚಾರ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ .ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ …

Read More »

ಕೇಂದ್ರ ಮಂತ್ರಿ ಸುರೇಶ್ ಅಂಗಡಿ ಅವರನ್ನು ಕಳೆದುಕೊಂಡ ಬೆಳಗಾವಿ ಜನತೆ

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ (65) ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ದೆಹಲಿಯ ಏಮ್ಸ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಜಗದೀಶ್ ಶೆಟ್ಟರ್, ಸುರೇಶ್ ಅಂಗಡಿ ನಿಧನರಾಗಿರುವ ಸುದ್ದಿಯನ್ನು ಸ್ಪಷ್ಟ ಪಡಿಸಿದ್ದಾರೆ. ನಾಲ್ಕನೇ ಬಾರಿ ಸಂಸದರಾಗಿದ್ದ ಸುರೇಶ್ ಅಂಗಡಿ, ಈ ಬಾರಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಅತ್ಯುತ್ತಮ ಕಾರ್ಯ …

Read More »

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯಮಾಡುತ್ತಿರುವ ಸಿಬ್ಬಂದಿಗಳ ರಕ್ಷಣೆಗಾಗಿ ಕೈಗವಸುಗಳನ್ನು ವಿತರಿಸಿದರು

ಲಯನ್ಸ್ ಕ್ಲಬ್‍ದಿಂದ ಕೈಗವಸುಗಳ ವಿತರಣೆ ಮೂಡಲಗಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ತಹಶೀಲ್ದಾರ್, ಪುರಸಭೆ ಸಿಬ್ಬಂದಿಯವರಿಗೆ ಮತ್ತು ಮಾಧ್ಯಮದವರಿಗೆ ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಮಂಗಳವಾರ ಬೆಳಿಗ್ಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಪಹಾರದ ವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಕೈಗವಸುಗಳನ್ನು ವಿತರಿಸಿದರು. ತಹಶೀಲ್ದಾರ್ ಡಿ.ಜಿ. ಮಹಾತ್, ಸಿಪಿಐ ವೆಂಕಟೇಶ ಮುರನಾಳ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕೈವಸುಗಳನ್ನು ವಿತರಿಸಿ ಮಾತನಾಡಿ …

Read More »

ವಿಶ್ವದಾದ್ಯಂತ ವಿಷ ವೈರಾನು ಹರಡುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ನಾವೇಲ್ಲ ಜಾಗೃತಗೊಳ್ಳ ಬೇಕು : ಭೀಮಶಿ ಮಗದುಮ್

ಮೂಡಲಗಿ: ಕರೋನಾ ಮಹಾಮಾರಿಗೆ ಜನ ತತ್ತರಗೊಂಡಿದ್ದು, ದುಡಿಮೆ ಇಲ್ಲದೆ ಜನ ಕಂಗಾಲಾಗಿದ್ದು, ಹಣಕಾಸಿಕ ತೊಂದರೆಗೆ ಸಿಲುಕುವಂತಾಗಿದೆ. ವಿಶ್ವದಾದ್ಯಂತ ವಿಷ ವೈರಾನು ಹರಡುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ನಾವೇಲ್ಲ ಜಾಗೃತಗೊಳ್ಳ ಬೇಕು ಎಂದು ತಾಲೂಕಾ ಭೂ ನ್ಯಾಯ ಮಂಡಳಿ ನಿರ್ಧೇಶಕ ಮಾಜಿ ಜಿ.ಪಂ ಸದಸ್ಯ ಭೀಮಶಿ ಮಗದುಮ್ ಹೇಳಿದರು. ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಕರೋನ್ ನಿಮಿತ್ಯ ಲಾಕ್ ಡೌನ್ ಹಿನ್ನೆಲೆ ಅಗತ್ಯ ತರಕಾರಿ ಕಾಯಿಪಲ್ಲೆ ವಿತರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಜನತೆಗೆ ತೊಂದರೆಗೆ …

Read More »

ಹಸಿದವರಿಗೆ ಅನ್ನ ನೀಡುವ ದೇವತಾ ಮನುಷ್ಯ : ಬಂಡಿಗಣಿ ದಾನೇಶ್ವರ ಸ್ವಾಮೀಜಿ

ಹಳ್ಳೂರ : ಉತ್ತರ ಕರ್ನಾಟಕದಲ್ಲಿ ಅನ್ನದಾನೇಶ್ವರ ಎಂದು ಪ್ರಶಿದವಾಗಿರುವ ಶ್ರೀ ಬಸವ ಗೋಪಾಲ ನೀಲಮಾಣಿಕ್ಯ ಮಠ ಸುಕ್ಷೇತ್ರ ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಅವರಿಂದ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಜನರನ್ನು ರಕ್ಷಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಇಂದು ಸ್ವಾಮೀಜಿ ತಮ್ಮ ಮಠದಿಂದ ಊಟದ ವ್ಯೆವಸ್ಥೆ ಮಾಡಿದ್ದರು. ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಊಟದ ವ್ಯೆವಸ್ಥೆ ಮಾಡಿದ ಬಸವ ಗೋಪಾಲ ಮಠದ ಭಕ್ತರು ಎಲ್ಲ ಅಧಿಕಾರಿಗಳಿಗೆ ಊಟ ಬಡಿಸುವು ಮೂಲಕ …

Read More »