ಹೋಳಿ ಹಬ್ಬ ಶಾಂತಿಯುತವಾಗಿ ಆಚರಿಸಿ : ಡಿ ಟಿ ಪ್ರಭು*
ಮೂಡಲಗಿ ಮಾಚ೯ 06 :
ಕೆಟ್ಟ ಆಲೋಚನೆಗಳನ್ನು ಸುಟ್ಟುಹಾಕಿ, ಒಳ್ಳೆಯದನ್ನು ಸ್ವೀಕರಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕೆಂಬುದೇ ಹೋಳಿ ಹಬ್ಬದ ಅರ್ಥ ಎಂದು ಡಿ ವಾಯ್ ಎಸ್ ಪಿ ಡಿ ಟಿ ಪ್ರಭು ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ರಾಸಾಯನಿಕ ಬಣ್ಣಗಳನ್ನು ಬಳಸಬಾರದು, ಪ್ರಯಾಣಿಕರಿಗೆ ಬಣ್ಣ ಎರಚಬಾರದು ಎಂದರು. ಕೋಮು ಭಾವನೆ ಕೆರಳಿಸುವ ವ್ಯಕ್ತಿಗಳ ಮೇಲೆ, ಮದ್ಯ ಸೇವಿಸಿ ಬೈಕ್ ಸವಾರಿ ಮಾಡುವವರ ಮೇಲೆ ಕಠಿಣ ಕ್ರಮ ಕೈಕೊಳ್ಳಲಾಗುವುದು.
ಎಲ್ಲರೂ ಶಾಂತಿಯಿಂದ ಹೋಳಿ ಹಬ್ಬ ಆಚರಿಸಿ ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದರು.
ಈ ನಗರವು ಶಾಂತಿಯತೆಗೆ ಹೆಸರಾದಂತಹ ನಗರವಾಗಿದೆ ಇಲ್ಲಿ ಯಾವುದೇ ಕೋಮು ದ್ವೇಷಗಳಾಗಲಿ ಜಾತಿ ವೈಷಮ್ಯ ಇಲ್ಲಿಯ ಜನರ ಮನಸಲ್ಲಿ ಇರುವದಿಲ್ಲಾ ಎಂದು ಡಿ ವಾಯ್ ಎಸ್ ಪಿ ಡಿ ಟಿ ಪ್ರಭು ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೊಳಿ ಹಬ್ಬದ ನಿಮಿತ್ಯ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲರೂ ಒಟ್ಟುಗೂಡಿ ಶಾಂತಿಯುತವಾಗಿ ಹಬ್ಬವನ್ನು ಮಾಡಬೇಕು ಹಾಗೂ ಮನುಷ್ಯರಿಗೆ ಹಾನಿಯಾಗುವಂತಹ ಬಣ್ಣವನ್ನು ಉಪಯೋಗಿಸಬಾರದು ಎಂದರು.
ಶಾಂತಿ ಸಭೆಯಲ್ಲಿ ಮೂಡಲಗಿ ಸಿ ಪಿ ಆಯ್ ವೆಂಕಟೇಶ ಮುರನಾಳ , ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ಹಾಗೂ ವಿವಿಧ ಸಂಘಟನೆಯ ಕಾಯ೯ಕತ೯ರು ಸೇರಿದಂತೆ ಅನೇಕ ಮುಖಂಡರು ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು
ವರದಿ : ಈಶ್ವರ ಢವಳೇಶ್ವರ