Breaking News
Home / ಬೆಳಗಾವಿ / ಅಂಗವಿಕಲರಿಗೆ ಮೋಟಾರ್ ಸೈಕಲ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಅಂಗವಿಕಲರಿಗೆ ಮೋಟಾರ್ ಸೈಕಲ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ- ಅಂಗವಿಕಲರಿಗೆ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂಥ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಅರಭಾವಿ ಶಾಸಕ ಮತ್ತು ಬೇಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗುರುವಾರದಂದು ನಗರದ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ (ಹೀರೋ ಸ್ಕೂಟಿ) ಗಳನ್ನು ವಿತರಿಸಿ ಅವರು ಮಾತನಾಡಿದರು.
ಅಂಗವಿಕಲರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸ್ವಾವಲಂಬಿ ಬದುಕು ಸಾಗಿಸಬೇಕು. ಅದಕ್ಕಾಗಿ ಸರಕಾರವು ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಪಡೆಯಬೇಕು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳುತ್ತದೆ. ಈ ದಿಸೆಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ನಾನು ಬದ್ಧನಿರುವುದಾಗಿ ಅವರು ಹೇಳಿದರು.
ಆಧಾರ್ ಯೋಜನೆ, ವಿದ್ಯಾರ್ಥಿ ವೇತನ, ಲ್ಯಾಪ್ಟಾಪ್, ಹೊಲಿಗೆ ಯಂತ್ರ, ಬ್ಯಾಟರಿ ಚಾಲಿತ ವ್ಹಿಲ ಚೇರ್ ಮುಂತಾದವುಗಳನ್ನು ಇಲಾಖೆಯವರನ್ನು ಸಂಪರ್ಕಿಸಿ ಯೋಜನೆಗಳನ್ನು ನಿಮ್ಮದಾಗಿಸಿಕೊಳ್ಳುವಂತೆ ಅವರು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸನ್ ೨೦೨೩ – ೨೪ ನೆ ಸಾಲಿನ ೨೦ ಅಂಗವಿಕಲ ಫಲಾನುಭವಿಗಳಿಗೆ ದ್ವಿ ಚಕ್ರ ವಾಹನಗಳನ್ನು ವಿತರಿಸಿದರು.
ಗೋಕಾಕ ತಹಶೀಲ್ದಾರ ಮೋಹನ ಭಸ್ಮೆ, ಮೂಡಲಗಿ ತಹಶೀಲ್ದಾರ ಎಸ್. ಎ. ಬಬಲಿ, ಟಿಪಿ ಇಓ ಗಳಾದ ಪರಶುರಾಮ ಗಸ್ತಿ, ಚಿನ್ನಪ್ಪಗೌಡರಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ವಿಠ್ಠಲ ಸವದತ್ತಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ್ ನಾಯಿಕ, ವೆಂಕನಗೌಡ ಪಾಟೀಲ,ಸಂಗಪ್ಪ ಸೂರನ್ನವರ, ಭರಮಪ್ಪ ಪಾಶ್ಚಪೂರ, ಶಮ್ಮು ಖೈರದೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿ ಇದೆ”- ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ

Spread the love ಮೂಡಲಗಿ: ‘ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿಯು ಮುಖ್ಯವಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ