Breaking News
Home / ಬೆಳಗಾವಿ / ಕಲ್ಲೋಳಿ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ನೀಲಕಂಠ ಕಪ್ಪಲಗುದಿ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ಹನಮಂತ ವ್ಯಾಪಾರಿ ಆಯ್ಕೆ

ಕಲ್ಲೋಳಿ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ನೀಲಕಂಠ ಕಪ್ಪಲಗುದಿ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ಹನಮಂತ ವ್ಯಾಪಾರಿ ಆಯ್ಕೆ

Spread the love

*ಕಲ್ಲೋಳಿ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ನೀಲಕಂಠ ಕಪ್ಪಲಗುದಿ ಆಯ್ಕೆ*

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ವಿವಿಧೋದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬೆಮ್ಯೂಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸವರಾಜ ಕಪ್ಪಲಗುದಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ಹನಮಂತ ವ್ಯಾಪಾರಿ ಆಯ್ಕೆಗೊಂಡರು.
13 ಸದಸ್ಯರ ಬಲ ಹೊಂದಿ ಕಲ್ಲೋಳಿ ಪಿಕೆಪಿಎಸ್ ಅಧ್ಯಕ್ಷ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಬಸವರಾಜ ಬಿ||ಪಾಟೀಲ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭೀಮಶೇಪ್ಪ ವ್ಯಾಪಾರಿ ಮತ್ತು ಶಂಕರ ಗೊರೋಶಿ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ನೀಲಕಂಠ ಕಪ್ಪಲಗುದ್ದಿ ಮತ್ತು ಉಪಾಧ್ಯಕ್ಷರಾಗಿ ಭೀಮಪ್ಪ ವ್ಯಾಪಾರಿ ಆಯ್ಕೆಗೊಂಡರು.
ಚುನಾವಣಾಧಿಕಾರಿಗಳಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುರೇಶ ಬಿರಾದಾರಪಾಟೀಲ ಕಾರ್ಯ ನಿರ್ವಹಿಸಿದರು.
ವಿಜಯೋತ್ಸವ: ಬಾರಿ ತುರಿಸಿನಿಂದ ಕುಡಿದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಆಯ್ಕೆ ಆಗುತ್ತಿದಂತೆ ಬೆಂಬಲಿಗರು ಗುಲಾಲ ಏರಚ್ಚಿ, ಪಟಾಕಿಸಿ ಸಿಡಿಸಿ ಮತ್ತು ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿ ಕಲ್ಲೋಳಿ ಪಟ್ಟಣದ ಆರಾಧ್ಯ ದೈವ ಶ್ರೀ ಹನುಮಾನ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೇರಳಿ ದೇವರಗಳ ದರ್ಶನ ಪಡೆದರು.
ಬೆಂಬಲಿಗರಿಂದ ಸತ್ಕಾರ ಸ್ವೀಕರಿಸಿ ನೂತನ ಅಧ್ಯಕ್ಷ ನೀಲಕಂಠ ಬಸವರಾಜ ಕಪ್ಪಲಗದ್ದಿ ಮಾತನಾಡಿ, ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶೇರುದಾರರಿಗೆ ಮತ್ತು ರೈತರಿಗೆ ಬೆಮ್ಯುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲ ತರದ ಸಾಲ ಸೌಲಭ್ಯವನ್ನು ಒದಗಿಸುವದಾಗಿ ಭರವಸೆ ನೀಡಿದರು.

ವಿಜಯೋತ್ಸವದಲ್ಲಿ ಪಿಕೆಪಿಎಸ್ ನಿರ್ದೇಶಕರಾದ ಮಲ್ಲಪ್ಪ ಪ.ಕಡಾಡಿ, ಆನಂದ ಬಿ.ಹೆಬ್ಬಾಳ, ಕೆಂಪವ್ವಾ ಕ.ಗೋರೋಶಿ, ಮಲ್ಲಪ್ಪ ನಿಂ.ಪೂಜೇರಿ, ಧರ್ಮಣ್ಣ ಸಿ.ನಂದಿ, ವಸಂತ ಮಾ.ತಹಶೀಲ್ದಾರ ಮತ್ತು ಮುಖಂಡರಾದ ಬಸಗೌಡ ಪಾಟೀಲ, ಬಸವಣ್ಣಿ ಗೊರೋಶಿ, ಮಲ್ಲಪ್ಪ ಖಾನಾಪೂರ, ಬಸವಂತ ದಾಸನಾಳ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಮಹಾದೇವ ಮದಬಾವಿ, ಶಿವಾನಂದ ಹೆಬ್ಬಾಳ, ಪರಪ್ಪ ಕಡಾಡಿ, ಮಹಾಂತೇಶ ಕಪ್ಪಲಗುದ್ದಿ, ಬಸವರಾಜ ಜಗದಾಳಿ, ರಾಮಣ್ಣ ದಬಾಡಿ, ಈರಪ್ಪ ಹೆಬ್ಬಾಳ, ಪ್ರಕಾಶ ಪತ್ತಾರ, ಉಮೇಶ ಬೂದಿಹಾಳ, ಬಸವರಾಜ ಯಾದಗೂಡ, ಪ್ರಮೋದ ನುಗ್ಗಾನಟ್ಟಿ, ಪ್ರಕಾಶ ಮೇತ್ರಿ, ಮೋಹನ ಗಾಡ್ಡಿವಡರ ಮತ್ತು ಪಟ್ಟಣ ಪಂಚಾಯತ ಸದಸ್ಯರು, ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ