Breaking News
Home / ಬೆಳಗಾವಿ / ನೂತನವಾಗಿ ನಿರ್ಮಿಸಿರುವ ನಾಡ ಕಚೇರಿಯನ್ನು ಉದ್ಘಾಟಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

ನೂತನವಾಗಿ ನಿರ್ಮಿಸಿರುವ ನಾಡ ಕಚೇರಿಯನ್ನು ಉದ್ಘಾಟಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love

*ಕೌಜಲಗಿ.* (ತಾ.ಗೋಕಾಕ) ಕೌಜಲಗಿ ಭಾಗದ ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲು ನಾಡ ಕಚೇರಿಯನ್ನು ಸ್ವಂತ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಶುಕ್ರವಾರ, ಇಲ್ಲಿನ ಬಸ್ ನಿಲ್ದಾಣದ ಬಳಿ (ಅಂಬೇಡ್ಕರ್ ವೃತ್ತ ಹತ್ತಿರ) 20 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ನಾಡ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಭಾಗದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನಾದ್ಯತೆ ನೀಡುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಭಳಕೆ ಮಾಡುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಮೊತ್ತದ ಜನಪರ ಮತ್ತು ರೈತಪರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಕಲ್ಮಡ್ಡಿ ಮತ್ತು ರಾಮಲಿಂಗೇಶ್ವರ ಯಾತ ನೀರಾವರಿ ಯೋಜನಾನುಷ್ಟಾನದಿಂದ ಕೌಜಲಗಿ ಭಾಗವು ಸಂಪೂರ್ಣ ನೀರಾವರಿಯಾಗಿ ಹಸಿರುಮಯದಿಂದ ಕಂಗೊಳಿಸುತ್ತಿದೆ. ಇಂತಹ ಹಲವಾರು ಜನೋಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜೊತೆಗೆ ಎಲ್ಲಾ ಸಮಾಜಗಳನ್ನು ಸಮಾನವಾಗಿ ಕಾಣುವ ಮೂಲಕ ಸಾಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡುತ್ತಿದ್ದಾರೆ. ಮುಂದೊಂದು ದಿನ ಈ ಭಾಗದ ಜನರ ಆಶಯದಂತೆ ತಾಲ್ಲೂಕು ಕೇಂದ್ರವಾಗಿ ಪರಿವರ್ತನೆಗೊಳ್ಳುವ ಕಾಲ ದೂರವಿಲ್ಲವೆಂದು ಹೇಳಿದರು.
ಸರ್ವೋತ್ತಮ ಜಾರಕಿಹೊಳಿಯವರು ನಾಡ ಕಾರ್ಯಾಲಯವನ್ನು ಉದ್ಘಾಟಿಸಿದರು. ನಂತರ ಶ್ರೀರಾಮ ಮಂದಿರ ಸಮೀಪದಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡ ರಾಜೇಂದ್ರ ಸಣ್ಣಕ್ಕಿ, ತಹಶೀಲ್ದಾರ ಮೋಹನ ಭಸ್ಮೆ, ಉಪ ತಹಶೀಲ್ದಾರ ಎಂ.ಎಸ್. ಗಡಕರಿ, ಕಂದಾಯ ನೀರಿಕ್ಷಕ ಸುಂದರ್, ರವೀಂದ್ರ ಪರುಶೆಟ್ಟಿ, ಎಸ್.ಆರ್. ಭೋವಿ, ಶಿವಾನಂದ ಲೋಕನ್ನವರ, ಅಶೋಕ ಉದ್ದಪ್ಪನವರ,
ಲಕ್ಷ್ಮಣ ಮುಸಗುಪ್ಪಿ, ಬಸಪ್ಪ ದಳವಾಯಿ, ಸುಭಾಸ ಕೌಜಲಗಿ, ಶಾಂತಪ್ಪ ಹಿರೇಮೇತ್ರಿ, ಜಿ.ಎಸ್. ಲೋಕನವರ, ರಾಮಪ್ಪ ಈಟಿ, ಬಸು ಜೋಗಿ, ಅಶೋಕ ಶಿವಾಪೂರ,ಕಿರಣ ಕುಂದರಗಿ,ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About inmudalgi

Check Also

ನ. 20ರಂದು ಅರಭಾವಿ ಮಠದಲ್ಲಿ ಶಿವಾನುಭವ ಗೋಷ್ಠಿ

Spread the loveಮೂಡಲಗಿ: ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ನ.20ರಂದು ಸಂಜೆ 6.30ಕ್ಕೆ ಅಮವಾಸ್ಯೆಯ ಶಿವಾನುಭವ ಗೋಷ್ಠಿಯು ಜರುಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ