Breaking News
Home / ಬೆಳಗಾವಿ / ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಲ್ಯಾಪ್ ಟ್ಯಾಪ್ಗಳನ್ನು ನೀಡಲಾಗುತ್ತಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿಯ ಎನ್ ಎಸ್ ಎಫ್ ಕಾರ್ಯಾಲಯದಲ್ಲಿ ಅರಭಾವಿ ಪಟ್ಟಣ ಪಂಚಾಯತ್ ಸಮಿತಿಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್ ಮತ್ತು ಇಂಜನಿಯರಿಂಗ್ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ೪ ರ ಹಂತದಲ್ಲಿ ಈ ಪಟ್ಟಣ ಪಂಚಾಯತ್ ವ್ಯಾಪ್ತಿಯ ೬ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ಗಳನ್ನು ವಿತರಿಸಲಾಗುತ್ತಿದೆ. ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬಗಳ ವಿಧ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗುತ್ತಿದೆ. ಇಂಜನಿಯರಿಂಗ್ ಮತ್ತು ಮೆಡಿಕಲ್ ಕಲಿಯುತ್ತಿರುವ ಮಕ್ಕಳಿಗೆ ಅನುಕೂಲವಾಗಲಿದೆ. ಬಡ ಕುಟುಂಬಗಳನ್ನು ಉತ್ತೇಜಿಸಲು ಸರಕಾರವು ಇಂಥ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಹೇಳಿದರು.
ಅರಭಾವಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್. ಸಿ/ ಎಸ್ಟಿ ಕುಟುಂಬಗಳ ಫಲಾನುಭವಿಗಳಿಗೆ ಸೋಲಾರ್ ವಿತರಿಸುವ ಕಾರ್ಯವು ಸಹ ನಡೆಯುತ್ತಿದೆ. ಸುಮಾರು ೨೧ ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಕೆ ಮಾಡುತ್ತಿದ್ದು, ಇದರಲ್ಲಿ ೮೬ ಎಸ್ಸಿ ಮತ್ತು ೨೨ ಎಸ್ಟಿ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಫಲಾನುಭವಿಗಳಿಗೆ ಈ ಯೋಜನೆಯು ತಲುಪಲಿದೆ ಎಂದು ಅವರು ತಿಳಿಸಿದರು.

*ಲ್ಯಾಪ್ ಟ್ಯಾಪ್ ವಿತರಣೆ * ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್ ಮತ್ತು ಇಂಜನಿಯರಿಂಗ್ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಗಳನ್ನು ವಿತರಿಸಿದರು.

ಅರುಣ್ ಸುರೇಶ ಗಾಡಿವಡ್ಡರ್, ಸೌಭಾಗ್ಯ ಲಕ್ಕಪ್ಪ ಮಾದರ, ಸೌಂದರ್ಯ ರಾಮಪ್ಪ ಪೂಜೇರಿ, ಕೆದಾರ್ಲಿಂಗ್ ಮಾರುತಿ ಮಾಳಿ, ವಿಶಾಲ್ ವಿಠ್ಠಲ್ ಸಮಯದವರ, ಮಹಾದೇವ ಕಡಲಗಿ ಅವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಟ್ಟಣ ಪಂಚಾಯತ್ ಸಮಿತಿಯಿಂದ ಲ್ಯಾಪ್ ಟ್ಯಾಪ್ ವಿತರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಟ್ಟಣ ಪಂಚಾಯತ್ ಸಮಿತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ನಿಂಗಪ್ಪ ಇಳಿಗೇರಿ, ಅಡಿವೆಪ್ಪ ಬಿಲಕುಂದಿ, ಸುರೇಶ್ ದೊಡ್ಡಲಿಂಗಣ್ಣವರ, ಬಾಳೇಶ್ ನಾನಪ್ಪಗೊಳ, ರಮೇಶ್ ಸಂಪಗಾವಿ, ಹಣಮಂತ ಕೇಂದಾರಿ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಕರೆಪ್ಪ ಗಡ್ಡಿ ಸೇರಿದಂತೆ ಅನೇಕರು ಉಪ್ಥಿತರಿದ್ದರು.

 


Spread the love

About inmudalgi

Check Also

ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ

Spread the loveಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ ‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ