ಕುಲಗೋಡದಲ್ಲಿ ಕರೋನಾ ಜಾಗೃತಿ ಅಭಿಯಾನ,
ಡೇಟಾಲ್,ಮಾಸ್ಕ,ಸೋಪು ವಿತರಣೆ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶ್ರೀ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳ್ಳಿ ಪೌಂಡೇಶನ್ ಮುಧೋಳ ಹಾಗೂ ಗ್ರಾಮ ಪಂಚಾಯತಯಿಂದ ಇಂದು ಸಂಜೆ ಕೈ
ತೊಳೆಯುವ ಡೇಟಾಲ್ ಲಿಕ್ವಿಡ್ ಮತ್ತು ಸೋಪು ವಿತರಣೆ ಹಾಗೂ ಕರೋನಾ ವೈರಸ್ ಜಾಗೃತಿ ಅಭಿಯಾನ ನಡೆಯಿತು.
ಪೌಂಡೇಶನ್ ಅಧ್ಯಕ್ಷ ನಾರಾಯಣ ಯಡಹಳ್ಳಿ ಗ್ರಾಮದ ಪ್ರತಿ ಮನೆಗೆ ಮಾಸ್ಕ, ಡೇಟಾಲ್ ಲಿಕ್ವಿಡಗಳ ವಿತರಣೆ ಮಾಡಿ ಕರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಹಾಗೂ ಇಡೀ ಜಗತ್ತನೇ ಆಹುತಿ ಪಡೆಯಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುರ ಒಂದು ಮಾರಣಾಂತಿಕ
ಕಾಯಿಲೆ.ಈ ಕಾಯಿಲೆ ಜ್ವರ,ಕೆಮ್ಮು,ನೆಗಡಿ ಉಸಿರಾಟ ತೊಂದರೆಯಿಂದ ಕಾಣಿಸಿಕೊಳ್ಳುತ್ತದೆ.. ಇದನ್ನು ಹೊಗಲಾಡಿಸಲು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡುವದು ನಮ್ಮ
ಸುತ್ತಮುತ್ತಲಿನ ಪರಿಸರದ ಜೊತೆಗೆ ನಾವು ಸ್ವಚ್ಛವಾಗಿರುವದು ಬಹು ಮುಖ್ಯ. ಮೊದಲು ನಿಮ್ಮ ಕೈಗಳನ್ನು ಬಿಸಿ ನೀರಿನಿಂದ ಮತ್ತು ಸೋಪು, ಡೇಟಾಲ್ ಉಪಯೋಗಿಸಿ ಚನ್ನಾಗಿ ತೊಳೆದುಕೊಳ್ಳಿ ಅತಿ ಮುಖ್ಯ ಎಂದರು ಅಭಿಯನದಲ್ಲಿ ಗ್ರಾಮದ ಮನೆ ಮನೆಗೆ ಸಾವಿರು ಡೇಟಾಲ್ ಲಿಕ್ವಿಡ್ ಹಾಗೂ
ಮಾಸ್ಕ ಮತ್ತು ಸೋಪು ವಿತರಿಸಿದರು. ಸಂದರ್ಭದಲ್ಲಿ ಆರ್.ಎಮ್ ಯಡಹಳ್ಳಿ ಪೌಂಡೇಶನ್ ನಾರಾಯಣ ಯಡಹಳ್ಳಿ,
ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸದಾಶಿವ ದೇವರ. ಡಾ. ಬಸವರಾಜ ಹೊರಟ್ಟಿ. ತಮ್ಮಣ್ಣಾ ದೇವರ.ಲಕ್ಷ್ಮಣ ಬಡಕಲ್ಲ.
ಮಾರುತಿ ಬಾಗಿಮನಿ. ಸೋಮಲಿಂಗ ಮಿಕಲಿ..ಶಂಕರ ಹಾದಿಮನಿ. ಪ್ರಕಾಶ ಹಿರೇಮೇತ್ರಿ. ಪಾಪು ನಾಯಿಕ. ಸದಾಶಿವ ಬಡಕಲ್ಲ. ಸುರೇಶ ತಳವಾರ. ಆರ್.ಆಯ್. ಬುದ್ನಿ. ಹಾಗೂ ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಬಾಲಚಂದ್ರ
ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು ಗ್ರಾಮಸ್ಥರು ಹಾಗೂ ಗ್ರಾ.ಪಂ ಸದಸ್ಯರು,ಸಿಬ್ಬಂದಿ ಇದ್ದರು.