ಬೆಟಗೇರಿ:ಸಮೀಪದ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಪಸಿ, ಕೆಮ್ಮನಕೋಲ, ಸಜ್ಜಿಹಾಳ ಗ್ರಾಮಗಳಲ್ಲಿ ಲೋಕೊಪಯೋಗಿ ಇಲಾಖೆಯ ಎಸ್‍ಸಿಪಿಟಿಎಸ್‍ಪಿ ಯೋಜನೆಯ ಸುಮಾರು 84 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಜ.31ರಂದು ವಿವಿಧ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಲಕ್ಷ್ಮಣ ಹರಿಜನ, ಹನುಮಂತ ಪೂಜೇರಿ, ವಾಸು ಗಲಗಲಿ, ಗುರುನಾಥ ದಳವಾಯಿ, ಮಾರುತಿ ಬಣಜಿಗೇರ, ರಾಯಪ್ಪ ತಿರಕನ್ನವರ, ಸಿದ್ದನಗೌಡ ಪಾಟೀಲ, ಗುರುನಾಥ ಕುರೇರ, ರೇವಪ್ಪ ಗೌಡನ್ನವರ, ಸಿದ್ದಪ್ಪ ಸುಳ್ಳನ್ನವರ, ಯಮನಪ್ಪ ವಾಳದ, ಲಕ್ಷ್ಮಣ ಅರಬನ್ನವರ, ಗುತ್ತಿಗೆದಾರ ಮಹಾನಿಂಗ ಸಾಯಣ್ಣವರ, ಬಾಬು ನಾಯ್ಕ, ಕಲ್ಲಪ್ಪ ಕುದರಿ, ಮುತ್ತೆಪ್ಪ ಬಾಗೇವಾಡಿ, ಶ್ರೀಶೈಲ ಬಡಿಗೇರ, ಗ್ರಾಪಂ ಸದಸ್ಯರು, ಗಣ್ಯರು, ಸ್ಥಳೀಯರು ಇದ್ದರು.