ಮೂಡಲಗಿ:ನವಭಾರತ ನಿರ್ಮಾಕ್ಕಾಗಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ಮೂಡಲಗಿ ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಚಂಪಾ ಸುಣಗಾರ ಕರೆ ನೀಡಿದರು. ಕಲ್ಲೋಳಿ ಪಟ್ಟಣದ 421ರ ಅಂಗನವಾಡಿ ಕೇಂದ್ರದಲ್ಲಿ ರವಿವಾರ ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆಂದರು, ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆಗೆ, ಸಮಯಕ್ಕೆ ಮಹತ್ವ ನೀಡಬೇಕು …
Read More »TimeLine Layout
ಜನವರಿ, 2021
-
25 ಜನವರಿ
ಬೆಳಗಾವಿ ರೈಲ್ವೆ ನಿಲ್ದಾಣ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ಬೆಳಗಾವಿ: ಬೆಳಗಾವಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಒಂದು ಮಾದರಿ ರೈಲ್ವೆ ನಿಲ್ದಾಣ ಮಾಡುವುದು ದಿ. ಸುರೇಶ ಅಂಗಡಿ ಅವರ ಕನಸಾಗಿತ್ತು. ಹೀಗಾಗಿ ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವದಿಯೊಳಗೆ ಕೆಲಸ ಪೂರೈಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ (ಜ.25) ರಂದು ನಗರದ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲನಾ ಸಂದರ್ಭದಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು ಬೆಳಗಾವಿ …
Read More » -
25 ಜನವರಿ
ಜ. 27ರಂದು ಉಚಿತ ಆರೋಗ್ಯ ತಪಾಶಣೆ ಶಿಬಿರ
ಜ. 27ರಂದು ಉಚಿತ ಆರೋಗ್ಯ ತಪಾಶಣೆ ಶಿಬಿರ ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಜ. 27ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಪೊಲೀಸ್ ಕ್ವಾಟರ್ಸದ ಹುನುಮಾನ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿರುವರು. ರಕ್ತದೊತ್ತಡ, ಮಧುಮೇಹ, ಆಯ್ದ ರಕ್ತ ಸಪಾಸಣೆ, ಇಸಿಜಿ, ಒಳರೋಗ ತಪಾಸಣೆ ಶಿಬಿರದಲ್ಲಿ ಮಾಡುವರು. ಸಾಮಾನ್ಯ ರೋಗ ತಜ್ಞ ಹಾಗೂ …
Read More » -
25 ಜನವರಿ
ಧರ್ಮಟ್ಟಿ-ಪಟಗುಂದಿ ಗ್ರಾಮಕ್ಕೆ 2.36 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಧರ್ಮಟ್ಟಿ-ಪಟಗುಂದಿ ಗ್ರಾಮಕ್ಕೆ 2.36 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ತಮ್ಮ-ತಮ್ಮಲ್ಲಿಯ ವೈಯಕ್ತಿಕ ಮನಸ್ತಾಪಗಳನ್ನು ಮರೆತು ಗ್ರಾಮದ ಅಭಿವೃದ್ಧಿಗೆ ಒಂದಾಗಿ ಒಗ್ಗಟ್ಟಾಗಿ ಶ್ರಮಿಸುವಂತೆ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಧರ್ಮಟ್ಟಿ-ಪಟಗುಂದಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 2.36 ಕೋಟಿ ರೂ. ವೆಚ್ಚದಲ್ಲಿ ಜಲಜೀವನ …
Read More » -
24 ಜನವರಿ
ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ
ಬೆಟಗೇರಿ:ಸಮೀಪದ ಬಿಲಕುಂದಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಜ.23 ರಂದು ಜರುಗಿದ ಚುನಾವಣೆಯಲ್ಲಿ ಸ್ಥಳೀಯ ಮುಖಂಡ ಶಿವಲಿಂಗಪ್ಪ ಬಳಿಗಾರ ಅವರ ಗುಂಪಿನ ಎರಡು ಸ್ಥಾನಗಳ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಶಿವಲಿಂಗಪ್ಪ ಮಲ್ಲಪ್ಪ ಬಳಿಗಾರ ಅವರು ಒಟ್ಟು 11 ಮತಗಳ ಪೈಕಿ 6 ಮತ, …
Read More » -
24 ಜನವರಿ
ಕುಡಿಯುವ ನೀರು ಸರಬರಾಜು ಪೈಪ್‍ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ – ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ
ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ಸಮೀಪದ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಜ್ಜಿಹಾಳ ಗ್ರಾಮದಿಂದ ಗಲಗಲಿ ತೋಟ ಮತ್ತು ತಿರಕನ್ನವರ ತೋಟ ಹಾಗೂ ಬಣಜಿಗೇರ ತೋಟಕ್ಕೆ ಕುಡಿಯುವ ನೀರು ಸರಬರಾಜು ಪೈಪ್‍ಲೈನ್ ಕಾಮಗಾರಿಗೆ ಶನಿವಾರ ಜ.23ರಂದು ಗುದ್ದಲಿ ಪೂಜೆ ನೆರವೇರಿಸಿ …
Read More » -
24 ಜನವರಿ
ಬೆಂಗಳೂರಿನ ನಮ್ಮ ಚಾಲಕರ ಟ್ರೆಡ್ ಯೂನಿಯನ್ ಇದರ ಗ್ರಾಮೀಣ ಘಟಕದ ಉದ್ಘಾಟನೆ
ಬೆಟಗೇರಿ:ಬೆಂಗಳೂರಿನ ನಮ್ಮ ಚಾಲಕರ ಟ್ರೆಡ್ ಯೂನಿಯನ್ ಇದರ ಕೌಜಲಗಿ ಗ್ರಾಮೀಣ ಘಟಕದ ಉದ್ಘಾಟನೆ ಸಮಾರಂಭ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ವಿಠಲ ಬೀರದೇವರ ದೇವಸ್ಥಾನ ಆವರಣದಲ್ಲಿ ಶನಿವಾರ ಜ.23 ರಂದು ನಡೆಯಿತು. ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಜ್ಯೋತಿ ಪ್ರಜ್ವಲಿಸುವುದರ ಮೂಲಕ ಕೌಜಲಗಿ ಗ್ರಾಮೀಣ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸ್ಥಳೀಯ ವಿಠಲ ಬೀರದೇವರ ದೇವಸ್ಥಾನದ ವಿಠಲ ದೇವಋಷಿ ಸಾನಿಧ್ಯ, ಬೆಂಗಳೂರಿನ ನಮ್ಮ ಚಾಲಕರ ಟ್ರೆಡ್ ಯೂನಿಯನ್ …
Read More » -
24 ಜನವರಿ
ಉತ್ತರ ಕರ್ನಾಟಕದ ಜನತೆಯ ವ್ಯಾಪಾರ, ವಾಣಿಜ್ಯ ವೃದ್ಧಿಯ ಜೊತೆಗೆ ಶಿಕ್ಷಣ ಮತ್ತು ಪ್ರವಾಸಿ ತಾಣಗಳ ವೀಕ್ಷಣೆಗೆ ಪೂರಕ ವಾತಾವರಣ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ: ಬೆಳಗಾವಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಗೋವಾ-ಮಂಗಳೂರ ಮತ್ತು ಮೈಸೂರ ಈ ಮೂರು ನಗರಗಳಿಗೆ ರೈಲು ಓಡಾಟ ಆರಂಭಿಸಬೇಕು ಇದರಿಂದ ಉತ್ತರ ಕರ್ನಾಟಕದ ಜನತೆಯ ವ್ಯಾಪಾರ, ವಾಣಿಜ್ಯ ವೃದ್ಧಿಯ ಜೊತೆಗೆ ಶಿಕ್ಷಣ ಮತ್ತು ಪ್ರವಾಸಿ ತಾಣಗಳ ವೀಕ್ಷಣೆಗೆ ಪೂರಕ ವಾತಾವರಣ ರೂಪಿಸಿದಂತೆ ಆಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಛೇರಿಯಲ್ಲಿ ಶನಿವಾರ (ಜ.23) ರಂದು ಅಧಿಕಾರಿಗಳ ಸಭೆಯಲ್ಲಿ …
Read More » -
24 ಜನವರಿ
ನೆರೆ ಸಂತ್ರಸ್ಥರ ಮನೆಗಳ ತಾಂತ್ರಿಕ ದೋಷವನ್ನು ಕೂಡಲೇ ನಿವಾರಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ನೆರೆ ಸಂತ್ರಸ್ಥರ ಮನೆಗಳ ತಾಂತ್ರಿಕ ದೋಷವನ್ನು ಕೂಡಲೇ ನಿವಾರಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯಲ್ಲಿ ಸಂಸದ ಈರಣ್ಣ ಕಡಾಡಿ ಅವರೊಂದಿಗೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ನೆರೆ ಹಾವಳಿ ಸಮಯದಲ್ಲಿ ಕುಸಿದು ಬಿದ್ದಿರುವ ಮನೆಗಳ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡುವ ವ್ಯವಸ್ಥೆ ಕೂಡಲೇ ಮಾಡಬೇಕು. ಹೈಡ್/ಡೆಲಿಟ್ ಆದ ಮನೆಗಳ ತಾಂತ್ರಿಕ ದೋಷವನ್ನು ಕೂಡಲೇ ನಿವಾರಿಸಬೇಕು. ಮಾರ್ಚ ತಿಂಗಳ ಅಂತ್ಯದೊಳಗೆ ವಸತಿ …
Read More » -
24 ಜನವರಿ
ಬನವಾಸಿ ಜನತೆಯ ಬಹು ದಿನಗಳ ಬೇಡಿಕೆಯಾಗಿರುವ ಗ್ರೀಡ್‍ಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು – ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್
ಬನವಾಸಿ: ಬನವಾಸಿ ಜನತೆಯ ಬಹು ದಿನಗಳ ಬೇಡಿಕೆಯಾಗಿರುವ ಗ್ರೀಡ್‍ಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಅವರು ಅಜ್ಜರಣಿ ಗ್ರಾಮದಲ್ಲಿ 3 ಕೋಟಿ 96ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹಲವೂ ವರ್ಷಗಳ ಹಿಂದೆ ಬನವಾಸಿಯ ಪೂರ್ವ ಭಾಗ ಬರಗಾಲ ಪೀಡಿತ ಪ್ರದೇಶ ಎಂದು ಗುರುತಿಸಿಕೊಂಡಿತ್ತು ಆದರೆ ವರದಾ ನದಿಯ ವರದಿಂದ ಫಲವತ್ತದ …
Read More »
IN MUDALGI Latest Kannada News