ವಡೇರಹಟ್ಟಿ ಗ್ರಾಮದಲ್ಲಿ ಕೊರೋನಾ ಪರೀಕ್ಷೆ ಜರುಗಿತು.
ಮೂಡಲಗಿ: ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕೊರೋನಾ ಪರೀಕ್ಷೆ ಜರುಗಿತು.
ಆರೋಗ್ಯ ಇಲಾಖೆಯ ಮಹಿಳಾ ಕಿರಿಯ ಸಹಾಯಕಿ ಪಿ.ಎಫ್.ಕೋಲಕಾರ ಮಾತನಾಡಿ, ಕೋರೋನ ಮಹಾಮಾರಿ ರೋಗಕ್ಕೆ ಹೇದುರುವ ಅವಶ್ಯಕತೆ ಇಲ್ಲ, ಕೊರೋನಾ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಮನೆಯಲ್ಲಿ ಅನುಸರಿಸಬೇಕು, ಒಂದು ವೇಳೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಕ್ಷಣಗಳ ಅನುಗನವಾಗಿ ವೈಧ್ಯಕೀಯ ಸೌಲಭ್ಯವನ್ನು ಕಹಾಮ ಅಧ್ಯಕ್ಷರು ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರಗಳ ವ್ಯವಸ್ಥೆಯನ್ನು ಮಾಡಿದ್ದಾರೆ ಕಾರಣ ಎಲ್ಲ ಹೆದ್ದರದೆ ಧೈರ್ಯವಾಗಿ ಇರಬೇಕೆಂದರು.
ಕಾರ್ಯಕ್ರಮದಲ್ಲಿ ಬಾನಂತಿಯರು, ರಜೆಯಲ್ಲಿದ್ದ ಸೈನಿಕರು ನಾಗರಿಕರು ಭಾಗವಹಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು.
ಈ ಸಮಯದಲ್ಲಿ ಮಸಗುಪ್ಪಿ ಆರೋಗ್ಯ ಕೇಂದ್ರ ಎಮ್.ಜೋಗಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಮುಖಂಡರ ಇದ್ದರು.