Breaking News
Home / Recent Posts / ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಯ ದಶಮಾನೋತ್ಸವ ಸಂಭ್ರಮ

ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಯ ದಶಮಾನೋತ್ಸವ ಸಂಭ್ರಮ

Spread the love

ಬೆಟಗೇರಿ:ಜನಮನದ ಜೀವನಾಡಿಯಾದ ಉದಯವಾಣಿ ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಯ ದಶಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತ ಭವಿಷ್ಯದಲ್ಲೂ ಇನ್ನಷ್ಟು ಎತ್ತರಕ್ಕೆ ಬೆಳೆದು ಜನಪ್ರಿಯಗೊಳ್ಳಲಿ ಎಂದು ಬೆಟಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹಾರೈಸಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಉದಯವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯದಲ್ಲಿ ಜ.26 ರಂದು ನಡೆದ ಜನಮನದ ಜೀವನಾಡಿಯಾದ ಉದಯವಾಣಿ ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿ, ಸದಾ ಹೊಸತನ ಹಾಗೂ ವಸ್ತುನಿಷ್ಠ ಸುದ್ದಿಗಳನ್ನು ಹೊತ್ತು ಜನರ ಮನೆ-ಮನ ಮುಟ್ಟುತ್ತಿರುವ ನಾಡಿನ ಹೆಮ್ಮೆಯ ಉದಯವಾಣಿ ಕನ್ನಡ ದಿಪತ್ರಿಕೆಯಾಗಿದೆ ಎಂದರು.
ಸ್ಥಳೀಯ ಉದಯವಾಣಿ ಕನ್ನಡ ದಿನಪತ್ರಿಕೆ ವಿತರಕ ಹಾಗೂ ವರದಿಗಾರ ಅಡಿವೇಶ ಮುಧೋಳ ಉದಯವಾಣಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಹತ್ತು ವರ್ಷ, ಹರ್ಷದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವ ಮುಖಂಡರಾದ ಹನುಮಂತ ವಡೇರ, ಲಖನ್ ಚಂದರಗಿ, ಬಸವರಾಜ ಮಾಳೇದ, ವಿಠಲ ಕೋಣಿ, ಮಾರುತಿ ಚಂದರಗಿ, ದುಂಡಪ್ಪ ಮಾಳೇದ, ಬದ್ರು ನಾವಿ, ಪವನ ಮುಧೋಳ, ವಿನೋಧ ಮುಧೋಳ, ಸಮರ್ಥ ಮುಧೋಳ, ಗಣ್ಯರು, ಸ್ಥಳೀಯರು, ಇತರರು ಇದ್ದರು.


Spread the love

About inmudalgi

Check Also

ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

Spread the love ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ