ವಿದ್ಯುತ್ ವ್ಯತ್ಯಯ
ಮೂಡಲಗಿ: 110/11 ಕೆವಿ ಮೂಡಲಗಿ ಹಾಗೂ ನಾಗನೂರ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಕಾರ್ಯ ನಿರ್ವಹಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಅ 4 ರಂದು ಮು. 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೂಡಲಗಿ ಪಟ್ಟಣ, ಗುರ್ಲಾಪೂರ, ಮುನ್ಯಾಳ, ಕಮಲದಿನ್ನಿ, ರಂಗಾಪೂರ, ನಾಗನೂರ, ಧರ್ಮಟ್ಟಿ, ಗುಜನಟ್ಟಿ, ಜೋಕಾನಟ್ಟಿ ಮತ್ತು ಪಟಗುಂದಿ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪಸೆಟ್ ಮಾರ್ಗಗಳ ಪೀಡರಗಳಿಗೆ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಕೋರಿದ್ದಾರೆ.