Breaking News
Home / ಬೆಳಗಾವಿ / ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಮಕ್ಕಳ ಪ್ರಬಂಧ ಸ್ವರ್ದೆ

ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಮಕ್ಕಳ ಪ್ರಬಂಧ ಸ್ವರ್ದೆ

Spread the love

ಕುಲಗೋಡ: ಹಗಲು,ರಾತ್ರಿ, ಮಳೆಗಾಲದಲ್ಲಿ ಬಯಲು ಶೌಚಾಲಯ ಅನಾರೋಗ್ಯ-ಸಾವು ಮತ್ತು ಮುಜುಗರಕ್ಕೆ ಕಾರಣವಾಗುತ್ತೆ. ಇದನ್ನೂ ಹೋಗಲಾದಿಸಲು ಪ್ರತಿ ಕುಟುಂಬಕ್ಕೆ ಒಂದು ಶೌಚಾಲಯ ಬೇಕು ಮಕ್ಕಳು ಪಾಲಕರಿಗೆ ಬೇಕು ಬೇಡಿಕೆಗಳ ಬಗ್ಗೆ ಜಾಗೃತಿ ಮುಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ ಹೇಳಿದರು.

ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಹಾಗೂ ಶ್ರೀ ಸಾಯಿ ರತ್ನ ಫೌಂಡೇಶನ ಇವರ ಆಶ್ರಯದಲ್ಲಿ ಇಂದು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳಿಗೆ ಪ್ರಬಂಧ ಸ್ವರ್ದೆ ಏರ್ಪಡಿಸಲಾಗಿದ್ದು ಇಂದು ಮಧ್ಯಾಹ್ನ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮದಲ್ಲಿ ಬಯಲು ಶೌಚಾಲಯ ಮುಕ್ತ ಮಾಡಲು ಸದಸ್ಯರು ಅಧಿಕಾರಿಗಳು ಅಭಿಯಾನ ಮಾಡುತ್ತಿದ್ದು ಪ್ರೇರಣೆಯಾಗಿ ಶೌಚಾಲಯದ ಬಗ್ಗೆ ಮಕ್ಕಳ ಮೂಲಕ ಮನೆಗಳಲ್ಲಿ ಜಾಗೃತಿಯಾಗುವದು ಎಂಬ ಉದ್ದೇಶದಿಂದ ಈ ಪ್ರಬಂಧ ಸ್ಪರ್ಧೆ ಎಂದರು.

ಬಹುಮಾನ
1. ಪ್ರಾಥಮಿಕ ಶಾಲಾ ವಿಭಾಗಕ್ಕೆ ಪ್ರಥಮ ಭಾಗ್ಯಶ್ರೀ ಕಳ್ಳೇಪ್ಪನವರ. ದ್ವಿತೀಯ ಸೃಷ್ಠಿ ಹಾದಿಮನಿ. ತೃತೀಯ ಸೌಜನ್ಯ ಮಾಳಿ.
2. ಪ್ರೌಢಶಾಲಾ ವಿಭಾಗಕ್ಕೆ ಪ್ರಥಮ ವಿನಾಯಕ ಭೂಸರಡ್ಡಿ. ದ್ವಿತೀಯ ಗಣೇಶ ಟವಳಿ. ತೃತೀಯ ಸೃಷ್ಠಿ ಅಮ್ಮಣಗಿ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಪಡೆದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಪಿಡಿಓ ಸದಾಶಿವ ದೇವರ. ಶ್ರೀ ಸಾಯಿರತ್ನ ಪೌಂಡೇಶನ ಅಧ್ಯಕ್ಷ ಶಂಕರ ಹಾದಿಮನಿ. ಶ್ರೀಪತಿ ಗಣಿ. ನಾಗೇಶ ಬಂಡಿವಡ್ಡರ. ಸುರೇಶ ತಳವಾರ. ಎಮ್.ಆರ್ ಕುಲಕರ್ಣಿ. ಬಸವರಾಜ ಕೋಟಿ. ಶ್ರೀಶೈಲ ಹುಚ್ಚನ್ನವರ. ಗಿರೀಶ ಯಕ್ಸಂಬಿ. ಬಿ.ಎ ಬಂಗಾರಿ ಕಿರಣ ಗಂಗನ್ನವರ. ಮತ್ತು ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ