‘ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ’
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 101ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಮುಖ್ಯ ಅತಿಥಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಅವರು ಮಾತನಾಡಿ ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನದಾಸೋಹ ಕಾರ್ಯವು ಶ್ಲಾಘನೀಯ ಕೆಲಸ ಮಾಡುತ್ತಲಿದೆ’ ಎಂದು ಹೇಳಿದರು.
ಬಸವರಾಜ ಮತ್ತು ಕಿರಣ ಕುದರಿ ಸಹೋದರರು ತಮ್ಮ ತಂದೆ ಗೂಳಪ್ಪ, ತಾಯಿ ಶಾಂತವ್ವ ಅವರ ಪುಣ್ಯಸ್ಮರಣೆ ನಿಮಿತ್ತವಾಗಿ ಅನ್ನದಾಸೋಹವನ್ನು ಮಾಡಿದ್ದರು. ಹಿರಿಯಜ್ಜಿ ಈರವ್ವ ಬಸಪ್ಪ ಕುದರಿ ದಾಸೋಹಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ ಪ್ರಾಸ್ತಾವಿಕ ಮಾತನಾಡಿದರು.
ಲಯನ್ಸ್ ಕ್ಲಬ್ ಸದಸ್ಯರಾದ ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಸಂಜಯ ಶಿಂಧಿಹಟ್ಟಿ, ಪುಲಕೇಶ ಸೋನವಾಲಕರ, ಗಿರೀಶ ಆಸಂಗಿ, ಸಂದೀಪ ಸೋನವಾಲಕರ, ಶಿವಲಿಂಗ ಪಾಟೀಲ ಭಾಗವಹಿಸಿದ್ದರು.
350ಕ್ಕೂ ಅಧಿಕ ಸಂಖ್ಯೆಯಲ್ಲಿ ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.