Breaking News
Home / ರಾಶಿ ಭವಿಷ್ಯ / ರಾಶಿ ಭವಿಷ್ಯ 01/03/2020 ರಿಂದ 07/03/2020

ರಾಶಿ ಭವಿಷ್ಯ 01/03/2020 ರಿಂದ 07/03/2020

Spread the love

ರಾಶಿ ಭವಿಷ್ಯ 01/03/2020 ರಿಂದ 07/03/2020
ಮೇಷ..
ದೇವ ಬಲ ಮತ್ತು ಆರ್ಥಿಕ ಅಭಿವೃದ್ಧಿ ನಿಮ್ಮ ಪಾಲಿಗೆ ಇದ್ದು ಆಧ್ಯಾತ್ಮಿಕದ ಕಡೆ ಗಮನ ಹರಿಸುತ್ತಿರ. ವ್ಯಾಪಾರಿ ಗಳಿಗೆ ಲಾಭ. ಹೊಸ ಕಾರ್ಯಕ್ಕೆ ಕೈ ಹಾಕಲು ಇದು ಸೂಕ್ತ ಸಮಯ.
ವೃಷಭ.
ಸಾಮಾಜಿಕ ಮನ್ನಣೆ ಮತ್ತು ವ್ಯವಹಾರ ಕುಶಲತೆ ತೋರಿಸುವ ಸಮಯ ಇದು. ಕುಟುಂಬ ದಲ್ಲಿ ಭಿನ್ನಾಭಿಪ್ರಾಯ ಮರೆತು ಮುಂದುವರಯು ವುದು ಉತ್ತಮ. ಇದರಿಂದ ನಿಮ್ಮ ಗೌರವ ಹೆಚ್ಚುತ್ತದೆ.
ಮಿಥುನ.
ಆರ್ಥಿಕವಾಗಿ ಸಣ್ಣ ಪ್ರಮಾಣದ ಯಶಸ್ಸು ವೃತ್ತಿ ಜೀವನದಲ್ಲಿ ಬದಲಾವಣೆ ನೆರೆ ಹೊರೆ ಯವರು ನಿಮ್ಮ ಒಳ್ಳೆಯ ತನವನ್ನು ದುರುಪಯೋಗ ಪಡಿಸಿಕೊಂಡು ಹೋಗದ ಹಾಗೆ ನೋಡಿದರೆ ಒಳ್ಳೆಯದು ನಿಮ್ಮ ತಪ್ಪು ನಿಮಗೆ ಕಾಣುವುದಿಲ್ಲ.
ಕಟಕ.
ಬೆಟ್ಟ ಕೈಗೆ ಬಂತು ಎನ್ನುವ ಹೊತ್ತಿಗೆ ಕನಸು ಎಂದು ನೋವು ಪಡುವ ಕಾಲ ವಾಸ್ತವಿಕ ವಿಚಾರದಲ್ಲಿ ಗಮನ ಹರಿಸಬೇಕು ಬಣ್ಣದ ಮಾತಿಗೆ ಮರಳು ಆಗುವುದು ಬೇಡ.
ಸಿಂಹ.
ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡುವಿರಿ ದೇವರ ಕೃಪೆ ನಿಮ್ಮ ಮೇಲಿದೆ ಅದೃಷ್ಟ ನಿಮಗೆ ಸುಲಭವಾಗಿ ಸಿಗಲಿದೆ ಸಮಸ್ಯೆ ಗೆ ಪರಿಹಾರ ನಿಮ್ಮಲ್ಲಿ ಇರುವುದರಿಂದ ಜಾಣ ರಾಗಿ ಬದುಕುವುದನ್ನು ಕಲಿಯಿರಿ ದಾಂಪತ್ಯ ಜೀವನ ಶಾಂತಿ ಮತ್ತು ಸೌಹಾರ್ದ ರೀತಿಯಲ್ಲಿ ಇರುತ್ತದೆ.
ಕನ್ಯಾ.
ಬದುಕಿನಲ್ಲಿ ಹೊಂದಾಣಿಕೆ ಅಗತ್ಯ ಆತುರ ಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಆತುರದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ ಶತ್ರುಗಳ ಮೇಲೆ ಮತ್ತು ಆರೋಗ್ಯ ಗಮನ ಇರಲಿ.
ತುಲಾ.
ಸ್ವಲ್ಪ ಮಟ್ಟಿಗೆ ಧನ ವ್ಯಯ ಇದ್ದರು ಸಾಮಾಜಿಕ ವಾಗಿ ನೆಮ್ಮದಿ ಇರುತ್ತದೆ ಅನಿರೀಕ್ಷಿತ ವಾಗಿ ಹಣ ಪ್ರಾಪ್ತ ವಾಗೂವುದು. ಅಂದು ಕೊಂಡ ಕೆಲಸ ನೆಡೆದು ಮನಸ್ಸಿಗೆ ತೃಪ್ತಿ.
ವೃಶ್ಚಿಕ.
ಕೆಲಸದಲ್ಲಿ ನೀವು ಸಮಯ ಮತ್ತು ನಂಬಿಕೆಗೆ ಹೆಚ್ಚು ಬೆಲೆ ನೀಡಿ ನಿಮ್ಮ ಪ್ರಾಮಾಣಿಕತೆ ನಿಮಗೆ ಶ್ರೀ ರಕ್ಷಣೆ ಜೀವನದಲ್ಲಿ ಬದಲಾವಣೆ ಇದು ಸೂಕ್ತ ಕಾಲ. ನೆಮ್ಮದಿ ಇರದ ಕುಟುಂಬ ಜೀವನ ನಡೆಯಲಿದೆ ಬೇರೆಯವರ ಜೀವನದಲ್ಲಿ ಮೂಗು ತೂರಿಸಲು ಹೋಗುವುದು ಬೇಡ. ಆರೋಗ್ಯ ದ ಬಗ್ಗೆ ಗಮನ ಹರಿಸಿ.

ಧನು .
ರಾಶಿ ಅಧಿಪತಿ ನಿಮ್ಮ ಎಲ್ಲಾ ಕೆಲಸಕ್ಕೂ ಬೆಂಬಲ ನೀಡುತ್ತಾನೆ ಆತ್ಮ ವಿಶ್ವಾಸ ಇಟ್ಟು ಕೆಲಸ ಮಾಡಬೇಕು ಜನ ನಿಮ್ಮ ಕೆಲಸ ಗುರುತಿಸಿ ಗೌರವಿಸು ತ್ತಾರೆ ಕುಟುಂಬದಸದಸ್ಯರು ಅನಾರೋಗ್ಯ ಪೀಡಿತರಾಗುತ್ತಾ ರೆ. ಲಾಭಕ್ಕಾಗಿ ದೂರ ಪ್ರಯಾಣ ಯೋಗ ಇದೆ.

ಮಕರ.
ಶನಿಯ ಸಾಡೆಸಾತಿ ಯಿಂದ ಗೊಂದಲ ಮತ್ತು ಉದ್ವೇಗ ಉಂಟಾಗುತ್ತದೆ ಸಮಾಧಾನ ವಾಗಿಇರಿ. ಹರ ಮುನಿದರೆ ಗುರು ಕಾಯುವನು ಎಂದು ನಂಬಿ ಅನಗತ್ಯ ವೆಚ್ಚ ಮತ್ತು ಇದ್ದರೂ ಉದ್ಯೋಗ ಲಾಭ ಮತ್ತು ಮನೆಯಲ್ಲಿ ಮಂಗಳ ಕೆಲಸ ಪ್ರಾರಂಭ.

ಕುಂಭ.
ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ನಿಮ್ಮ ಮೇಲೆ ಹಿರಿಯ ಅಧಿಕಾರಿಗಳು ಹಾಗೂ ಮಿತ್ರರು ಹೆಚ್ಚಿನ ಜವಾಬ್ದಾರಿ ಹೇರುತ್ತಾರೆ ಪ್ರಾಮಾಣಿಕ ವಾಗಿ ಮುಂದೆ ಸಾಗಿ ಗೌರವ ತಾನಾಗೆ ಬರುತ್ತದೆ ಹೊಸ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ತೋರಿಸಲು ಸೂಕ್ತ ಕಾಲ. ಆರ್ಥಿಕವಾಗಿ ಹಿನ್ನಡೆ.

ಮೀನ.
ಅವಮಾನ ಮತ್ತು ನೋವು ವೃತ್ತಿ ಜೀವನದಲ್ಲಿ ಸಹಜ. ನಿರ್ಧಾರ ಸರಿ ಇದ್ದರೆ ಮಾತ್ರ ಆದಾಯ ದಲ್ಲಿ ಲಾಭ ಮತ್ತು ಗೌರವ ಹೆಚ್ಚುತ್ತದೆ. ಬೇಡವಾದ ವಿಷಯಕ್ಕೆ ಹೆಚ್ಚಿನ ಗಮನ ಕೊಡಬೇಡಿ ತಾಳ್ಮೆ ನಿಮಗೆ ಶುಭ.

H. G ಹರ್ಷ ಜ್ಯೋತಿಷ್ಯರು ಮತ್ತು ವಾಸ್ತು ತಜ್ಞರು. (ಆಕರ್ಷ ಜ್ಯೋತಿಷ್ಯ ಕೇಂದ್ರ ಮೂಡಲಗಿ.)


Spread the love

About inmudalgi

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ