Breaking News
Home / Recent Posts / ಯಾದವಾಡ ಗ್ರಾಮದಲ್ಲಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಯಾದವಾಡ ಗ್ರಾಮದಲ್ಲಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

Spread the love

 

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಮುಖಂಡ ವೀರಣ್ಣ ಮೋಡಿ ಮಾತನಾಡಿ, ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಒಂದು ಲೀಟರ್ ಪೆಟ್ರೋಲ್ ದರ 100 ರೂಪಾಯಿ ಆದ ಕಾರಣ ಜನಸಾಮಾನ್ಯರ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು ನರೇಂದ್ರ ಮೋದಿಯವರು ಸ್ವಯಂಪ್ರೇರಿತವಾಗಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಹಣಮಂತ ಚೆಕ್ಕೆಗೌಡರ ಮಾತನಾಡಿ, ದಿನಬಳಕೆ ವಸ್ತುಗಳ ಬೆಲೆ ಇಂಧನ ಬೆಲೆ ಅಗತ್ಯವಸ್ತುಗಳ ದರವನ್ನು ಜಾಸ್ತಿ ಮಾಡಿ ನರೇಂದ್ರ ಮೋದಿಯವರು ಬಡವರ ಮರಣಶಾಸನ ಬರೆಯುತ್ತಿದ್ದಾರೆಂದು
ಈ ಪ್ರತಿಭಟನೆಯಲ್ಲಿ ಕೌಜಲಗಿ ಬ್ಲಾಕ್ ಅಧ್ಯಕ್ಷ ಲಗಮಣ್ಣ ಕಳಸಣ್ಣವರ ,ಯೂಥ ಕಾಂಗ್ರೆಸ್ ಅಧ್ಯಕ್ಷ ಮಂಜು ಮಸಗುಪ್ಪಿ, ಸದಾಶಿವ ಮಾಕಾಳಿ, ರಫಿಕ ಜಿಡ್ಡಿಮನಿ, ಮಾರುತಿ ಹಣಗಂಡಿ, ಯಾಕೂಬ ತೊಂಡಿಕಟ್ಟಿ, ಸಂಜು ಬಾಗಿ ಮುಂತಾದವರು ಭಾಗವಹಿಸಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ