ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ 98 ಲಕ್ಷ ಅನುದಾನದ ನೂತನ ಕಟ್ಟಡ ಶಂಕು ಸ್ಥಾಪನೆಯನ್ನು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ನೇರೆವರಿಸಿದರು. 1977 ರಲ್ಲಿ ನಿರ್ಮಾಣವಾದ ಠಾಣೆ ಕಟ್ಟಡ ಶಿಥಿಲಗೊಂಡು ಸಂಪೂರ್ಣ ಹಾಳಾಗಿತ್ತು ಅಲಲ್ಲಿ ಮೆಲ್ಛಾವಣಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು ಹೀಗಾಗಿ ಠಾಣೆಯ ವಸ್ತುಗಳು, ದಾಖಲೆಗಳ ರಕ್ಷಣೆಗೆ ಕಷ್ಟಪಡಬೇಕಾಗಿತ್ತು. ಠಾಣೆಯ ಅಧಿಕಾರಿಗಳು ಮುಂದೆ ನಿಂತು ಗುಣಮಟ್ಟ ನೋಡಿ ನಿರ್ಮಿಸಿಕೊಳಬೇಕು ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಕಾರ್ಯಕ್ರಮದಲ್ಲಿ ಭೂಮಿ ಪೂಜೆ, ವಾಸ್ತು ಪೂಜೆ ಮೂಡಲಗಿ ಪಿ.ಎಸ್.ಐ ಎಚ್.ವಾಯ್ ಬಾಲದಂಡಿ ನೇರೆವರಿಸಿದರು.
ಈ ಸಂದರ್ಭದಲ್ಲಿ ಕುಲಗೋಡ ಪಿಎಸ್ ಐ ಗೋವಿಂದಗೌಡ ಪಾಟೀಲ, ಘಟಪ್ರಭಾ ಸಿ. ಪಿ. ಐ ಶ್ರೀಶೈಲ ಬ್ಯಾಕೂಡ್ ಇಂಜಿನೀಯರ ಪ್ರವೀಣ ಬೂತೆ. ಎ.ಬಿ ಬಿರಾದಾರ. ಶಂಕರ ಹಾದಿಮನಿ. ಎಲ್.ಎಮ್.ನಾಯಿಕ. ಆರ್.ಬಿ.ನಾಯಿಕ. ಸಿ.ಎಸ್ ಹಿರೇಮಠ. ಎಸ್.ವ್ಹಿ ಹನಜಿ. ಮಾಳಪ್ಪ ಆಡಿನ. ವಿಠ್ಠಲ ದೂಳಪ್ಪನವರ. ಆನಂದ ನ್ಯಾಮಗೌಡ. ಕೆ.ಸಿ ಬಾಗಲಿ. ಎಸ್.ಎನ್ ಬಡಬಡಿ. ಆರ್ ಕೆ ಪೂಜೇರಿ ಹಾಗೂ ಕುಲಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಇದ್ದರು.