Breaking News
Home / Recent Posts / ಕೊರೋನಾ ವಾರಿಯರ್ಸ್‍ನವರು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದಾರೆ – ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ

ಕೊರೋನಾ ವಾರಿಯರ್ಸ್‍ನವರು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದಾರೆ – ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ

Spread the love

ಮೂಡಲಗಿ: ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆ ಅನೇಕ ವಾರಿಯರ್ಸ್‍ನವರು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದಾರೆ. ವರದಿಗಾರರು ಪ್ರತಿನಿತ್ಯ ಜರುಗುವ ಘಟನಾವಳಿಗಳನ್ನು ಪತ್ರಿಕಾ ಕಾರ್ಯಾಲಯಗಳಿಗೆ ಸುದ್ದಿ ಮುಟ್ಟಿಸಿದರೆ ವಿತರಕರು ಪ್ರತಿದಿನ ಮುಂಜಾನೆ ಮನೆ ಮನೆಗಳಿಗೂ ಪತ್ರಿಕೆ ವಿತರಿಸುವರು. ದೃಶ್ಯ, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಎಚ್ಚರಿಸುವ ಕಾರ್ಯ ಮೆಚ್ಚುವಂತಹದಾಗಿದೆ ಎಂದು ಅರಭಾಂವಿ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.

ಅವರು ಪಟ್ಟಣದ ತಾಲೂಕಾ ಪ್ರೇಸ್ ಕ್ಲಬ್‍ನಲ್ಲಿ ಜರುಗಿದ ವರದಿಗಾರರಿಗೆ ಹಾಗೂ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಕೊವೀಡ್-19 ಎರಡನೇ ಅಲೆಯುವ ಸ್ವಲ್ಪಮಟ್ಟಿಗೆ ಇಳಿಮುಖ ಕಾಣುತ್ತಿದೆ. ಅಲೆಯ ಅರ್ಭಟದ ಸಂದರ್ಭದಲ್ಲಿ ವೈದ್ಯಕೀಯ ವ್ಯತ್ಯಯ ಉಂಟಾಗಿ ಸಾಕಷ್ಟು ಪ್ರಾಣ ಹಾನಿಗಳಾದವು. ಆ ಸಂದರ್ಭದಲ್ಲಿ ವೈದ್ಯಕೀಯ ನೇರವು ನೀಡಲು, ಅಂಬುಲೆನ್ಸ್, ವೆಂಟಿಲೆಷನ್, ಆಕ್ಸಿಜನ್ ವ್ಯವಸ್ಥೆ ಅಷ್ಟೇ ಅಲ್ಲದೆ ಬೆಡ್‍ಗಳ ವ್ಯವಸ್ಥೆಗೆ ನೇರವು ನೀಡುವಲ್ಲಿ ಮಾಧ್ಯಮ ಮಿತ್ರರು ಮಹತ್ತರ ಪಾತ್ರವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಎಸ್.ಆರ್ ಸೋನವಾಲಕರ, ಸಲೀಂ ಇನಾಮದಾರ, ಗಿರಿಶ ಕರಡಿ, ರವೀಂದ್ರ ತುಪ್ಪದ, ರವಿ ಮೂಡಲಗಿ, ಇರ್ಷಾದ ಪೈಲ್ವಾನ, ಪ್ರಕಾಶ ಅರಳಿ, ಮದರಸಾಬ ಜಕಾತಿ, ವಿರುಪಾಕ್ಷ ಮುಗಳಖೋಡ, ಲಕ್ಕಪ್ಪ ಶಾಬನ್ನವರ, ಅಭಯ ಹೊಸಮನಿ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ