ಕುಲಗೋಡ: ಮೊಬೈಲ್ ಯುಗದಲ್ಲಿ ಗುರು ಹಿರಿಯರ ನಾಮಸ್ಮರಣೆ ಮಾಡುವದು ಮರೆಯಾಗಿ ಹೊಗಿದೆ. 20 ವರ್ಷಗಳ ಬಳಿಕ ಸ್ನೇಹಿತರು ಸೇರಿ ಗುರುವಂದನೆ ಮಾಡಿದ್ದು ಅಪರೂಪ ಎಂದು ಮ.ನಿ.ಪ್ರ.ಸ್ವ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಎನ್.ಎಸ್.ಎಫ್ ಶಾಲೆಯಲ್ಲಿ 2002-03 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳಿಂದ ಇಂದು ನಡೆದ ಗುರುವಂದನಾ ಹಾಗೂ ಸ್ನೇಹ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನ ಬೆಳೆದು ಮಾನವನ ಕೈಗೆ ಬಂದಂತೆ ಸಂಭಂದಗಳು ಹಾಳಾಗುತ್ತಿರುವ ಕಾಲದಲ್ಲಿ ನೀವುಗಳು ಸೇರಿ ಗುರು ಶಿಷ್ಯರ ಚಿರ ಬಾಂಧವ್ಯ ಬೆಸೆಯಲು ನಾಂದಿಯಾದಿರಿ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ ಮಾಳಗೆನ್ನವರ ಮಾತನಾಡಿ ಹುಟ್ಟಿದಾಗ ಉಸಿರು ಇರುತ್ತೆ ಹೆಸರು ಇರಲ್ಲಾ. ಬೆಳೆದು ಶಿಕ್ಷಣತಂತರಾಗಿ ಹೆಸರು ಉಳಿಯುವ ಕೇಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ತಾವು ಕಲಿತ ಎನ್.ಎಸ್.ಎಫ್ ಶಾಲೆಯ ಹಾಲಿ ಹಾಗೂ ವರ್ಗಾವಣೆಗೊಂಡ 45 ಜನ ಶಿಕ್ಷಕರಿಗೆ ಸತ್ಕರಿಸಿದರು. ನಂತರ ವಿಧ್ಯಾರ್ಥಿಗಳ, ಶಿಕ್ಷಕರ ನುಡಿ ನಮನ. ದೀಪ ದಾನ ಕಾರ್ಯಕ್ರಮ ಹಾಗೂ ಮನರಂಜನೆ ಕಾರ್ಯಕ್ರಮ ನಂತರ ಪ್ರೀಯ ಭೋಜನ ಸವಿದರು.
ಸಂದರ್ಭದಲ್ಲಿ ಎಲ್.ವ್ಹಿ ಕಮತ. ಎಸ್.ಬಿ ಸಿದ್ನಾಳ. ಎ.ಜಿ ಕೋಳಿ. ಆರ್.ಎಸ್ ಗುಡಕೇತ್ತರ. ಎ.ವ್ಹಿ ಮಳಲಿ. ಬಿ.ಟಿ ಕೋಟಿ. ಆರ್.ಎಮ್.ಪಟಾತ. ಎಸ್.ಪಿ. ಮಡ್ಡಿ. ಎಸ್.ಪಿ ಕಬ್ಬೂರಮಠ. ಎಸ್.ಸಿ ಗಲಗಲಿ. ಬಿ.ಡಿ ಬುದ್ನಿ. ಆರ್.ಜಿ ಬುಸರಡ್ಡಿ. 2002-03 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳು ಹಾಗೂ ಆಯೋಜಕರಾದ ಶ್ರೀಧರ ಯಕ್ಸಂಬಿ. ಬಸವರಾಜ ತಿಪ್ಪಿಮನಿ. ನಿಂಗಪ್ಪ ತಿಪ್ಪಿಮನಿ. ವೆಂಕಮ್ಮ ಕುರಬಚನ್ನಾಳ. ದೀಪಾ ಕಂಬಾರ. ಗಾಯತ್ರಿ ಗಸ್ತಿ. ದುಂಡಪ್ಪ ಹೊಸಮನಿ. ಸದಾಶಿವ ಲಕ್ಷ್ಮೇಶ್ವರ. ನಾರಾಯಣ ಚನ್ನಾಳ. ಅರ್ಚನಾ ನಾಗರೇಶಿ. ನೇತ್ರಾವತಿ ಗುಡಗುಡಿ ಹಾಗೂ ಸ್ನೇಹಿತರು ಇದ್ದರು.