*ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ದೀನ ದಯಾಳ್ ಉಪಾಧ್ಯೆ ಅವರ ತ್ಯಾಗದಿಂದ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ ಬಿಜೆಪಿ- ಲಕ್ಕಪ್ಪ ಲೋಕೂರಿ*
ಗೋಕಾಕ್ : ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ್ ದಯಾಳ್ ಉಪಾಧ್ಯೆ ಅವರ ತ್ಯಾಗದಿಂದ ಬಿಜೆಪಿಯು ಇಂದು ದೇಶದ ಮೂಲೆ ಮೂಲೆಗಳಲ್ಲಿ ಆವರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಲೋಕೂರಿ ಹೇಳಿದರು.
ಭಾನುವಾರದಂದು ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲವು ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಯಕರ್ತರ ಬಲದಿಂದ ಪಕ್ಷವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ದೂರದೃಷ್ಟಿಯ ಫಲವಾಗಿ ಇಡೀ ದೇಶದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಹಿರಿಯರ ತ್ಯಾಗ, ಬಲಿದಾನದಿಂದ ನಮ್ಮ ಬಿಜೆಪಿಯು ಜಗತ್ತಿನಲ್ಲಿ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ಏಕಮೇವ ಪಕ್ಷವಾಗಿದೆ ಎಂದು ಅವರು ತಿಳಿಸಿದರು.
ಭಾರತಾಂಬೆ, ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ್ ದಯಾಳ್ ಉಪಾಧ್ಯೆ ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರ ಕಚೇರಿಯ ಸಿ ಪಿ ಯಕ್ಸಂಬಿ, ಅಬ್ದುಲ ಮಿರ್ಜಾನಾಯಿಕ,
ಬಸಗೌಡ ಪಾಟೀಲ, ವೆಂಕನಗೌಡ ಪಾಟೀಲ,
ಬಾಳಪ್ಪ ಗೌಡರ, ಬಸವರಾಜ್ ಗಂಗರೆಡ್ಡಿ, ಪಾಂಡುರಂಗ ಪಾಟೀಲ್, ರಾಜು ಕಸ್ತೂರಿ, ಅಲ್ಲಪ್ಪ ಕಂಕಣವಾಡಿ, ರಮೇಶ
ಬೀರನಗಡ್ಡಿ, ಮರೆಪ್ಪ ಮರೆಪ್ಪಗೊಳ, ನೀಲಪ್ಪ ಕೇವಟಿ, ಬಸು ನಾಯಿಕ, ಮಂಜುನಾಥ ಗಂಗರೆಡ್ಡಿ, ಕಲ್ಲಯ್ಯ ವಡೇರ, ಪ್ರಮೋದ ನುಗ್ಗಾನಟ್ಟಿ, ಯಮನಪ್ಪ ಮೇತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.