ಮಸಗುಪ್ಪಿಯಲ್ಲಿ ಮಹಾಲಕ್ಷ್ಮೀದೇವಿ ಮತ್ತು ಬಸವೇಶ್ವರ ಜಾತ್ರೆ
ಮೂಡಲಗಿ: ಘಟಪ್ರಭೆ ನದಿಯ ತೀರದಲ್ಲಿ ಜನಿಸಿ ಭಕ್ತರ ಭಾಗ್ಯದಾತೆಯಾಗಿ ತನ್ನ ಕೀರ್ತಿಯನ್ನು ಜಗಕ್ಕೆ ತೋರಿದ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮೀ ದೇವಿ ಹಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ಫೆ. 10 ರಿಂದ 12 ರವರಿಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಗ್ರಾಮೀಣ ಕ್ರೀಡೆಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಭರಮಪ್ಪ ಗಂಗನ್ನವರ ತಿಳಿಸಿದರು.
ಶುಕ್ರವಾರದಂದು ತಾಲೂಕಿನ ಮಸಗುಪ್ಪಿಯ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವದ ಆಮಂತ್ರ ಪತ್ರಿಕೆಯನ್ನು ಬಿಡುಗಡೆಗೋಳಿಸಿ ಜಾತ್ರಾ ಮಹೋತ್ಸವದ ಮಾಹಿತಿ ನೀಡಿದ ಅವರು ಸೋಮವಾರ ಫೆ.10 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ಮಹಾಲಕ್ಷ್ಮೀದೇವಿಗೆ ಹಾಗೂ ಶ್ರೀ ಬಸವೇಶ್ವರ ಅಭಿಷೇಕ ಮತ್ತು ವಿಷೇಶ ಪೂಜೆ ಜರುಗುವುದು, ಮುಂ 10 ಗಂಟೆಗೆ ಅರಬಾವಿಯ ಶ್ರೀ ಬಸವಲಿಂಗ ಶ್ರೀಗಳು, ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳ ಹಸ್ತದಿಂದ ನೂತನ ಮಹಾದ್ವಾರ ಹಾಗೂ ಕಲ್ಯಾಣ ಮಂಟಪ ಉದ್ಘಾನೆಗೋಳ್ಳುವುದು. ಕ್ರಾಂತಿವೀರ ಶ್ರೀ ಭಗತ್ ಸಿಂಗ್ ವ್ಹಾಲಿಬಾಲ್ ಕ್ಲಬ್ ಮಸಗುಪ್ಪಿ ಆಶ್ರಯದಲ್ಲಿ ವ್ಹಾಲಿಬಾಲ್ ಪಂದ್ಯಾವಳಿ ಮಧ್ಯಾಹ್ನ 4ಕ್ಕೆ ಟಗರಿನ ಕಾಳ ಸಾಯಂಕಾಲ 5ಗಂಟೆಗೆ ರಥೋತ್ಸವ, ರಾತ್ರಿ 9=30ಕ್ಕೆ ರಸಮಂಜರಿ ಕಾರ್ಯಕ್ರಮ ಜರುಗುವವು.
ಮಂಗಳವಾರ ಫೆ.11 ರಂದು 5ಕ್ಕೆ ಅಭಿಷೇಕ 8 ಗಂಟೆಗೆ ಗ್ರಾಮ ದವತೆಗಳ ಉಡಿ ತುಂಬುವ ಕಾರ್ಯಕ್ರಮ, 10 ಗಂಟೆಗೆ ನೈವೇದ್ಯ ನಂತರ ಜರುಗುವ ಎತ್ತುಗಳ ತೆರೆಬಂಡಿ ಸ್ಪರ್ಧೆಯ ಸಮಾರಂಭದ ಸಾನಿಧ್ಯವನ್ನು ಭಗೀರಥ ಪೀಠದ ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಗಾಟಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಸಂಸದರಾದ ಜಗದೀಶ ಶೆಟ್ಟರ, ಈರಣ್ಣಾ ಕಡಾಡಿ ಜ್ಯೋತಿ ಬೆಳಗಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಮತ್ತು ಅನೇಕ ಜನ ಪ್ರನಿಧಗಳು, ಗಣ್ಯರು ಭಾಗವಹಿಸುವರು. ಸಂಜೆ 5ಕ್ಕೆ ಕಲ್ಲಪ್ಪ ಹ.ಉಪ್ಪಾರ ಅವರು ತರೆಬಂಡಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು. ಸಂಜೆ 6ಕ್ಕೆ ವಾಲಗ ಮೇಳಗಳ ಆಹ್ವಾನ, ಸುತ್ತಮುತ್ತಲಿನ ಗ್ರಾಮಗಳ ದೇವರುಗಳು ಕೂಡುವವು ಎಂದರು.
ಸಂಜು ಹೊಸಕೋಟಿ ಮಾತನಾಡಿ ಬುಧವಾರ ಫೆ.12 ರಂದು ಬೆಳಿಗ್ಗೆ ಮಹಾಲಕ್ಷ್ಮೀ ಅಭಿಷೇಕ ನಂತರ ನೈವೇದ್ಯೆ 10 ಗಂಟೆಗೆ ಹಾಗೂ ದಟ್ಟಿ ಆಟ ಮತ್ತು ಸಾತಪ್ಪ ರುದ್ರಪ್ಪ ಕೊಳದುರ್ಗಿ ಹಾಗೂ ಸಹೋದರಿಂದ ಅನ್ನಸಂತರ್ಪಣೆ ಜರುಗುವುದು. ರಾತ್ರಿ 9-30ಕ್ಕೆ ಶ್ರೀ ಭಗೀರಥ ನಾಟ್ಯ ಸಂಘದಿಂದ ಮಸಗುಪ್ಪಿ ಹುಲಿ ಎಂಬ ಸಾಮಾಜಿಕ ನಾಟ ಜರುಗುವುದು. ಎತ್ತುಗಳ ತೆರೆಬಂಡಿ ಸ್ಪರ್ಧೆಯ ಬಹುಮಾನಗಳು 40 ಸಾವಿರ, 30 ಸಾವಿರ, 25ಸಾವಿರ, 20 ಸಾವಿರ, 15 ಸಾವಿರ, 12 ಸಾವಿರ, 10 ಸಾವಿರ, 8 ಸಾವಿರ, 5 ಸಾವಿರ ಕ್ರಮವಾಗಿ ಒಂದರಿಂದ ಒಂಬತ್ತು ವಿಜೇತರಿಗೆ ನೀಡಲಾಗುವುದು ಮತ್ತು ಒಂದು ಡಾಲ್ ಮತ್ತು ನಿಶಾನೆ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವರು ಅಧಿಕ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಮೊ-7353119551, 9902516016 ಗೆ ಸಂಪರ್ಕಿಸ ಬಹುದು.
ಈ ಸಮಯದಲ್ಲಿ ಗ್ರಾಪಂ. ಅಧ್ಯಕ್ಷ ಬಸವರಾಜ ಬುಜನ್ನವರ, ಆನಂದ ಹೊಸಕೋಟಿ, ಭರಮಪ್ಪ ಆಶಿರೋಟ್ಟಿ, ಬಸವರಾಜ ಮೆಣಸಿ, ವೆಂಕಟೇಶ ಪಾಟೀಲ, ಚಿದಾನಂದ ಅಳಗೋಡಿ, ಈಶ್ವರ ಗಾಡವಿ ಉಪಸ್ಥಿತರಿದ್ದರು.