ಚಿಕ್ಕೋಡಿ ವ್ಯಾಪ್ತಿಯ ಕಲ್ಲೋಳ ಗ್ರಾಮದಲ್ಲಿ ಕೃಷ್ಣಾ ನದಿಯು ತುಂಬಿ ಹರಿಯುತ್ತಿದ್ದು ನೀರಿನ ಪ್ರಮಾಣ ಹೆಚ್ಚಾಗಿದೆ. ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮದ ಜನರು ಕಟ್ಟ ಎಚ್ಚರಿಕೆ ವಹಿಸಬೇಕು. ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಜನ ಮತ್ತು
ಜಾನುವಾರುಗಳು ನದಿ ತೀರದ ಕಡೆಗೇ ತೆರಳಬಾರದು ಇನ್ನು ಎರಡೂ ಮೂರು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಿಗೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಕೃಷ್ಣಾ ನದಿಗೆ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಐದು ಅಡಿಯಷ್ಟು ನೀರಿನ ಪ್ರಮಾನ ಹೆಚ್ಚಿಗೆ ಕಂಡು ಬಂದದ್ದು ಜಿಲ್ಲಾಡಳಿತ ಪ್ರವಾಹವನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಒಂದು ವೇಳೆ ಪ್ರವಾಹ ಸ್ಥಿತಿ ನಿರ್ಮಾಣವಾದಲ್ಲಿ ಜನರ ರಕ್ಷಣೆಗೆ ಧಾವಿಸುವ ಆಯಾ ತಾಲ್ಲೂಕು ಆಡಳಿತ ಮತ್ತು ರಕ್ಷಣಾ ಪಡೆಗಳೊಂದಿಗೆ
ಸಹಕರಿಸಬೇಕು,
ನೆನಪಿರಲಿ ಜೀವವಿದ್ದರೆ ಜೀವನ
ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೆಂದ್ರ ಕಾಂಬಳೆ, ರಾಘವೇಂದ್ರ ಲಂಬುಗೋಳ, ವಿಶಾಲ ಕಟ್ಟಿ, ಇವರುಗಳು ಕಲ್ಲೋಳ ಗ್ರಾಮದಲ್ಲಿ ನದಿಯ ಪ್ರವಾಹಕ್ಕೆ ಸಾರ್ವಜನಿಕರಿಗೆ ಇಪತ್ತನಾಲ್ಕು ಘಂಟೆಗಳ ಸೇವೆ ಸಲ್ಲಿಸಲು ಸಿದ್ದರಿದ್ದೆವೆ ಎಂದು ರಾಘವೇಂದ್ರ ಕಾಂಬಳೆ ತಿಳಿಸಿದ್ದಾರೆ.