ಕೆ ಎಮ್ ಎಪ್ ಅಧ್ಯಕ್ಷರಾದ ಭಾಲಚಂದ್ರ ಜಾರಕಿಹೊಳಿ ಅಭಿಮಾನಿ.ದಿ ಮೆಥೋಡಿಸ್ಟ್ ಚರ್ಚ್ ಹಾಗೂ ಪುನರುತ್ಥಾನದ ಹಬ್ಬದ ನಿಮಿತ್ಯವಾಗಿ ಊಟದ ವ್ಯವಸ್ಥೆ.
ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಗೆದುಕೊಂಡು ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸರು, ಪುರಸಭೆಯ ಸಿಬ್ಬಂದಿ ಮತ್ತು ಪೌರಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,
ತಹಸೀಲ್ದಾರ್, ಎಲ್ಲ ಸಿಬ್ಬಂದಿಗಳು ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವಿದೆ..
ಆದರೆ ಇಡೀ ದೇಶವೇ ಲಾಕ್ ಡೌನ್ ಇರುವಾಗ ರಾಜ್ಯ ಸರಕಾರವು ಕೂಡ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿಲ್ಲ. ಹೀಗಿರುವಾಗ ಅಧಿಕಾರಿಗಳು ಏನೂ ಮಾಡಬೇಕು. ಅಧಿಕಾರಿಗಳು ಕೆಲಸ ಬಿಟ್ಟು ಮನೆಗೂ ಹೋಗುವ ಹಾಗಿಲ್ಲ. ಇಂತಹ ಸಮಯದಲ್ಲಿ ಕೆ ಎಮ್ ಎಪ್ ಅಧ್ಯಕ್ಷರಾದ ಭಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗ ದಿ. ಮೆಥೋಡಿಸ್ಟ್ ಚರ್ಚ್ ಹಾಗೂ ಎಮ್ ವಾಯ್ ಎಫ್ ವತಿಯಿಂದ ಪುನರುತ್ಥಾನ ಹಬ್ಬದ ನಿಮಿತ್ಯವಾಗಿ. ಕೊರೋನಾ ಹಿನ್ನೆಲೆ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಬೆಳ್ಳಿಗೆ ಮತ್ತು ಮಧ್ಯಾಹ್ನ ಉಪಹಾರಕ್ಕೆ ವ್ಯವಸ್ಥೆ ಮಾಡಿದರು.
ಮಧ್ಯಾಹ್ನ ಊಟದ ಸಮಯದಲ್ಲಿ ಬಾಲಚಂದ್ರ ಜಾರಕಿಹೊಳಿ ಅಪ್ತ ಸಹಾಯಕ ಶ್ರೀ ದಾಸಪ್ಪಣ್ಣಾ ನಾಯ್ಕ, ಮೂಡಲಗಿ ತಾಲೂಕಾ ದಂಡಾಧಿಕಾರಿ ಡಿ ಜೆ ಮಹಾತ, ಮೂಡಲಗಿ ಠಾಣೆಯ ಸಿಪಿಐ ವೆಂಕಟೇಶ್ ಮೂರನಾಳ, ಪಿಎಸ್ಐ ಮಲ್ಲಿಕಾರ್ಜುನ್ ಸಿಂಧೂರ್ ಇವರು ಈ ಸಾಮಾಜಿಕ ಸೇವೆ ಕಂಡು ತಾವೆ ಎಲ್ಲ ಅಧಿಕಾರಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ, ಸಿಬಂದಿಗಳಿಗೆ ಊನ ಬಡಿಸುವ ಮೂಲಕ ಚಾಲನೆ ನೀಡಿದರು. ಹಾಗೇ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ!! ಭಾರತಿ ಕೊನಿ, ಹಾಗೂ ಸಿಬ್ಬಂದಿಗಳು ಕೂಡ ಆಶಾ ಕಾರ್ಯಕರ್ತೆರಿಗೆ ಊಟ ಬಡಿಸಿದರು.
ಈ ಸಂದರ್ಭದಲ್ಲಿ ಮೆಥೋಡಿಸ್ಟ್ ಚರ್ಚ ಸಭಾಪಾಲಕರಾದ ರೆ. ಡ್ಯಾನಿಯಲ್ ಬಾಬು ಹಾಗೂ ಎಮ್ ವಾಯ್ ಎಪ್ ಸದಸ್ಯರು ಮತ್ತು ಸಮುದಾಯದ ಹೀರಿಯರುಗಳಾದ ಮರೆಪ್ಪ ಮರೆಪ್ಪಗೋಳ, ರವೀಂದ್ರ ಸಣ್ಣಕ್ಕಿ, ವಿಜಯ ಮೂಡಲಗಿ, ರಮೇಶ ಸಣ್ಷಕ್ಕಿ, ಯಶ್ವಂತ ಮೇತ್ರಿ, ಹಣಮಂತ ಹವಳೆವಗೋಳ, ರಾಜು ಪರಸನ್ನವರ, ಶಾಬು ಸಣ್ಣಕ್ಕಿ, ಎಡ್ವಿನ್ ಪರಸನ್ನವರ, ಪಭ್ರಾಕರ ಬಂಗೆನ್ನವರ, ವಿಲಾಸ ಸಣ್ಣಕ್ಕಿ, ಅಶೋಕ ಮರೆನ್ನವರ,
ಈರಪ್ಪ ಡವಳೇಶ್ವರ, ಪುರಸಭೆಯ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರು ಉಸ್ಥಿತರಿದ್ದರು.