ಕುಲಗೋಡ ಗ್ರಾ.ಪಂ ನೂತನ ಅಧ್ಯಕ್ಷರಾಗಿ ವಿಮಲಾ ಸಸಾಲಟ್ಟಿ ಉಪಾಧ್ಯಕ್ಷರಾಗಿ ಬಸವರಾಜ ಯರಗಟ್ಟಿ ಅವಿರೋದ ಆಯ್ಕೆ.
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಅಧ್ಯಕ್ಷ,ಉಪಾಧ್ಯಕ್ಷ ತೆರುವಾದ ಸ್ಥಾನಕ್ಕೆ ಶನಿವಾರ ಮುಂಜಾನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ವಿಮಲಾ ಸಸಾಲಟ್ಟಿ ಉಪಾಧ್ಯಕ್ಷರಾಗಿ ಬಸವರಾಜ ಯರಗಟ್ಟಿ ಅವಿರೋದ ಆಯ್ಕೆಯಾಗಿದ್ದಾರೆ ಎಂದು ಚುನವಣಾ ಅಧಿಕಾರಿ ಅಶ್ವಿನ ಎಚ್ ತಿಳಿಸಿದ್ದಾರೆ.
ಹಿಂದಿನ ಅಧ್ಯಕ್ಷ,ಉಪಾಧ್ಯಕ್ಷರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಂತೆ ವಿಮಲಾ ಸಸಾಲಟ್ಟಿ ಹಾಗೂ ಬಸವರಾಜ ಯರಗಟ್ಟಿ ಮಾತ್ರ ನಾಮ ಪತ್ರ ಸಲ್ಲಿಸಿದ್ದು ಅವಿರೋಧವಾಗಿ ಕುಲಗೋಡ ಗ್ರಾ.ಪಂ ಅಧ್ಯಕ್ಷರಾಗಿ ವಿಮಲಾ ಸಸಾಲಟ್ಟಿ ಉಪಾಧ್ಯಕ್ಷರಾಗಿ ಬಸವರಾಜ ಯರಗಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಟಿ.ಎ.ಪಿ.ಎಮ್.ಎಸ್ ಅಧ್ಯಕ್ಷರಾದ ಅಶೋಕ ನಾಯಿಕ. ಜಿ.ಪಂ ಸದಸ್ಯ ಗೋವಿಂದ ಕೊಪ್ಪದ. ಸುಭಾಸ ವಂಟಗೋಡಿ. ಗ್ರಾ.ಪಂ ಸದಸ್ಯರಾದ ಬಸನಗೌಡ ಪಾಟೀಲ. ಸತೀಶ ವಂಟಗೋಡಿ. ತಮ್ಮಣ್ಣಾ ದೇವರ. ಗೋಪಾಲ ತಿಪ್ಪಿಮನಿ. ಶೋಭಾ ಬೈರನಟ್ಟಿ. ಗೌರವ್ವಾ ಸಮಗಾರ. ಶ್ರೀಪತಿ ಗಣಿ. ಶೋಭಾ ಪೂಜೇರಿ. ನಾಗೇಶ ಬಂಡಿವಡ್ಡರ. ಮಿನಾಕ್ಷಿ ಹಾದಿಮನಿ. ಲಕ್ಷ್ಮೀ ಬಾಗಿಮನಿ. ಹೇಮಾ ಕುರಬೇಟ. ದ್ಯಾಮವ್ವಾ ನಂದಿ. ಪಿ.ಡಿ.ಓ ಸದಾಶಿವ ದೇವರ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.