ಕುಲಗೋಡ: ಸಮಗ್ರ ಕೃಷಿ ಅಳವಡಿಕೊಂಡರೆ ರೈತರ ಆದಾಯ ದ್ವಿಗುಣ ಮಾಡಿಕೊಳ್ಳಬಹುದು. ಯುವಕರು ಕೃಷಿಯಲ್ಲಿ ಸಕ್ರಿಯವಾಗಿ ತೋಡಗಿಸಕೊಳ್ಳಬೇಕು ಮಹಾಂತೇಶ ಹೂಗಾರ ಕೃಷಿ ಪ್ರಾಧ್ಯಾಪಕರು ಅರಭಾವಿ ಹೇಳಿದರು
ಇವರು ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಾಡಗೌಡರ ತೋಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ನೇತೃತ್ವದಲ್ಲಿ ಇಂದು ನಡೆದ ಕೃಷಿ ವಿಸ್ತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜನಸಂಖ್ಯೆ ಹೆಚ್ಚಾದಂತೆ ಆಹಾರ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಕೃಷಿಯಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತವೆ. ಅದೇ ರೀತಿ ರೈತರು ಕೂಡಾ ಸಂಶೋಧನೆಗಳನ್ನು ಅಳವಡಿಸಿಕೊಂಡು ಸಾವಯವ ಬೆಳೆಗಳ ಬೆಳೆಯಬೇಕು ಎಂದರು
ಕಾರ್ಯಕ್ರಮದಲ್ಲಿ ಮೈಲಾರಪ್ಪ ಬೈಲಿ. ರಾಘವೇಂದ್ರ ಪಟಗಾರ. ಅಧ್ಯಕ್ಷರಾದ ಸವಿತಾ ನಾಯಿಕ, ಹಿರಿಯರಾದ ಎನ್ ಆರ್ ನಾಡಗೌಡ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಶೈಲ್ ಪೂಜೇರಿ. ಲಕ್ಷ್ಮಿ ಪಾಟೀಲ್. ಲಕ್ಷ್ಮಣ್ ಉಟಗಿ. ಹನುಮಂತಗೌಡ ಪಾಟೀಲ. ಹನುಮಂತ ಡೊಂಬರ. ಪ್ರಕಾಶ ಕಾಳಶೆಟ್ಟಿ . ಶಿವಪ್ಪ ಪೂಜೇರಿ. ಈರಪ್ಪ ಅಂಗಡಿ. ಅಡಿವೆಪ್ಪ ಹಮ್ಮಿದಡ್ಡಿ ಹಾಗೂ ಶ್ರೀ ಮಂಜುನಾಥ ಮಹಿಳಾ ಸಂಘದ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು