ದೇಶಾಭಿಮಾನ ಉಕ್ಕಿಸಿದ ಲಯನ್ಸ್ ದೇಶಭಕ್ತಿ ಗಾಯನ ಸಂಜೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು 73ನೇ ಗಣರಾಜ್ಯೋತ್ಸವದ ಅಂಗವಾಗಿ ದೇಶಭಕ್ತಿ ಗಾಯನ ಸಂಜೆ ಕಾರ್ಯಕ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು. ಮುನ್ಯಾಳದ ಆರೂಢಜ್ಯೋತಿ ಸುಗಮ ಸಂಗೀತ ಕಲಾ ತಂಡದ ಯುವ ಗಾಯಕರು ದೇಶಭಕ್ತಿ ಹಾಡುಗಳನ್ನು ಹೇಳಿ ಕೇಳುಗರಲ್ಲಿ ದೇಶಾಭಿಮಾನವನ್ನು ಉಕ್ಕಿಸಿದರು. ‘ಇದು ಬಾಪೂಜಿ ಬೆಳಗಿದ ಭಾರತ’ ‘ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀಗಾಗು’ ‘ಜೋಗದ ಸಿರಿ ಬೆಳಕಿನಲಿ’ ಹಾಡುಗಳನ್ನು ಗಾಯಕ …
Read More »TimeLine Layout
ಜನವರಿ, 2022
-
27 ಜನವರಿ
ಮಹಾಲಕ್ಷ್ಮೀ ಸಭಾ ಭವನವನ್ನು ಲೋಕಾರ್ಪಣೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ ಜನಸಾಮಾನ್ಯರ ಅನುಕೂಲಕ್ಕಾಗಿ ಸೇವಾ ಮನೋಭಾವನೆಯಿಂದ ನಿರ್ಮಿಸಿದ ಸಭಾ ಭವನ : ರಮೇಶ ಜಾರಕಿಹೊಳಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಾಸಕರಾದ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಭಾಗಿ
ಗೋಕಾಕ : ಜನಸಾಮಾನ್ಯರ ಅನುಕೂಲಕ್ಕಾಗಿ ಅತ್ಯಾಧುನಿಕವಾಗಿ ಗೋಕಾಕ ನಗರದಲ್ಲಿ ಮಹಾಲಕ್ಷ್ಮೀ ಸಭಾ ಭವನ ನಿರ್ಮಿಸಲಾಗಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗುರುವಾರದಂದು 4.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಮಹಾಲಕ್ಷ್ಮೀ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಭಾ ಭವನ ನಿರ್ಮಾಣದಿಂದ ಜನ ಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು. ಗೋಕಾಕ …
Read More » -
27 ಜನವರಿ
ಶ್ರೀನಿವಾಸ ಸ್ಕೂಲ್‍ದಲ್ಲಿ ಗಣರಾಜ್ಯೋತ್ಸವ ಆಚರಣೆ ಏಕತೆ ಸಾರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ
ಶ್ರೀನಿವಾಸ ಸ್ಕೂಲ್‍ದಲ್ಲಿ ಗಣರಾಜ್ಯೋತ್ಸವ ಆಚರಣೆ ಏಕತೆ ಸಾರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ ಮೂಡಲಗಿ: ದೇಶದ ಪ್ರಜೆಗಳು ಭಾರತದ ಸಂವಿಧಾನ ನೀಡಿರುವ ಶಾಸನಬದ್ಧ ಹಕ್ಕುಗಳ ಸದುಪಯೋಗದ ಜೊತೆಗೆ ಶಾಸನಬದ್ಧ ಕರ್ತವ್ಯಗಳನ್ನು ಪಾಲಿಸಬೇಕು’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ಶ್ರೀನಿವಾಶ ಸ್ಕೂಲ್‍ನಲ್ಲಿ ಬುಧವಾರ ಆಚರಿಸಿದ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಮತ್ತು ಏಕತೆಯನ್ನು ಸಾರುವ ಭಾರತದ ಸಂವಿಧಾನವು …
Read More » -
26 ಜನವರಿ
ಸೊಸಾಯಿಟಿಗಳ ಶಾಖೆಯ ಸಹಯೋಗದಲ್ಲಿ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಕಾರ್ಯಕ್ರಮ
ಬೆಟಗೇರಿ:ಗ್ರಾಮದ ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘ ಹಾಗೂ ಬೆಟಗೇರಿ ಗ್ರಾಮದ ಚೈತನ್ಯ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ಲಿ, ಶಾಖೆಯ ಸಹಯೋಗದಲ್ಲಿ ಜ.26 ರಂದು ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಸುರೇಶ ವಡೇರ ಅವರು ಕ್ರಾಂತಿವೀರ ರಾಯಣ್ಣನ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಸಮರ್ಪಿಸಿದರು. ಸ್ಥಳೀಯ ಚೈತನ್ಯ ಸೊಸೈಟಿ ಶಾಖಾ ವ್ಯವಸ್ಥಾಪಕ ವಿಠಲ ನೇಮಗೌಡರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕುರಿತು ಮಾತನಾಡಿದರು. ಕನಕಶ್ರೀ ಸಹಕಾರಿ ವ್ಯವಸ್ಥಾಪಕ ರಮೇಶ …
Read More » -
26 ಜನವರಿ
‘ಒನಕೆ ಓಬವ್ವ’ ವೇಷದಲ್ಲಿ ಗಮನಸೆಳೆದ ಆರೋಹಿ
‘ಒನಕೆ ಓಬವ್ವ’ ವೇಷದಲ್ಲಿ ಗಮನಸೆಳೆದ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣ ನಾಡಗೌಡರ ಪುಟಾಣಿಯು ಬುಧವಾರ 73ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ವೀರ ವನಿತೆ ಒನಕೆ ಓಬವ್ವಳ ವೇಷದಲ್ಲಿ ಗಮನಸೆಳೆದಳು. ಆರೋಹಿ ಇಲ್ಲಿಯ ಪುರಸಭೆಯ ಮಾಜಿ ಉಪಾಧ್ಯಕ್ಷ ರವಿ ಪಿ. ಸೋನವಾಲಕರ ಮತ್ತು ವಿದ್ಯಾ ದಂಪತಿಗಳ ಮೊಮ್ಮಗಳು. ಆರೋಹಿಯ ತಾಯಿ ಶೃತಿ ನಾಡಗೌಡರ ಮಗುವಿಗೆ ವೇಷವನ್ನು ಸಿದ್ಧಗೊಳಿಸಿದ್ದರು.
Read More » -
26 ಜನವರಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶ ಭಕ್ತರಾಗಿದ್ದರು : ರಮೇಶ ಹಾಲನ್ನವರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶ ಭಕ್ತರಾಗಿದ್ದರು : ರಮೇಶ ಹಾಲನ್ನವರ ಬೆಟಗೇರಿ: ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ರಮೇಶ ಹಾಲಣ್ಣವರ ಹೇಳಿದರು. ಬೆಟಗೇರಿ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಜ.26ರಂದು ಆಯೋಜಿಸಿದ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶ ಭಕ್ತರಾಗಿದ್ದರು ಎಂದರು. ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ರಾಯಣ್ಣನ ಭಾವಚಿತ್ರಕ್ಕೆ …
Read More » -
26 ಜನವರಿ
ವಿಶೇಷ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದ ಭರತ
ಬೆಟಗೇರಿ:ಗ್ರಾಮದ ಲಕ್ಷ್ಮೀನಗರ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜ.26ರಂದು ನಡೆದ 73ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ 7 ವರ್ಷದ ಬಾಲಕ ಕುಮಾರ ಭರತ ಗಂಗಪ್ಪ ಹಂಜಿ ವಿಶೇಷ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದನು.
Read More » -
26 ಜನವರಿ
ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಯ ದಶಮಾನೋತ್ಸವ ಸಂಭ್ರಮ
ಬೆಟಗೇರಿ:ಜನಮನದ ಜೀವನಾಡಿಯಾದ ಉದಯವಾಣಿ ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಯ ದಶಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತ ಭವಿಷ್ಯದಲ್ಲೂ ಇನ್ನಷ್ಟು ಎತ್ತರಕ್ಕೆ ಬೆಳೆದು ಜನಪ್ರಿಯಗೊಳ್ಳಲಿ ಎಂದು ಬೆಟಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹಾರೈಸಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಉದಯವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯದಲ್ಲಿ ಜ.26 ರಂದು ನಡೆದ ಜನಮನದ ಜೀವನಾಡಿಯಾದ ಉದಯವಾಣಿ ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿ, ಸದಾ …
Read More » -
26 ಜನವರಿ
*ಬೆಟಗೇರಿ ಗ್ರಾಮದ ವಿವಿಧೆಡೆ 73 ನೇ ಗಣರಾಜ್ಯೋತ್ಸವ ಆಚರಣೆ *ಧ್ವಜಾರೋಹಣಕ್ಕೆ ಗೌರವ ಸಮರ್ಪನೆ
ಭಾರತದ ಪಾಲಿಗೆ ಜ.26 ಅವಿಸ್ಮರಣೀಯ ದಿನ: ಲಕ್ಷ್ಮಣ ಚಂದರಗಿ *ಬೆಟಗೇರಿ ಗ್ರಾಮದ ವಿವಿಧೆಡೆ 73 ನೇ ಗಣರಾಜ್ಯೋತ್ಸವ ಆಚರಣೆ *ಧ್ವಜಾರೋಹಣಕ್ಕೆ ಗೌರವ ಸಮರ್ಪನೆ ಬೆಟಗೇರಿ:1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಇಡೀ ದೇಶ ಸಂಪೂರ್ಣ ಸರ್ಕಾರದ ಹಿಡಿತಕ್ಕೆ ಬಂದಿರಲಿಲ್ಲ, ಭಾರತದ ಸಂವಿಧಾನ ಏನನ್ನು ಒಳಗೊಂಡಿರಬೇಕು ಎಂಬ ಬಗ್ಗೆಯಷ್ಟೇ ತಯಾರಿ ನಡೆದಿತ್ತು ಎಂದು ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು. ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ …
Read More » -
26 ಜನವರಿ
ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ. ಆಡಳಿತ ಕಛೇರಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ.
ಮೂಡಲಗಿ: ನಮ್ಮ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ಕಟಿಬದ್ಧವಾಗಿ ಪಾಲಿಸುವುದೇ ದೇಶಕ್ಕೆ ಮತ್ತು ಸಂವಿಧಾನ ರಚನಾಕಾರರಿಗೆ ಸಲ್ಲಿಸುವ ಶ್ರೇಷ್ಠ ಗೌರವ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ.26 ರಂದು ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ. ಆಡಳಿತ ಕಛೇರಿಯಲ್ಲಿ ಭಾರತ ಮಾತೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು …
Read More »
IN MUDALGI Latest Kannada News