ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಕಲ ಸಿದ್ಧತೆ
ಮೂಡಲಗಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧುಕಾರಿ ಅಜೀತ ಮನ್ನಿಕೇರಿ ಹೇಳಿದರು.
ಜು.19 ಹಾಗೂ 22ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ ಕೈಗೊಳ್ಳಲಾದ ಸಿದ್ಧತೆಗಳ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪರೀಕ್ಷೆ ಬೆಳಿಗ್ಗೆ 10.30ಕ್ಕೆ ಇದ್ದರೂ ಕೋವಿಡ್ ಶಿಷ್ಟಾಚಾರದ ಸಲುವಾಗಿ 8.30ಕ್ಕೆ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಬರುವಂತೆ ಸೂಚನೆ ನೀಡಲಾಗಿದೆ.ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವಂತೆ ಆಯಾ ಗ್ರಾಮಪಂಚಾಯತಿಗಳಿಗೆ,ಸುರಕ್ಷಾ ಕ್ರಮ ಕೈಗೊಳ್ಳಲು, ಪೋಲಿಸ್ ಇಲಾಖೆಗೆ ಹಾಗೂ ಆರೋಗ್ಯದ ಕ್ರಮಗಳಿಗಾಗಿ ಆರೋಗ್ಯ ಇಲಾಖೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
12 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಎಂದು ನಿರ್ಧರಿಸಲಾಗಿದ್ದು,ಈ ಬಾರಿ ಮೂಡಲಗಿ ವಲಯದಲ್ಲಿ ಗ್ರಾಮೀಣ ಭಾಗದಿಂದ 4475 ವಿದ್ಯಾರ್ಥಿಗಳು,ನಗರ ಪ್ರದೇಶದಿಂದ 2174 ವಿದ್ಯಾರ್ಥಿಗಳು,ಬಾಹ್ಯ ಕೇಂದ್ರದಿಂದ 102 ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿರುವ 172 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಲಿಂಗವಾರು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮೂಡಲಗಿ ವಲಯದಲ್ಲಿ 3556 ಗಂಡು ಮಕ್ಕಳು, 3069 ಹೆಣ್ಣು ಮಕ್ಕಳು ಪರೀಕ್ಷೆಗಾಗಿ ನೊಂದಾಯಿತರಾಗಿದ್ದು ಮಾಧ್ಯಮವಾರುದಲ್ಲಿ 6252 ಕನ್ನಡ ಮಾಧ್ಯಮ,420 ಆಂಗ್ಲ ಮಾಧ್ಯಮ,194 ಉರ್ದು ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಗಾಗಿ ಎಲ್ಲ ಸಿದ್ಧತೆ ಮುಗಿದಿದ್ದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು 8000 ಮಾಸ್ಕ್,ನಿರಾಣಿ ಫೌಂಡೇಶನ್‍ದವರು ಸ್ಯಾನಿಟೈಸರ್ ಕೊಟ್ಟಿದ್ದಾರೆ ಮತ್ತು ವಿವಿಧ ಸಂಘ ಸಂಸ್ಥೆಗಳು ಕೋವಿಡ್ ರಕ್ಷಣೆಗಾಗಿ ಸಹಾಯ ಹಸ್ತ ಚಾಚಿವೆ.ಉತ್ತಮ ಫಲಿತಾಂಶಕ್ಕಾಗಿ ಪ್ರತ್ಯಕ್ಷ ಸಭೆ, ಗೂಗಲ್ ಮೀಟ್ ಹಾಗೂ 6751 ವಿದ್ಯಾರ್ಥಿಗಳಿಗೆ ಓಎಮ್‍ಆರ್‍ಗಳನ್ನು ಲಭ್ಯ ಮಾಡಿಸಿ, ರೂಢಿಸಲು ಶಿಕ್ಷರಿಗೆ ತಿಳಿಸಲಾಗಿದೆ. ಶಾಲಾ ಹಂತದ ಕ್ಲಸ್ಟರ್ ಹಾಗೂ ಬ್ಲಾಕ್ ಹಂತದ ದೂರವಾಣಿ ಕರೆ ಅಭಿಯಾನವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪರೀಕ್ಷಾ ನೂಡಲ್ ಅಧಿಕಾರಿ ಸತೀಶ ಬಿ ಎಸ್, ಇಸಿಓ ಟಿ ಕರಿಬಸವರಾಜ ಹಾಗೂ ಕಛೇರಿ ಸಿಬ್ಬಂದಿ ಇದ್ದರು.