ಮನ್-ಕೀ-ಬಾತ್ ಶತಕದ ಸಂಭ್ರಮ
ಸಾಧನೆ ತೋರಿದ ಸಾಧಕರಿಗೆ ಮೋದಿ ಅವರಿಂದ ಬೆನ್ನು ತಟ್ಟುವ ಕಾರ್ಯ ಶ್ಲಾಘನೀಯ-ಸಂಸದ ಈರಣ್ಣ ಕಡಾಡಿ
ಮೂಡಲಗಿ: ಸ್ವಚ್ಛತಾ ಅಂದೋಲನ, ಶೌಚಾಲಯ ಮತ್ತು ಕೆರೆಗಳ ನಿರ್ಮಾಣ, ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಮನರಂಜನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಕಾರ್ಯಕ್ರಮದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ, ಜನಸಾಮಾನ್ಯರೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಾ ಬಂದಿರುವ ಮನ್ ಕೀ ಬಾತ್ ಕಾರ್ಯಕ್ರಮ 100 ಸಂಚಿಕೆಗಳನ್ನು ಪೂರೈಸಿರುವುದು ಜನತೆ ಹೆಮ್ಮೆ ಪಡುವಂತಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಏ-30 ರಂದು ಕಲ್ಲೋಳಿ ಪಟ್ಟಣದ ಸಂಸದರ ಗೃಹ ಕಛೇರಿಯಲ್ಲಿ ಮನ್-ಕೀ-ಬಾತ್ ಕಾರ್ಯಕ್ರಮವನ್ನು ಕಾರ್ಯಕರ್ತರೊಂದಿಗೆ ವೀಕ್ಷಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು 2014ರ ಅಕ್ಟೋಬರ್ 03 ವಿಜಯ ದಶಮಿಯಂದು ಪ್ರಾರಂಭವಾದ ಮನ್-ಕೀ-ಬಾತ್ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೇ ಇಂದು 100 ಸಂಚಿಕೆ ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭದ್ದತೆಯನ್ನು ಏತ್ತಿ ತೋರಿಸುತ್ತಿದೆ ಎಂದರು.
ನಮ್ಮ ಅಕ್ಕಪಕ್ಕದಲ್ಲಿರುವ ಸೀತವ್ವ ಜೋಡಟ್ಟಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿರುವÀ ಬಗ್ಗೆ ಉಲ್ಲೇಖಿಸಿರುವುದು, ಬೆಳಗಾವಿಯ ರೈತನ ಮಗಳು ಅಕ್ಷಯ ಬಸವಾನಿ ಖೇಲೋ ಇಂಡಿಯಾದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು. ಕರ್ನಾಟಕದ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ನಿಮಿತ್ಯ “ಅಮೃತ ಭಾರತಿ ಕನ್ನಡದಾರತಿ” ಅಭಿಯಾನದ ಉಲ್ಲೇಖ. ಕಾಯಕವೇ ಕೈಲಾಸ ಬಸವೇಶ್ವರರ ಬೋಧನೆಗಳ ನೆನಪಿಸಿಕೊಂಡಿರುವುದು ಹೀಗೆ ಎಲೆ ಮರೆಯ ಕಾಯಂತೆ ಅಗಾದ ಸಾಧನೆ ತೋರಿದ ಸಾಧಕರಿಗೆ ಬೆನ್ನು ತಟ್ಟುವ ಕಾರ್ಯಕ್ಕೆ ಮನ್-ಕೀ-ಬಾತ್ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.
ಪಕ್ಷದ ಪ್ರಮುಖರಾದ ಪ್ರಕಾಶ ಮಾದರ, ಸುರೇಶ ಮಠಪತಿ, ಬಸವರಾಜ ಪಾಲಭಾವಿ, ಶ್ರೀಕಾಂತ ಕೌಜಲಗಿ, ಗೋಪಾಲ ತೋಳಮರಡಿ, ದುಂಡಪ್ಪ ನಿಂಗನ್ನವರ, ಬಸವರಾಜ ಕಡಾಡಿ, ಹಣಮಂತ ಸಂಗಟಿ, ಪ್ರಭು ಕಡಾಡಿ, ಪುಂಡಲೀಕ ಅರಭಾವಿ, ಪರಗೌಡ ಪಾಟೀಲ, ಬಸವರಾಜ ಗಾಡವಿ, ಅಡಿವೆಪ್ಪ ಕುರಬೇಟ, ಶ್ರೀಶೈಲ ತುಪ್ಪದ, ರಾಜು ಮೂಡಲಗಿ, ಈರಪ್ಪ ಮುತ್ನಾಳ, ಮಹಾನಿಂಗ ಒಂಟಗೂಡೆ, ರಾಮಪ್ಪ ಕಾಪಸಿ, ಹಣಮಂತ ಖಾನಗೌಡ್ರ, ಅಜೀತ ಚಿಕ್ಕೋಡಿ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿರಿದ್ದರು.