ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕುಲಗೋಡ: ಪುರುಷರಿಗೆ ರಕ್ತದಾನವು ಹೃದಯದ ಸಂಭಂದಿ ಕಾಯಿಲೆಗಳ ದೂರ ಮಾಡುತ್ತದೆ. ಗಾಯಗೊಂಡವರಿಗೆ, ಶಸ್ತ್ರಚಿಕಿತ್ಸೆಗೆ, ಮಾರಣಾಂತಿಕ ಕಾಯಿಲೆಗೆ, ಅಪಘಾತದಲ್ಲಿ ಜೀವನ ಮರಣದ ಮಧ್ಯ ಹೊರಡುವ ಜೀವ ಜೀಳಿಸಲು ರಕ್ತ ಬೇಕು ಎಂದು ಟಿಎಪಿಸಿಎಮ್‍ಎಸ್ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಇಂದು ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಮಾನ್ಯ ಬಾಲಚಂದ್ರ ಜಾರಕಿಹೊಳಿ ಇವರ ಆದೇಶದಂತೆ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆದಿದೆ. ದೇಶದಲ್ಲಿ ಕರೋನಾ ನಂತರ ರಕ್ತ ಭಂಡಾರಗಳಲ್ಲಿ ರಕ್ತದ ಕೊರತೆಯಾಗಿದೆ. ಭಯ ಬಿಟ್ಟು ರಕ್ತದಾನ ಮಾಡಿ ಜೀವ ಉಳಿಸಿ ಎಂದರು.
ಶಿಬಿರದಲ್ಲಿ 50 ಕ್ಕೂ ಹೆಚ್ಚು ಗ್ರಾಮಸ್ಥರು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕ ನಿಂಗಪ್ಪ ಕುರಬೇಟ. ಜಿಪಂ ಸದಸ್ಯ ಗೋವಿಂದ ಕೊಪ್ಪದ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರಪ್ಪಗೋಳ.ಡಾ: ಪ್ರಶಾಂತ ಸಣ್ಣಕ್ಕಿ. ಪಿಡಿಒ ಸದಾಶಿವ ದೇವರ. ಗ್ರಾಪಂ ಅಧ್ಯಕ್ಷೆ ವಿಮಲಾ ಸಸಾಲಟ್ಟಿ. ಸತೀಶ ವಂಟಗೋಡಿ. ರಾಮಣ್ಣಾ ಬೈರನಟ್ಟಿ. ಶ್ರೀಪತಿ ಗಣಿ.ತಮ್ಮಣ್ಣಾ ದೇವರ. ಗೋಪಾಲ ತಿಪ್ಪಿಮನಿ. ಚನ್ನಪ್ಪ ತಿಪ್ಪಿಮನಿ. ಬಸವರಾಜ ಯರಗಟ್ಟಿ ಹಾಗೂ ಬಿಮ್ಸ್ ವೈಧ್ಯದಿಕಾರಿಗಳು ಹಾಗೂ ತಂಡ. ಆಶಾ ಕಾರ್ಯಕರ್ತೆಯರು ಆಸ್ಪತ್ರೆ ಸಿಬ್ಬಂದಿ ಇದ್ದರು.