ಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ ಮಠಾಧೀಶರು,ಸ ಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಿಲಿದ್ದಾರೆ’ ಎಂದು ಚಂದ್ರ ಮೈದೇವಿ ಕೈವಲ್ಯಮಠದದ ಶರಣ ಬಸಪ್ಪ ಅಜ್ಜನವರು ತಿಳಿಸಿದರು.
ಜಾತ್ರೆಯ ಪ್ರಚಾರ ಪತ್ರಿಕೆ ಹಾಗೂ ಅಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಫೆ. 19ರಂದು ಬೆಳಿಗ್ಗೆ 3ಕ್ಕೆ ಘಟಸ್ಥಾಪನೆಯೊಂದಿಗೆ
ಜಾತ್ರೆ ಕಾರ್ಯಕ್ರಮಗಳು ಪ್ರಾರಂಭಗೊಳ್ಳುವವು. ಫೆ. 19ರಿಂದ ಫೆ. 23ರ ವರೆಗೆ ಸಂಜೆ 7ಕ್ಕೆ ಜೋಕಾನಟ್ಟಿಯ
ಯೋಗಿಸಿದ್ಧೇಶ್ವರ ಆಶ್ರಮದ ಬಿಳಿಯಾನಸಿದ್ದ ಸ್ವಾಮಿಜಿಗಳಿಂದ ನಿತ್ಯ ಪ್ರವಚನ ಮತ್ತು ಪ್ರಸಾದ ಇರುವುದು.
ಅಡಿಗಲ್ಲು: ಫೆ. 23ರಂದು ಬೆಳಿಗ್ಗೆ 11.30ಕ್ಕೆ ಜರುಗುವ ಚಂದ್ರಮ್ಮಾದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭ, ಜಾತ್ರೆಯ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಜಾತ್ರೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಗೋಕಾಕದ ಶೂನ್ಯ ಸಂಪಾದನ ಮಠದ ಮುರಘರಾಜೇಂದ್ರ ಸ್ವಾಮೀಜಿ, ಶರಣ ಬಸಪ್ಪ ಅಜ್ಜನವರು, ಭಾಗೋಜಿಕಪ್ಪದ ಶಿವಲಿಂಗ ಮುರಘರಾಜೇಂದ್ರ ಸ್ವಾಮೀಜಿ, ಮನಸೂರದ ರೇವಣಸಿದ್ಧೇಶ್ವರ ಸ್ವಾಮೀಜಿ, ಕೆಕೆ ಕೊಪ್ಪದ ಸಿದ್ದಪ್ರಭುಶಿವಾಚಾರ್ಯ ಸ್ವಾಮಿಜಿ, ಬಾದಾಮಿಯ ಮಾತೋಶ್ರಿ ರಾಜರಾಜೇಶ್ವರಿ ತಾಯಿ, ಮಾತೋಶ್ರೀ ಗಿರೆಮ್ಮಾ ತಾಯಿ, ಮನ್ನಿಕೇರಿಯ ವಿಜಯಸಿದ್ದೇಶ್ವರ ಶ್ರೀ, ಕೌಜಲಗಿಯ ವಿಠ್ಠಲದೇವ ಋಷಿಗಳು ವಹಿಸುವರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.
ಉದ್ಘಾಟಕರಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ
ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರಾದ ಬಿ.ಜೆಡ್. ಜಮೀರ ಅಹ್ಮದ ಖಾನ್, ಸಂತೋಷ ಲಾಡ, ಶಿವರಾಜ ತಂಗಡಗಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಭಾಗವಹಿಸುವರು.
ಜಾನಪದ ಜಾತ್ರೆ: ಜಾನಪದ ಜಾತ್ರೆಯಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕøತ ಕಲಾವಿದ ಇಮಾಮಸಾಬ ವಲ್ಲೆಪ್ಪನವರ ತಂಡದಿಂದ ವೈವಿದ್ಯಮಯವಾದ ಜಾನಪದ ಹಾಡಗಳು, ನೃತ್ಯ ರೂಪಕಗಳು ಜರುಗಲಿವೆ. ರಾತ್ರಿ 10ಕ್ಕೆ ಗೋಕಾಕ ಪಾಲ್ಸ್ ಗಣೇಶ ಮೆಲೋಡಿಸ್‍ದ ರಸಮಂಜರಿ ಇರುವುದು.
ಫೆ. 22ರಂದು ರಾತ್ರಿ ನಾಗನೂರ ಕೊರವಂಜಿದೇವಿ ಡೊಳ್ಳಿನ ಸಂಘ, ಮುಗಳಿಹಾಳ ವಿಠಲ ದೇವರ ಡೊಳ್ಳಿನ ಗಾಯನ ಸಂಘಗಳಿಂದ ಜಿದ್ದಾಜಿದ್ದಿ ಡೊಳ್ಳಿನ ಪದಗಳು ಇರುವವು.
IN MUDALGI Latest Kannada News