Breaking News
Home / Recent Posts / ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮುಖಾಂತರ 4. ಲಕ್ಷ ರೂ ವಿಮೆ

ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮುಖಾಂತರ 4. ಲಕ್ಷ ರೂ ವಿಮೆ

Spread the love

ಮೂಡಲಗಿ: ವಿಶ್ವಮಾನ್ಯ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡನೆಯ ಅವಧಿಯ ಎರಡು ವರ್ಷಗಳನ್ನು ಪೂರೈಸಿದ ಈ ಸಮಯದಲ್ಲಿ ಕರೋನಾ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಪಂಚಾಯತ ಸಿಬ್ಬಂದಿ ಸೇರಿದಂತೆ ಅನೇಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮುಖಾಂತರ 4. ಲಕ್ಷ ರೂ ವಿಮೆಗೆ ಒಳಪಡಿಸುವ ಮೂಲಕ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಇಡಿ ರಾಜ್ಯಾದ್ಯಾಂತ ಸೇವಾ ಕಾರ್ಯಗಳ ಮೂಲಕ ಸಂಭ್ರಮ ಪಡುತ್ತಿದ್ದಾರೆಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.


ರವಿವಾರ ಮೇ 30 ರಂದು ಕಲ್ಲೋಳಿ ಪಟ್ಟಣದಲ್ಲಿ ಕರೋನಾ ವಾರಿಯರ್ಸಗಳಿಗೆ ಸೇವಾ ಸಂಸ್ಥೆಯ ಮುಖಾಂತರ ವಿಮಾ ಪಾಲಿಸಿ ಅರ್ಜಿಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ, ಕೇಂದ್ರ ಸರ್ಕಾರದ ಏಳು ವರ್ಷಗಳ ಸಂಭ್ರಮಾಚರಣೆಯ ನೆನಪಿಗಾಗಿ ಸಸಿ ನೆಟ್ಟು ಮಾತನಾಡಿದ ಈರಣ್ಣ ಕಡಾಡಿ ಅವರು ಕರೋನಾ ಚೀನಾ ಗಡಿ ತಂಟೆ ಕಾರ್ಮೋಡದ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕು ಸ್ಥಾಪನೆ, 34 ವರ್ಷಗಳ ಬಳಿಕ ನೂತನ ಶಿಕ್ಷಣ ನೀತಿ, ಸಂಸತ್ ಹೊಸ ಕಟ್ಟಡ ಸೆಂಟ್ರಲ್ ವಿಸ್ತಾಗೆ ಕಾರ್ಯಾರಂಭ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಕ ರದ್ದತಿ, ಪೌರತ್ವ ಕಾಯ್ದೆ ಜಾರಿ, ಕೃಷಿ ವಲಯಕ್ಕೆ ಉತ್ತೇಜನೆ, ವೈಜ್ಞಾನಿಕ ಕ್ಷೇತ್ರ, ರಕ್ಷಣಾ ವಲಯ, ಕೈಗಾರಿಕೆಗಳು ಹಾಗೂ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಳು ವರ್ಷಗಳ ಆಡಳಿತ ಭಾರತಕ್ಕೆ ಬಲ ತುಂಬಿದೆ ಎಂದು ಸರ್ಕಾರದ ಸಾಧನೆಯನ್ನು ಕಡಾಡಿ ಅವರು ಬಣ್ಣಿಸಿದರು.


ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ, ಪಟ್ಟಣ ಪಂಚಾಯತ ಸದಸ್ಯ ಶಂಕರ ಮಕ್ಕಳಗೇರಿ, ನ್ಯಾಯವಾದಿ ಶಂಕರ ಗೋರೋಶಿ, ಮುಖ್ಯಾಧಿಕಾರಿ ಅರುಣಕುಮಾರ, ಜಿಲ್ಲಾ ಬಿಜೆಪಿ ಮಾಜಿ ಕೋಶಾಧ್ಯಕ್ಷ ಪರಪ್ಪ ಗಿರೆಣ್ಣವರ, ಕೆಂಪಣ್ಣ ಮಕ್ಕಳಗೇರಿ, ಹಣಮಂತ ಕಲಕುಟ್ರಿ ಸೇರಿದಂತೆ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ