ಮೂಡಲಗಿ: ‘ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಮಾರ್ಚ ಅಂತ್ಯದಲ್ಲಿ ರೂ. 2.80 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ” ಎಂದು ಸೊಸೈಟಿಯ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಅವರು ಹೇಳಿದರು.
ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯ 2021-22ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
2021-22ನೇ ಆರ್ಥಿಕ ವರ್ಷದ ಕೊನೆಯಲ್ಲಿ ಸಂಸ್ಥೆಯು ರೂ. 34.70 ಕೋಟಿ ಠೇವಣಿ ಸಂಗ್ರಹಿಸಿ ರೂ.42.29 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ವಿತರಿಸಿದೆ. ರೂ.50 ಕೋಟಿ ದುಡಿಯುವ ಬಂಡವಾಳ ಮತ್ತು ರೂ. 14 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಬಸವೇಶ್ವರ ಸೊಸೈಟಿಯು ಕಳೆದ 20 ವರ್ಷಗಳಿಂದ ಶೇರುದಾರರಿಗೆ ಶೇ.25 ಲಾಭಾಂಶವನ್ನು ನೀಡುತ್ತಾ ಬಂದಿದೆ, ಪ್ರತಿ ವರ್ಷ ನೂರಕ್ಕೆ ನೂರು ಸಾಲ ವಸೂಲಾತಿ ಮಾಡುತ್ತಿದ್ದು, ಲೆಕ್ಕಪತ್ರದಲ್ಲಿ ಲೆಕ್ಕಪರಿಶೋಧಕರಿಂದ ‘ಅ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಗದು ಬಹುಮಾನಗಳ ಮೂಲಕ ಪ್ರತಿಭಾ ಪುರಸ್ಕಾರ, ಕೃಷಿ ಚಟುವಟಿಕೆಗಳಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಸೊಸೈಟಿಯು ಉತ್ತೇಜನವನ್ನು ನೀಡುತ್ತಲಿದೆ ಎಂದರು.
ಸೊಸೈಟಿಯ ಉಪಾಧ್ಯಕ್ಷ ಶಿವರುದ್ರ ಬಿ. ಪಾಟೀಲ, ನಿರ್ದೇಶಕರಾದ ಭೀಮಪ್ಪ ಕಡಾಡಿ, ಬಸಗೌಡ ಪಾಟೀಲ, ಮಲ್ಲಪ್ಪ ಖಾನಾಪುರ, ರಾಮಪ್ಪ ದಬಾಡಿ, ಸುಭಾಸ ಐನಾಪುರ, ಹಣಮಂತ ಪರಕನಟ್ಟಿ, ಬಸಪ್ಪ ಹೆಬ್ಬಾಳ, ಲಕ್ಷ್ಮೀಬಾಯಿ ಕಂಕಣವಾಡಿ, ಅನೀತಾ ಗೋರೋಶಿ, ಪ್ರಕಾಶ ಕಲಾಲ, ಮಹಮ್ಮದಶಫೀ ಮೋಕಾಶಿ ಇದ್ದರು.
ಈರಯ್ಯ ಕರಗಾಂವಮಠ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ನಿರೂಪಿಸಿದರು, ರಮೇಶ ಕವಟಗೊಪ್ಪ ವಂದಿಸಿದರು.