ಇಂದು ಪತ್ರಕರ್ತರ ಸಂಘ ಉದ್ಘಾಟನೆ
ಮೂಡಲಗಿ: ಪಟ್ಟಣದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಛೇರಿ ಉದ್ಘಾಟನಾ ಸಮಾರಂಭ ಶುಕ್ರವಾರ ಮುಂಜಾನೆ ೯ ಗಂಟೆಗೆ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಬ್ಯಾಂಕಿನ ಸಭಾ ಭವನದಲ್ಲಿ ಜರುಗಲಿದೆ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ತಿಳಿಸಿದ್ದಾರೆ.
ಸಾನಿಧ್ಯವನ್ನು ಪಟ್ಟಣದ ಶ್ರೀ ದತ್ತಾತ್ರಯ ಶ್ರೀಪಾದಬೋಧ ಸ್ವಾಮೀಜಿ ವಹಿಸುವರು, ಅರಭಾಂವಿ ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ವಹಿಸುವರು, ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹದಿಮನಿ, ಜೆಡಿಎಸ್ ಮುಖಂಡ ಭೀಮಪ್ಪಾ ಗಡಾದ, ಕಾಂಗ್ರೇಸ್ ಮುಖಂಡ ಅರವಿಂದ ದಳಾವಾಯಿ, ಕಿತ್ತೂರ ರಾಣಿ ಚನ್ನಮ್ಮ ಬ್ಯಾಂಕಿನ ಸಂಸ್ಥಾಪಕ ಡಾ: ವಿಶ್ವನಾಥ ಸಾಧುನವರ ಹಾಗೂ ಅತಿಥಿಗಳಾಗಿ ತಹಶೀಲ್ದಾರ ಡಿ.ಜಿ.ಮಹಾತ, ಬಿಇಓ ಅಜೀತ ಮನ್ನಿಕೇರಿ, ತಾ.ಪಂ ಎಒ ಸಂದೀಪ ಚೌಗಲಾ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಪಿಐಗಳಾದ ವೆಂಕಟೇಶ ಮುರನಾಳ, ಶ್ರೀಶೈಲ್ ಬ್ಯಾಕೂಡ, ಡಾ: ಭಾರತಿ ಕೋಣಿ, ಹೆಸ್ಕಾಂ ಅಧಿಕಾರಿ ಎಮ್.ಎಸ್.ನಾಗನ್ನವರ, ಪಿಎಸ್‌ಆಯ್ ಗಳಾದ ಎಚ್.ವೈ.ಬಾಲದಂಡಿ, ಎಚ್.ಕೆ.ನೇರಳೆ, ಪ್ರೊ.ಸಂಗಮೇಶ ಗುಜಗೊಂಡ, ಸಾಹಿತಿ ಬಾಲಶೇಖರ ಬಂದಿ, ಸ್ಥಳೀಯ ಪ್ರೆಸ್ ಕ್ಲಬ್ ಅಧ್ಯಕ್ಷ ಎಲ್.ವಾಯ್.ಅಡಿಹುಡಿ, ಕರ್ನಾಟಕ ಪತ್ರಕರ್ತರ ಘಟಕದ ಅಧ್ಯಕ್ಷ ಎಸ್.ಆರ್.ಮುಧೋಳ, ಜನಸೇವಾ ಪತ್ರಕರ್ತರ ಸಂಘದ ಅಧ್ಯಕ್ಷ ಅಕ್ಬರ್ ಪೀರಜಾದೆ ಆಗಮಿಸುವರು ಎಂದು ಸಂಘದ ಕಾರ್ಯದರ್ಶಿ ಮಲ್ಲು ಬೊಳನ್ನವರ ತಿಳಿಸಿದ್ದಾರೆ.