ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಚಿತ ಅಹಾರ ದಾನ್ಯ ವಿತರಣೆ.
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಒಟ್ಟು 250 ಕುಟುಂಬಗಳಿಗೆ ಸಮಜ್ಯಕಲ್ಯಾಣ ಇಲಾಖೆಯಿಂದ ಉಳಿತಾಯದ ಆಹಾರ ದಾನ್ಯ ವಿತರಣೆ ಇಂದು ಮುಂಜಾನೆ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಿಟ್ ವಿತರಿಸಿಲಾಗಿದೆ. ಪಜಾ,ಪಪಂ ಜನರು ಕರೋನಾ ಸಂಕಷ್ಟದಲ್ಲಿ ಕಷ್ಟ ಎದುರಿಸುತಿದ್ದು. ಅವರಿಗೆ ಆಸರೆಯಾಗಿ ಇಲಾಖೆ ನಿಂತಿದೆ. ಪ್ರಸ್ತುತ ಸಾಲಿನ ಉಳಿತಾಯದ ಆಹಾರ ಧಾನ್ಯ ಅಕ್ಕಿ, ಗೋದಿ ವಿತರಿಸಿದ್ದು ಜನರಿಗೆ ಅನಕುಲವಾಗಿದೆ ಎಂದರು ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಕಿಟ್ ವಿತರಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಹಾಸ್ಟೇಲ ವಾರ್ಡನ ರಾಜು ಗೋಲಬಾಂವಿ. ತಮ್ಮಣ್ಣಾ ದೇವರ. ಸತೀಶ ವಂಟಗೋಡಿ. ಶ್ರೀಪತಿ ಗಣಿ. ಮುದಕಪ್ಪಾ ನಾಯಿಕ. ಅಶೋಕ ಪೂಜೇರಿ. ಶಂಕರ ಹಾದಿಮನಿ.ಲಕ್ಷ್ಮಣ ನಂದಿ. ಮುದಕಪ್ಪ ಕುರಬೇಟ. ನಾಗೇಶ ಬಂಡಿವಡ್ಡರ. ರಾಜು ಕೊಪ್ಪದ. ಕಲ್ಲಪ್ಪ ಗಂಗನ್ನವರ. ಬಸು ಅಮಾತಿ. ಉದಯಕುಮಾರ. ರಡ್ಡೇರಟ್ಟಿ. ರಮೇಶ ಲಗಳಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.