ನೂತನ ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಉಪಾಧ್ಯಕ್ಷರಾಗಿ ಹೇಮಾ ಕುರಬೇಟ ಅವಿರೋದ ಆಯ್ಕೆ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ . ಉಪಾಧ್ಯಕ್ಷರಾಗಿ ಹೇಮಾ ಕುರಬೇಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಬುಧವಾರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಮ್ಮಣ್ಣಾ ದೇವರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಕುರಬೇಟ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷ ಅಶೋಕ ನಾಯಿಕ. ಸುಭಾಸ ವಂಟಗೋಡಿ. ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ. ಬಸನಗೌಡ ಪಾಟೀಲ. ಭೀಮಶಿ ಪೂಜೆರಿ. ಸತೀಶ ವಂಟಗೋಡಿ. ಸುನೀಲ ವಂಟಗೋಡಿ. ರಾಮಣ್ಣಾ ಬೈರನಟ್ಟಿ. ಪಿ.ಡಿ.ಓ ಸದಾಶಿವ ದೇವರ. ಹಣಮಂತ ಚನ್ನಾಳ. ದತಾತ್ರೇಯ ಕುಲಕರ್ಣ ಹಾಗೂ ಸರ್ವ ಗ್ರಾಪಂ ಸದಸ್ಯರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
IN MUDALGI Latest Kannada News