Breaking News
Home / ಬೆಳಗಾವಿ / ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು -ಪ್ರಾಚಾರ್ಯ ವಾಯ್.ಬಿ. ಕಳ್ಳಿಗುದ್ದಿ.

ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು -ಪ್ರಾಚಾರ್ಯ ವಾಯ್.ಬಿ. ಕಳ್ಳಿಗುದ್ದಿ.

Spread the love

 

ಮೂಡಲಗಿ : ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು ಸಾಧನೆಗೆ ಗುರುಗಳ ಸ್ಪೂರ್ತಿಯ ಜೊತೆಗೆ ಪ್ರಯತ್ನ ಮತ್ತು ದೂರದೃಷ್ಟಿಯ ದೃಢತೆ ಅಳವಡಿಸಿಕೊಂಡಾಗ ಸಾಧನೆಗೆ ಆತ್ಮಬಲ ಬರುತ್ತದೆ ಫಲಿತಾಂಶ ಮುಖ್ಯವಲ್ಲ ಸಾಧಕನಿಗೆ ಸಾಧಿಸುವ ಛಲ ಮುಖ್ಯವಾಗಿದೆ ಭಾರತ ಸರಕಾರದ ಅತ್ಯುನ್ನತ ಹುದ್ದೆಗಳನ್ನು ಹೊಂದಬೇಕಾದರೆ ನಿರಂತರ ಪ್ರಯತ್ನದ ಜೊತೆಗೆ ಜಗತ್ತಿನ ವಾಸ್ತವಿಕ ಜ್ಞಾನಕ್ಕೆ ಆಧ್ಯತೆ ನೀಡಬೇಕೆಂದು ಹಳ್ಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಾಯ್. ಬಿ. ಕಳ್ಳಿಗುದ್ದಿ ಹೇಳಿದರು.
ಪಟ್ಟಣದ ಆರ್‍ಡಿಎಸ್ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಪದವಿ ಪ್ರಮಾಣ ಪತ್ರದ ಜೊತೆಗೆ ಸಾಧನೆಯ ಉನ್ನತ ಹುದ್ದೆಗಳನ್ನು ಅಲಂಕರಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದರು.
ಅತಿಥಿ ಶಿವಾಪೂರ (ಹ) ದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಯ ಶಿವಲಿಂಗ ಅರ್ಗಿ ಮಾತನಾಡಿ ವಿದ್ಯಾರ್ಥಿಗಳ ಜೀವನಕ್ಕೆ ಜ್ಞಾನದ ಪದವಿ ಮುಖ್ಯವಾದಂತೆ ಬದುಕನ್ನು ರೂಪಿಸುವ ವೃತ್ತಿ ಮತ್ತು ಹಣ ಸಂಪಾದನೆಯಲ್ಲಿ ವಿಶೇಷ ಹಾಗೂ ವಿಶಿಷ್ಟವಾದ ನೈಪುಣ್ಯತೆಗಳನ್ನು ರೂಪಿಸಿಕೊಂಡಾಗ ಸಾದಕರಾಗಿ ಸಮಾಜದಲ್ಲಿ ಗುರ್ತಿಸಿಕೊಳ್ಳಬಹುದು ಎಂದರು.
ಸುಣದೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸುರೇಶ ಲೆಂಕಪ್ಪನವರ ಮಾತನಾಡಿ ವಿದ್ಯಾರ್ಥಿಗಳ ಬದುಕು ಸೂರ್ಯ ಚಂದ್ರರ ಹಾಗೇ ಅಮೃತಕ್ಕೆ ಸಮಾನವಾಗಬೇಕಾದರೆ ಶೃದ್ದೆ, ನಿಷ್ಠೆ, ಪ್ರಾಮಾಣಿಕತೆ ಜೊತೆಗೆ ಪ್ರಯತ್ನ ಸೇರಬೇಕು ಅಂದಾಗ ಅಂದುಕೊಂಡದ್ದನ್ನು ಸಾಧಿಸಬಹುದು ಎಂದರು.
ಹಾರೂಗೇರಿಯ ಶ್ರೀ ಸಿದ್ದೇಶ್ವರ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಟಿ.ಎಸ್.ಒಂಟಗೋಡಿ ಮಾತನಾಡಿ ಬುದ್ದ ಬಸವ ಅಂಬೇಡ್ಕರರ ಜೀವನ ಇಂದಿನ ಸಮಾಜಕ್ಕೆ ಹೇಗೆ ಸ್ಪೂರ್ತಿಯನ್ನು ನೀಡುತ್ತದೆಯೋ ಹಾಗೇ ಇಂದಿನ ವಿದ್ಯಾರ್ಥಿಗಳು ಸಹಿತ ಆದರ್ಶ ಹಾಗೂ ಪ್ರಬುದ್ದ ಸಮಾಜದ ಅರಿವು ಹೊಂದಿ ಸಾದಕರಾಗಬೇಕೆಂದರು.
ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಬದುಕನ್ನು ಸರಿಯಾದ ಮಾರ್ಗದಲ್ಲಿ ಬಳಿಸಿಕೊಂಡು ಸಾದಕರ ಸಾಲಿನಲ್ಲಿ ಗುರ್ತಿಸಿಕೊಳ್ಳುವುದು ಅವಶ್ಯಕವಿದೆ ಎಂದರು.
ಇದೆ ಸಂದರ್ಭದಲ್ಲಿ ಕ್ರೀಡೆ ಸಾಂಸ್ಕøತಿಕ ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಸಾಧಕರನ್ನು ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಮಂಜುನಾಥ ರೇಳೆಕರ ಹಾಗೂ ಪ್ರಾಚಾರ್ಯ ಸತೀಶ ಗೋಟೂರೆ, ಶಿವಾನಂದ ಸತ್ತಿಗೇರಿ ಹಾಗೂ ಸಂಗಮೇಶ ಹಳ್ಳೂರ ಹಾಜರಿದ್ದರು
ಉಪನ್ಯಾಸಕರಾದ ಸಂಜೀವ ಮಂಟೂರ, ನಂದಾ ತಳವಾರ ನಿರೂಪಿಸಿದರು ಉಪನ್ಯಾಸಕ ಎಸ್.ಎನ್. ಕುಂಬಾರ ಸ್ವಾಗತಿಸಿದರು ಉಪನ್ಯಾಸಕ ಡಾ. ಪ್ರಶಾಂತ ಮಾವರಕರ ವಂದಿಸಿದರು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ