ಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಅನ್ವರ ನದಾಫ, ನಿವೃತ್ತ ಶಿಕ್ಷಕ ಕೆ.ಆರ್.ಕೊತ್ತಲ, ಶಿವಬಸು ಸುಣಧೋಳಿ, ಬಿ.ಪಿ.ಬಂದಿ, ಆರೋಗ್ಯ ನಿರೀಕ್ಷಕ ಪ್ರೀತಮ ಬೋವಿ, ಅಕ್ಷಯ ಕಂಬಾರ, ಗುತ್ತಿಗೆದಾರ ರಾಜು ಪೂಜೇರಿ ಮತ್ತಿತರರು ಇದ್ದರು.