Breaking News
Home / Recent Posts / ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು-ಪ್ರಕಾಶ ಮಾದರ

ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು-ಪ್ರಕಾಶ ಮಾದರ

Spread the love

ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು-ಪ್ರಕಾಶ

ಮೂಡಲಗಿ: ಡಾ.ಬಾಬಸಾಹೇಬ ಅಂಬೆಡ್ಕರ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ದಲಿತ ಮುಖಂಡ ಪ್ರಕಾಶ ಮಾದರ ಮಾತನಾಡಿದರು.
ಅವರು ಸ್ಥಳೀಯ ಗಂಗಾನಗರದ ಅಂಬೇಡ್ಕರ ಭವನದಲ್ಲಿ ಸೋಮವಾರ ನಡೆದ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ (ಸಂಯೋಜಕ) ಇದರ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಸಂಘಟನೆ ಘಟಕಗಳನ್ನು ಪ್ರಾರಂಭಿಸಬೇಕೆಂದರು.
ಜಿಲ್ಲಾ ಸಂಘಟನಾ ಸಂಚಾಲಕ ಯಶವಂತ ಮಂಟೂರ, ಮಹಿಳಾ ಸಂಘಟನಾ ಜಿಲ್ಲಾಧ್ಯಕ್ಷೆ ಸುನಂದಾ ಭಜಂತ್ರಿ ಮಾತನಾಡಿದರು.
ಪದಾಧಿಕಾರಿಗಳು: ಮೂಡಲಗಿ ತಾಲೂಕಾ ಸಂಘಟನಾ ಸಂಚಾಲಕರಾಗಿ ದಶರಥ ಡೊಳ್ಳಿ, ಖಜಾಂಚಿ ಹುಣಸಿಗಿಡದ, ಮಾನಿಂಗ ಮಾದರ, ಭರಮಪ್ಪ ಹರಿಜನ, ವಿದ್ಯಾರ್ಥಿ ಒಕ್ಕೂಟದ ರಮೇಶ ಹರಿಜನ, ಗ್ರಾಮೀಣ ಸಂಚಾಲಕ ಶಿವಾನಂದ ಮಗದುಮ್ ಮತ್ತು ಗೋಕಾಕ ತಾಲೂಕಾ ಸಂಚಾಲಕರಾಗಿ ದುರ್ಗಪ್ಪ ದಂಡಿನವರ, ಸಂಘಟನಾ ಸಂಚಾಲಕ ಮಂಜುನಾಥ ಹರಿಜನ, ಅಶೋಕ ಜಗನ್ನಾಥ ಅವರು ಆಯ್ಕೆಯಾದರು.
ಪೋಟೊ ಕ್ಯಾಪ್ಸನ್ > ಮೂಡಲಗಿಯ ಗಂಗಾನಗರದ ಅಂಬೇಡ್ಕರ ಭವನದಲ್ಲಿ ಸೋಮವಾರ ನಡೆದ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಕರ್ನಾಟಕ
ರಾಜ್ಯ ದಲಿತ ಸಂಘರ್ಷ ಸಮೀತಿ (ಸಂಯೋಜಕ) ಇದರ ಪದಾಧಿಕಾರಿಗಳನ್ನು ಸನ್ಮಾನಿಸಿದರು.


Spread the love

About inmudalgi

Check Also

ಕನಕದಾಸರು ಕೇವಲ ವ್ಯಕ್ತಿಯಲ್ಲ, ಶೋಷಿತರ ಅತಿ ದೊಡ್ಡ ಧ್ವನಿ:ಬಸವಂತ ಕೋಣಿ

Spread the loveಬೆಟಗೇರಿ:ಕನಕದಾಸರು ಒಬ್ಬ ಕವಿಯಾಗಿ ಬೆಳೆದು, ಸಮಾಜ ಸುಧಾರಕನಾಗಿ, ಸಂತನಾಗಿ ಶಾಶ್ವತವಾಗಿ ಉಳಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ