inmudalgi
ಡಿಸೆಂಬರ್ 19, 2024 ಬೆಳಗಾವಿ, ರಾಜ್ಯ
ಮೂಡಲಗಿ: ‘ಅಯ್ಯಪ್ಪಸ್ವಾಮಿ ಮಾಲಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ದೇವರ ಮೇಲಿರುವ ಭಕ್ತಿಯಿಂದ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಪಟ್ಟಣದ ಅಯ್ಯಪ್ಪಸ್ವಾಮಿ ಸೇವಾ (ರವಿ ನೇಸುರು ಗುರುಸ್ವಾಮಿಯ ಸನ್ನಿಧಾನದ) ಸಮಿತಿಯವರು ಬಸವ ರಂಗಮಂಟಪದಲ್ಲಿ ಏರ್ಪಡಿಸಿದ್ದ 31ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅಗ್ನಿ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ನೆರವೇರಿಸುವ ಪೂಜೆಯಲ್ಲಿ ಭಾಗವಹಿಸುವುದು ಸಹ ಪುಣ್ಯದ ಕಾರ್ಯವಾಗಿದ್ದು, …
Read More »
inmudalgi
ಡಿಸೆಂಬರ್ 19, 2024 ಬೆಳಗಾವಿ, ರಾಜ್ಯ
ಡಿ.21 ರಂದು ಬೆಟಗೇರಿ ಮಾರುತಿ ದೇವರ ಕಾರ್ತಿಕೋತ್ಸವ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ.21 ರಂದು ನಡೆಯಲಿವೆ. ಡಿ.21 ರಂದು ಬೆಳಿಗ್ಗೆ 7ಗಂಟೆಗೆ ಇಲ್ಲಿಯ ಮಾರುತಿ ದೇವರ ಗದ್ದುಗೆಗೆ ಮಹಾಭಿಷೇಕ ಮಹಾಪೂಜೆ, ಎಲೆ ಪೂಜೆ ಕಾರ್ಯಕ್ರಮ, ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಣೆ, ಸಾಯಂಕಾಲ 6ಗಂಟೆಗೆ ಸ್ಥಳೀಯ ಕರಡಿ ಮಜಲು ಮೇಳ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, …
Read More »
inmudalgi
ಡಿಸೆಂಬರ್ 19, 2024 ಬೆಳಗಾವಿ, ರಾಜ್ಯ
ಬೆಟಗೇರಿ ವಿಪ್ರಾಗ್ರಾಕೃಎಸ್ ಸಂಘದ ಆಡಳಿತ ಮಂಡಳಿ ಚುನಾವಣೆ ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಎರಡು ಗುಂಪುಗಳ ಮಧ್ಯ ನೇರಾ ನೇರ ತುರುಸಿನಿಂದ ಡಿ.14ರಂದು ನಡೆದ ಚುನಾವಣೆಯಲ್ಲಿ ಎರಡು ಗುಂಪಿನ ಅಭ್ಯರ್ಥಿಗಳು ಸಮಬಲ ಸ್ಥಾನಗಳ ಜಯ ದಾಖಲಿಸಿದ್ದಾರೆ. ಈ ಸಲ ಚುನಾವಣೆಯಲ್ಲಿ ಸ್ಥಳೀಯ ರಾಜಕೀಯ ಪ್ರಭಾವಿ ಮುಖಂಡರ ಬೆಂಬಲಿತ ಎರಡು ಗುಂಪುಗಳ …
Read More »
inmudalgi
ಡಿಸೆಂಬರ್ 19, 2024 ಬೆಳಗಾವಿ, ರಾಜ್ಯ
ಡಿ.20ರಂದು ಬೆಟಗೇರಿ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಮಂಗಳವಾರ ಡಿ.20 ರಂದು ನಡೆಯಲಿದೆ. ಡಿ.20 ರಂದು ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶ್ರೀದೇವಿ ಶೃಂಗಾರಗೊಳಿಸುವ, ಉಡಿತುಂಬುವದು, ಪುರದೇವರ ವಿವಿಧ ಪಲ್ಲಕ್ಕಿಗಳ ಬರಮಾಡಿಕೊಳ್ಳುವದು, ಸಂಜೆ 6 ಗಂಟೆಗೆ ಪಲ್ಲಕ್ಕಿ ಉತ್ಸವ, ಪುರಜನರಿಂದ ಪೂಜೆ …
Read More »
inmudalgi
ಡಿಸೆಂಬರ್ 17, 2024 ಬೆಳಗಾವಿ, ರಾಜ್ಯ
‘ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ’ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 101ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಮುಖ್ಯ ಅತಿಥಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಅವರು ಮಾತನಾಡಿ ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನದಾಸೋಹ ಕಾರ್ಯವು ಶ್ಲಾಘನೀಯ ಕೆಲಸ ಮಾಡುತ್ತಲಿದೆ’ ಎಂದು ಹೇಳಿದರು. ಬಸವರಾಜ ಮತ್ತು …
Read More »
inmudalgi
ಡಿಸೆಂಬರ್ 17, 2024 ಬೆಳಗಾವಿ, ರಾಜ್ಯ
ಕುಲಗೋಡ: ಹಗಲು,ರಾತ್ರಿ, ಮಳೆಗಾಲದಲ್ಲಿ ಬಯಲು ಶೌಚಾಲಯ ಅನಾರೋಗ್ಯ-ಸಾವು ಮತ್ತು ಮುಜುಗರಕ್ಕೆ ಕಾರಣವಾಗುತ್ತೆ. ಇದನ್ನೂ ಹೋಗಲಾದಿಸಲು ಪ್ರತಿ ಕುಟುಂಬಕ್ಕೆ ಒಂದು ಶೌಚಾಲಯ ಬೇಕು ಮಕ್ಕಳು ಪಾಲಕರಿಗೆ ಬೇಕು ಬೇಡಿಕೆಗಳ ಬಗ್ಗೆ ಜಾಗೃತಿ ಮುಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಹಾಗೂ ಶ್ರೀ ಸಾಯಿ ರತ್ನ ಫೌಂಡೇಶನ ಇವರ ಆಶ್ರಯದಲ್ಲಿ ಇಂದು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತ ವ್ಯಾಪ್ತಿಯ …
Read More »
inmudalgi
ಡಿಸೆಂಬರ್ 17, 2024 Uncategorized, ಬೆಳಗಾವಿ, ರಾಜ್ಯ
ಬೆಳಗಾವಿ: ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ಇತ್ತಿಚಿಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯನ್ನು ಹೊರತು ಪಡಿಸಿದರೆ ನೇರವಾಗಿ ಮಹಾರಾಷ್ಟ್ರದ ಮೀರಜ ಮತ್ತು ಸಾಂಗ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ …
Read More »
inmudalgi
ಡಿಸೆಂಬರ್ 17, 2024 ಬೆಳಗಾವಿ, ರಾಜ್ಯ
ಮೂಡಲಗಿ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 375 ಎಸ್.ಸಿ, 189 ಎಸ್.ಟಿ ಮತ್ತು 2,351 ಒಬಿಸಿ ಫಲಾನುಭವಿಗಳ 5,177 ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲಗಳನ್ನು ಮಂಜೂರು ಮಾಡಲಾಗಿದೆ ಮತ್ತು ಸುಮಾರು 21,852 ನೇರ/ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ರವನೀತ್ ಸಿಂಗ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ …
Read More »
inmudalgi
ಡಿಸೆಂಬರ್ 15, 2024 ಬೆಳಗಾವಿ, ರಾಜ್ಯ
ಮೂಡಲಗಿ: ಧಾರವಾಡದ ಮುರಘಾಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳ ಪಾದಯಾತ್ರೆಯು ಮೂಡಲಗಿಗೆ ಆಗಮಿಸಿತು. ಸ್ಥಳೀಯ ಎಂಇಎಸ್ ಕಾಲೇಜು ಬಳಿಯಲ್ಲಿ ಪಾದಯಾತ್ರಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು. ಈ ಸಂದರ್ಭದಲ್ಲಿ ಪಿ.ಕೆ. ರಡ್ಡೇರ ಮಾತನಾಡಿ ‘ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾಗಿರುವ ಧಾರವಾಡದ ಮುರಘಾಮಠವು ಅನೇಕ ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಆಸರೆಯಾಗಿ ಬೆಳೆಸಿದೆ’ ಎಂದರು. ಮೃತ್ಯುಂಜಯಪ್ಪಗಳು ನೂರು ವರ್ಷಗಳ ಪೂರ್ವದಲ್ಲಿ ಸ್ಥಾಪಿಸಿರುವ ಪ್ರಸಾದ ನಿಲಯವು ನಿರಂತರವಾಗಿ ನಡೆದುಕೊಂಡು ಬಂದಿರುವುದು ಮಠದ ದಾಸೋಹ ಪರಂಪರೆಯು ವಿಶೇಷವಾಗಿದೆ …
Read More »
inmudalgi
ಡಿಸೆಂಬರ್ 15, 2024 ಬೆಳಗಾವಿ, ರಾಜ್ಯ
ಮೂಡಲಗಿ : ಮಕ್ಕಳ ಬಾಲ್ಯ ಜೀವನದಲ್ಲಿ ಅಜ್ಜ-ಅಜ್ಜಿಯರು ಪರಮಾತ್ಮನ ರೂಪದಂತೆ ಕಾಣುವದರ ಜೊತೆಗೆ ಮಕ್ಕಳ ಬಾಲ್ಯದ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತಿಯನ್ನು ತುಂಬುತ್ತಾರೆ. ಅಲ್ಲದೇ ಮಕ್ಕಳು ತಮ್ಮ ಬಾಲ್ಯವನ್ನು ಅಜ್ಜ-ಅಜ್ಜಿಯರ ಜೊತೆಗೆ ಕಳೆದಾಗ ಅವರ ಅನುಭವ ಮಕ್ಕಳ ಮೇಲಾಗಿ ಸ್ವಾಭಿಮಾನ ಮತ್ತು ಸೃಜನಶೀಲ ಸಮಾಜಮುಖಿ ವ್ಯಕ್ತಿತ್ವ ಬೆಳೆಯುವಲ್ಲಿ ಸಹಾಯಕವಾಗುತ್ತದೆ. ಇಂದು ಸಮಾಜ ಬೆಳೆದಂತೆ ಕುಟುಂಬದ ಪ್ರೀತಿ ಮಕ್ಕಳ ಮೇಲೆ ಕಡಿಮೆಯಾಗಿ ವೈಜ್ಞಾನಿಕ ಜೀವನ ಮಕ್ಕಳ ಬದುಕನ್ನು ಮತ್ತು ಅವರ ಬಾಲ್ಯವನ್ನು …
Read More »