Breaking News
Home / Recent Posts / ನಾಡಿನ ಸೇವಕನಾಗಿ ಜನತೆಯ ಆರ್ಶಿವಾದದ ಋಣ ತೀರುಸುವೆ-ಸಂಸದ ಈರಣ್ಣ ಕಡಾಡಿ

ನಾಡಿನ ಸೇವಕನಾಗಿ ಜನತೆಯ ಆರ್ಶಿವಾದದ ಋಣ ತೀರುಸುವೆ-ಸಂಸದ ಈರಣ್ಣ ಕಡಾಡಿ

Spread the love

ನಾಡಿನ ಸೇವಕನಾಗಿ ಜನತೆಯ ಆರ್ಶಿವಾದದ ಋಣ ತೀರುಸುವೆ-ಸಂಸದ ಈರಣ್ಣ ಕಡಾಡಿ

ಮೂಡಲಗಿ: ಸತತ ಮೂರು ದಶಕಗಳ ಕಾಲ ಸಾರ್ವಜನಿಕ ಹೋರಾಟಗಳನ್ನು ಗಮನಿಸಿ ಪಕ್ಷದ ಹಿರಿಯರು ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ ಮೇಲೆ ಈ ಸದಾವಕಾಶವನ್ನು ಉಪಯೋಗಿಸಿಕೊಂಡು ನಾಡಿನ ಸೇವೆ ಮಾಡುವ ಮೂಲಕ ಜನರ ಋಣ ತಿರುಸುವ ಕೆಲಸ ಮಾಡುವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ಜುಲೈ 06ರಂದು 2021-22ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅನಿಯಮಿತ ವಿದ್ಯುತ್ ಪೂರೈಕೆಗಾಗಿ ನೂತನ ಜನ್‍ರೇಟರ್ ಒದಗಿಸಿ ಅದರ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಅನುದಾನದ ಪ್ರಥಮ ಬಳಕೆಗೆ ನನ್ನ ಕರ್ಮ ಭೂಮಿಯಿಂದಲೇ ಚಾಲನೆ ನೀಡುತ್ತಿರುವದು ನನ್ನ ಸೌಭಾಗ್ಯ ಎಂದರು.


ಅನೀರಿಕ್ಷಿತವಾಗಿ ಎದುರಾದ ಕೋವಿಡ್-19 ಪರಿಣಾಮದಿಂದ ನಿರ್ಮಿತವಾದ ಈ ಪರಿಸ್ಥಿತಿಯನ್ನು 3ನೇ ಅಲೆ ಬಂದಾಗಲು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ತಾಲೂಕಾಡಳಿತ ಸಂಪೂರ್ಣವಾಗಿ ಸಜ್ಜಾಗಿರಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಆ ನಿಟ್ಟಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಅನುದಾನವನ್ನು ವೈದ್ಯಕೀಯ ಸೌಲಭ್ಯಗಳನ್ನು ಮೇಲ್ದೆರ್ಜೆಗೆ ಪ್ರಾದಾನ್ಯತೆ ನೀಡಲಾಗಿದೆ. ವೈದ್ಯರು ಹಾಗೂ ಅಧಿಕಾರಿಗಳ ನಿಸ್ವಾರ್ಥ ಸೇವೆಯನ್ನು ಈ ಸಮಯದಲ್ಲಿ ಸ್ಮರಿಸಿದರು.
ಮೂಡಲಗಿ ತಹಶೀಲ್ದಾರ ಡಿ. ಜಿ. ಮಹಾತ, ತಾಲೂಕಾ ವೈದ್ಯಾಧಿಕಾರಿ ಡಾ. ಮುತ್ತೇಪ್ಪ ಕೊಪ್ಪದ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್.ಆಯ್ ಹಾಲಪ್ಪ ಬಾಲದಂಡಿ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಬಿಜೆಪಿ ಪ್ರಮುಖರಾದ ಪ್ರಕಾಶ ಮಾದರ, ರಾಯಪ್ಪ ಬಾನಸಿ, ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಕುಮಾರ ಗಿರಡ್ಡಿ, ಹಣಮಂತ ಸತರಡ್ಡಿ, ಸಿದ್ದಲಿಂಗಪ್ಪ ಯರಗಟ್ಟಿ, ಶಿವಾನಂದ ತುಪ್ಪದ, ಮಹಾಲಿಂಗಯ್ಯ ಹಿರೇಮಠ, ಯಮನಪ್ಪ ಮೇತ್ರಿ, ಜಗದೀಶ ತೇಲಿ, ಪಾಂಡು ಮಹೇಂದ್ರಕರ, ನಾಗರಾಜ ಹುದಲಿ, ಕುಮಾರ ಗಿರಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ