Breaking News
Home / Recent Posts / ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು

ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು

Spread the love

ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು

ಕುಲಗೋಡ: ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು ಅಂದಾಗ ದೇಶ ಉಳಿಯುತ್ತೆ ಎಂದು ರಾಮಚಂದ್ರ ಮಾಳೇದದವರ ಅಧ್ಯಕ್ಷರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಾಲೂಕ ಮೂಡಲಗಿ ಇವರು ಮಾತನಾಡಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ) ತಾಲೂಕು ಘಟಕ ಮೂಡಲಗಿ ಇವರ ಆಶ್ರಯದಲ್ಲಿ ಇಂದು ಕಾರ್ಗಿಲ್ ವಿಜಯೋತ್ಸªಕ್ಕೆ ಚಾಲನೆ ನೀಡಿ ಮಾತನಾಡಿ 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು ಎಂದರು.
ದೇಶ ಕಾಯುವ ಯೋಧರಿಂದಲ್ಲೇ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಸೈನಿಕ ಮತ್ತು ರೈತ ನಿಜವಾದ ದೇವರು ಇವರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಸರ್ವೋತ್ತಮ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ. ವೆಂಕಟೇಶ ನಾಯಿಕ. ಗೋವಿಂದ ಕೊಪ್ಪದ. ಸತೀಶ ವಂಟಗೋಡಿ ಮತ್ತಿತರರು ಮಾತನಡಿದರು.
ಮುಂಜಾನೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹುತಾತ್ಮರ ಭಾವಚಿತ್ರ ಮೆರವಣಿಗೆ ಬಲಭೀಮ ದೇವಸ್ಥಾನದವರೆಗೆ ನಡೆಯಿತು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ. ಭಾಷಣ. ಯೋಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅದ್ಯಕ್ಷ ತಮ್ಮಣ್ಣಾ ದೇವರ. ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ. ಸುಭಾಸ ವಂಟಗೋಡಿ. ಬಸನಗೌಡ ಪಾಟೀಲ. ಸತೀಶ ವಂಟಗೋಡಿ. ಭೀಮಶಿ ಪೂಜೇರಿ. ಬಸು ಯರಗಟ್ಟಿ. ಗುರಪ್ಪ ಬಾಗಿಮನಿ. ಮಾರುತಿ ಬಾಗಿಮನಿ. ನಿಂಗಪ್ಪ ಮಾಳಿ. ವೆಂಕಣ್ಣ ಕೊಪ್ಪದ. ಕೃಷ್ಣ ಬಡಕಲ್ಲ. ಮಾರುತಿ ಮನ್ನಿಕೇರಿ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಾಜಿ ಹಾಲಿ ಸೈನಿಕರು ಗ್ರಾಮಸ್ಥರು ಯುವಕರು ಇದ್ದರು.
ಬಿ.ಪಿ ಕೋಟಿ ನಿರೂಪಿಸಿ ಎಲ್.ಆರ್ ಪೂಜೇರಿ ಸ್ವಾಗತಿಸಿ ವಂದಿಸಿದರು.

 


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ