Breaking News
Home / ಬೆಳಗಾವಿ / ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕೊಲ್ಲೂರು: ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಉಡುಪಿ ಜಿಲ್ಲೆಗಳ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಶನಿವಾರದಂದು ಮುಂಜಾನೆ ಉಡುಪಿ ಜಿಲ್ಲೆಯ ಐತಿಹಾಸಿಕ, ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದರು.

ಮೂಕಾಂಬಿಕೆಯ ದರ್ಶನ ಪಡೆದುಕೊಂಡ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಅರ್ಚಕರು ಸತ್ಕರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರಾಂತ ದೇವಸ್ಥಾನಗಳಿವೆ. ಪ್ರತಿ ವರ್ಷವೂ ಸಮಯ ಸಿಕ್ಕಾಗಲೆಲ್ಲಾ ತಮ್ಮ ಸ್ನೇಹಿತರೊಂದಿಗೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೆಟ್ಟಿ ಕೊಟ್ಟು ದೇವರ ದರ್ಶನ ಪಡೆದುಕೊಳ್ಳುತ್ತೇನೆ. ಇದರಿಂದ ಮನಸಿಗೆ ನೆಮ್ಮದೀ ಆಗುತ್ತದೆ. ದೇವರ ದರ್ಶನ ಭಾಗ್ಯದಿಂದ ಸಕಲರ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿ ಸುಲಭವಾಗುತ್ತದೆ. ನಮಗೆಲ್ಲ ದೇವರ ಬಗ್ಗೆ ನಂಬಿಕೆ ಜಾಸ್ತಿ ಇದೆ. ಹೀಗಾಗಿ ನಮಗೆ ಎಂಥ ಸಂದರ್ಭ ಇದ್ದರೂ ದೇವರ ದರ್ಶನ ಪಡ್ಕೋತೀವಿ ಎಂದು ಹೇಳಿದರು.
ಬಾಲಚಂದ್ರ ಜಾರಕಿಹೊಳಿ ಜತೆಯಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ, ವಿಕ್ರಮ ಅಂಗಡಿ, ಲೆಕ್ಕ ಪರಿಶೋಧಕ ಸೈದಪ್ಪ  ಗದಾಡಿ, ಅಪ್ಪಾಸಾಬ ಅವತಾಡೇ , ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಕಲ್ಯಾಣಶೆಟ್ಟಿ, ಮನಿಷ ಜಯಶೀಲ್ ಶೆಟ್ಟಿ, ರಾಜು ದರಗಶೆಟ್ಟಿ, ಅಶೋಕ ಕಪ್ಪಲಗುದ್ದಿ, ರಾಜು ಅಂಡಗಿ, ನಿರಂಜನ ಬನ್ನಿ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ