inmudalgi
ಏಪ್ರಿಲ್ 25, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಮಹಾನ್ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸಮಾಜ ಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಹೃದಯದಲ್ಲಿ ನೆಲೆಸಿರುವ ಹೃದಯವಂತರು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಬಣ್ಣಿಸಿದರು. ಶನಿವಾರದಂದು ಪಟ್ಟಣದ ಸರ್ವ ಕುಟುಂಬಗಳಿಗೆ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಕಿಟ್ಟ್ …
Read More »
inmudalgi
ಏಪ್ರಿಲ್ 25, 2020 ತಾಲ್ಲೂಕು, ಬೆಳಗಾವಿ
ಮಹಾಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಮತ್ತೆ ಇಂದು ಹಿರೇಬಾಗೇವಾಡಿಯಲ್ಲಿ ಹೊಸದಾಗಿ ಆರು ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹಾಫ್ ಸೆಂಚೂರಿ ಗಡಿ ದಾಟಿದ್ದು. ಕುಂದಾನಗರಿ ಜನರನ್ನು ಬೆಚ್ಚಿ ಬೀಳಿಸಿದೆ. ಹೌದು ಇಷ್ಟು ದಿನ ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ ತಬ್ಲೀಕಿಗಳಿಗೆ ಮಾತ್ರ ಸಿಮೀಮತವಾಗಿದ್ದ ಕೊರೊನಾ ವೈರಸ್ ಇಂದು ಹಿರೇಬಾಗೇವಾಡಿ ಗ್ರಾಮದ ನಿವೃತ್ತ ಪೊಲೀಸ್ ಪೇದೆ ಹಾಗೂ ಅಂಗನವಾಡಿ ಕಾರ್ಯಕರ್ತೆ …
Read More »
inmudalgi
ಏಪ್ರಿಲ್ 24, 2020 ತಾಲ್ಲೂಕು, ಬೆಳಗಾವಿ
ಹಳ್ಳೂರ ; ಕೊರೋನಾ ವೈರಸ್ ಇಡೀ ದೇಶದಾದ್ಯಾoತ ಮರಣ ಮೃದಂಗ ಭಾರಿಸುತ್ತಿರುವ ಹಿನ್ನೆಲೆ ಇಡೀ ದೇಶದ ತುಂಬೆಲ್ಲಾ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದೆ. ಅದರಿಂದ ಇದೆ ತಿಂಗಳು 26/04/2020 ರಂದು ನಡೆಯಬೇಕಾಗಿದ್ದ ಬಸವ ಜಯಂತಿಯ ಆಚರಣೆಯನ್ನು ಹಾಗೂ ಬಸವೇಶ್ವರ ಜಾತ್ರೆಯನ್ನು ರದ್ದುಪಡಿಸಾಲಾಗಿದೆ ಎಂದು ಬಸವಶ್ರೀ ಸೇವಾ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಬೋಳನ್ನವರ ಹೇಳಿದರು. ಗ್ರಾಮದ ಬಸವ ನಗರ ತೋಟದ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಕರೆಯಲಾದ ಸಭೆಯಲ್ಲಿ …
Read More »
inmudalgi
ಏಪ್ರಿಲ್ 24, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 463ಕ್ಕೇರಿದೆ. ಇಂದು ಒಂದೇ ದಿನ 18 ಜನರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯ ರಾಯಬಾಗದ ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಹೊಸದಾಗಿ ಸೋಂಕು ಬಾಧಿಸಿರುವವರಲ್ಲಿ ಒಬ್ಬರು 10 ವರ್ಷ ವಯಸ್ಸಿನ ಬಾಲಕಿಯಾಗಿದ್ದರೆ, ಇನ್ನೊಬ್ಬ 15 ವರ್ಷದ ಯುವಕನಾಗಿದ್ದಾನೆ. ಇಬ್ಬರೂ ರಾಯಬಾಗ ತಾಲೂಕು ಕುಡಚಿಯವರು. ಬೆಳಗಾವಿಯಲ್ಲೀಗ ಸೋಂಕಿತರ ಸಂಖ್ಯೆ 45ಕ್ಕೇರಿದೆ.
Read More »
inmudalgi
ಏಪ್ರಿಲ್ 23, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿಯಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 443ಕ್ಕೇರಿದೆ. ಬೆಂಗಳೂರಿನಲ್ಲಿ ಹೊಸದಾಗಿ 9 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 16 ಜನರಿಗೆ ಸೋಂಕು ಪತ್ತೆಯಾಗಿದೆ. ನಿನ್ನೆ 427 ಜನರಿಗೆ ಸೋಂಕು ತಗುಲಿತ್ತು. ಬೆಂಗಳೂರಿನಲ್ಲಿ ಬಿಹಾರ ಮೂಲದ ಕಾರ್ಮಿಕನಿಂದ 9 ಜನರಿಗೆ ಸೋಂಕು ತಗುಲಿದೆ. ವಿಜಯಪುರ, ಮಂಡ್ಯ ಹಾಗೂ ಧಾರವಾಡದ ತಲಾ ಇಬ್ಬರಿಗೆ ಹಾಗೂ ದಕ್ಷಿಣಕನ್ನಡದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Read More »
inmudalgi
ಏಪ್ರಿಲ್ 22, 2020 ತಾಲ್ಲೂಕು, ಬೆಳಗಾವಿ
ಮನೆಯಲ್ಲಿ ಇರುವುದು ಕೊರೊನಾಕ್ಕೆ ನಿಜವಾದ ಮದ್ದು’ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮೂಡಲಗಿ: ‘ಕೊರೊನಾ ಸೋಂಕು ಹರಡದಂತೆ ಸಮಾಜದ ಎಲ್ಲ ಜನರು ಬದ್ದರಾಗಿರಬೇಕು. ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿ ಇರುವುದು ಕೊರೊನಾಕ್ಕೆ ನಿಜವಾದ ಮದ್ದು’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಮೂಡಲಗಿಯಲ್ಲಿ ಬುಧವಾರ ತಾಲ್ಲೂಕು ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೂಡಲಗಿ ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಆಶಾ ಕಾರ್ಯಕರ್ತರ ಕಾರ್ಯವು …
Read More »
inmudalgi
ಏಪ್ರಿಲ್ 22, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಭಾನುವಾರ ದೇಹ ತ್ಯಾಗ ಮಾಡಿರುವ ಇಲ್ಲಿಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿಗಳ ಕುಟಂಬದವರಿಗೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಸಂತಾಪ ಸಲ್ಲಿಸಿದರು. ಬುಧವಾರ ಶಿವಬೋಧರಂಗ ಮಠಕ್ಕೆ ಭೇಟಿ ನೀಡಿ ಅಮೃತಬೋಧ ಸ್ವಾಮೀಜಿ ಮತ್ತು ಶ್ರೀಧರ ಸ್ವಾಮೀಜಿಗಳಿಗೆ ಸಾಂತ್ವನ ತಿಳಿಸಿ ಮಾತನಾಡಿದ ಅವರು ‘ಪೂಜ್ಯರು ಮೂಡಲಗಿ ಭಾಗದ ಆಧ್ಯಾತ್ಮಿಕ ಶಕ್ತಿಯಾಗಿದ್ದರು. ಪೂಜ್ಯರ ಅಗಲಿಕೆಯಿಂದ ನಾಡಿನ ಭಕ್ತರಿಗೆ ಅಪಾರ ನಷ್ಟವಾಗಿದೆ’ ಎಂದರು. ಆರ್.ಪಿ. ಸೋನವಾಲಕರ, ಮಲ್ಲಿಕಾರ್ಜುನ ಕಬ್ಬೂರ, …
Read More »
inmudalgi
ಏಪ್ರಿಲ್ 22, 2020 ತಾಲ್ಲೂಕು, ಬೆಳಗಾವಿ
ಕುಲಗೋಡ ಕರೋನಾ ವಾರಿಯರ್ಸ ಗೆ ಪುಷ್ಪವೃಷ್ಠಿ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಕರೋನಾ ವಾರಿಯರ್ಸಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರತಿ ಮಾಡಿ,ಹೂ ಗುಚ್ಚ ನೀಡಿ, ಕರೋನಾ ಜಾಗೃತಿ ಪಥ ಸಂಚಲನ ಕಾರ್ಯಕ್ರಮಕ್ಕೆ ಗ್ರಾಮದ ಜನತೆ ಹೂ ಮಳೆ ಸೂರಿಸಿ ಅಭಿನಂದನೆ ಸಲ್ಲಿಸಿದರು. ಗ್ರಾಮದಲ್ಲಿ ಕೊರೊನಾ ಸೊಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಪೋಲಿಸ್, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾಕಾರ್ಯಕರ್ತರು ಹಾಗೂ ಹೆಸ್ಕಾಂ ಸಿಬ್ಬಂದಿಗೆ ಮಂಗಳವಾರ ಸಂಜೆ ಪುಷ್ಪವೃಷ್ಠಿಗರೆದು ಗ್ರಾಮಸ್ಥರು ಧನ್ಯತೆಯನ್ನು ಸಲ್ಲಿಸಿದರು. …
Read More »
inmudalgi
ಏಪ್ರಿಲ್ 22, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿಯಲ್ಲಿಂದು ಹೊಸ ಪ್ರಕರಣ ಇಲ್ಲ; ರಾಜ್ಯದಲ್ಲಿ ಸಂಜೆ ಎರಡು ಪ್ರಕರಣಗಳು ಬೆಳಕಿಗೆ … ಬುಧವಾರ ಸಂಜೆಯ ಕರ್ನಾಟಕ ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೂ ಸೋಂಕಿತರಿರುವುದು ಧೃಡಪಟ್ಟಿಲ್ಲ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ427 ಕ್ಕೆ ಏರಿದೆ. ಮೈಸೂರು- ೨ ನಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮೈಸೂರು ಪ್ರಕರಣಗಳು ೮೮ ಕ್ಕೆ ಏರಿವೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 43 ಕೊರೋನಾ ಸೋಂಕು ತಗುಲಿದವರಿದ್ದು, ಇವರೆಲ್ಲರೂ …
Read More »
inmudalgi
ಏಪ್ರಿಲ್ 22, 2020 ತಾಲ್ಲೂಕು, ಬೆಳಗಾವಿ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7 ಹೆಚ್ಚಾಗಿದ್ದು, 425ಕ್ಕೇರಿದೆ. ಇದೀಗ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕಲಬುರ್ಗಿಯಲ್ಲಿ 5 ಮತ್ತು ಬೆಂಗಳೂರಿನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಯಾವುದೇ ಭಾಗದಲ್ಲಿ ಇಂದು ಸೋಂಕು ಪತ್ತೆಯಾಗಿಲ್ಲ. ಕಲಬುರ್ಗಿಯಲ್ಲಿ 4 ತಿಂಗಳ ಗಂಡು ಮಗುವಿಗೂ ಸೋಂಕು ಪತ್ತೆಯಾಗಿದೆ.
Read More »