ನಾಳೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ
ಮೂಡಲಗಿ ಸಮೀಪದ ಮುನ್ಯಾಳ ಗ್ರಾಮದ ಸ್ವಾಮಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಂದು 6:00 ಗಂಟೆಗೆ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ 7ನೇ ವಗ೯ದ ವಿದ್ಯಾರ್ಥಿಗಳ ಬಿಳ್ಕೊಡಿಗೆ , 1 ನೇತರಗತಿಯ ಮಕ್ಕಳ ಸ್ವಾಗತ (ದಾಖಲಾತಿ ) ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ
ಕಾರ್ಯಕ್ರಮದ ದಿವ್ಯಸಾನಿಧ್ಯ ಮುರುಘರಾಜೇಂದ್ರ ಮಹಾಸ್ವಾಮಿಜಿಗಳು ಶ್ರೀ ಶಿವಯೋಗೀಶ್ವರ ಮಠ ಮುನ್ಯಾಳ,
ಎಸ್ಡಿಎಂಸಿ ಅಧ್ಯಕ್ಷ ಬಸಯ್ಯ ಹಿರೇಮಠ್
ಅಧ್ಯಕ್ಷತೆ ವಹಿಸುವರು ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ವಸಂತಿ ತೇರದಾಳ
ತಾಲೂಕು ಪಂಚಾಯಿತಿ ಸದಸ್ಯ ಹಣಮಂತ ತೇರದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಬಸು ಜುಂಜರವಾಡ ಮತ್ತು
ತಾಲೂಕು ದಂಡಾಧಿಕಾರಿ ಡಿ ಜೆ ಮಹಾತ್ , ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಭಾಗವಹಿಸುವರು ಹಾಗೂ ರಾತ್ರಿ 8 ಗಂಟೆಗೆ ಮಕ್ಕಳ ಸಾಂಸ್ಕೃತಿಕ ಕಾಯ೯ಕ್ರಮ ಜರಗುವದು ಎಂದು ಪ್ರಧಾನ ಗುರುಗಳಾದ ಗಜಾನನ ಪತ್ತಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಈಶ್ವರ ಢವಳೇಶ್ವರ