ಕುಲಗೋಡ: ರಕ್ತದಾನ ಮಾಡುವ ಜನರು ಹೃದಯಾಘಾತ ಮತ್ತು ಕ್ಯಾನ್ಸರ್ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಹಾಗೂ ರಕ್ತದಾನವು ಜನರು ತಮ್ಮ ರಕ್ತವನ್ನು ಜನರಿಗೆ ದಾನ ಮಾಡುವ ಅಭ್ಯಾಸವನ್ನು ಸೂಚಿಸುತ್ತದೆ ಆದ್ದರಿಂದ ಅದು ಅವರ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಇಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರಪ್ಪಗೋಳ ಮಾತನಾಡಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಗ್ರಾಮ ಪಂಚಾಯತ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜಾತಿ, ಮತ, ಧರ್ಮ ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಸಂಕೇತದ ಕಾರ್ಯಕ್ರಮ ಇದಾಗಿದೆ.
ಹಾಗೂ ರಕ್ತವು ಅಗತ್ಯವಿರುವ ಜನರಿಗೆ ದೊರೆತು ಸಮಯಕ್ಕೆ ಸರಿಯಾಗಿ ಜೀವ ಉಳಿಸಲಾ ನೀವು ನೀಡಿದ ರಕ್ತ ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಕಾರಿಗಳಾದ ಮಲ್ಲವ್ವ ನಾಯಕ. ರುದ್ರಪ್ಪ ಬಸಾಪೂರ ಹಾಗೂ ಕುಲಗೋಡ ಪ್ರಾ.ಆ. ಕೇ ವೈದ್ಯ ಶರತ ಉಪರೆ. ಡಾ. ಮಹೇಶ ಕಂಕನವಾಡಿ. ಸುಭಾಸ ವಂಟಗೋಡಿ. ಗ್ರಾಪಂ ಉಪಾದ್ಯಕ್ಷೆ ಹೇಮಾ ಕುರಬೇಟ. ಎಚ್.ಬಿ ಝಾರೆ. ಸವಿತಾ ಗುರವ. ಶ್ರೀಪತಿ ಗಣಿ. ಸುರೇಶ ತಳವಾರ. ಶಾನೂರ ಮುಲ್ಲಾ ಗ್ರಾಪಂ ಮತ್ತು ಪ್ರಾ.ಆ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.