Breaking News
Home / Recent Posts / ಸ್ವಸ್ಥ ನಾಗರಿಕ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಗುರುತರವಾಗಿದ್ದು- ಪ್ರೊ. ಸಂಗಮೇಶ ಗುಜಗೊಂಡ

ಸ್ವಸ್ಥ ನಾಗರಿಕ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಗುರುತರವಾಗಿದ್ದು- ಪ್ರೊ. ಸಂಗಮೇಶ ಗುಜಗೊಂಡ

Spread the love

ಮೂಡಲಗಿ : ಸ್ವಸ್ಥ ನಾಗರಿಕ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಗುರುತರವಾಗಿದ್ದು, ಪತ್ರಿಕೆಗಳು ಅನುದಿನದ ಜಾಗತಿಕ ದರ್ಪಣಗಳಾಗಿದ್ದು, ವಿವಿಧ ಕೇತ್ರದಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತವೆ ಎಂದು ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ಕೆ.ಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಶುಕ್ರವಾರ ಉದ್ಘಾಟಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇಯ ಆಧಾರಸ್ತಭವೆಂದು ವರ್ಣಿಸಿರುವುದು ಮಾರ್ಮಿಕವಾದ ಸಂಗತಿಯಾಗಿದೆ. ಪತ್ರಿಕೋದ್ಯಮ ಬೆಳವಣಿಗೆ ಇಂದು ವಿಶಾಲ ಅವಕಾಶಗಳಿವೆ ಜೊತಗೆ ಜವಾಬ್ದಾರಿಯೂ ಹೆಚ್ಚಿದೆ ಎಂದರು.
ಸ್ವಾತಂತ್ರ್ಯ ಹೋರಾಟ, ಏಕೀಕರಣ ಸಂದರ್ಭಗಳಲ್ಲಿದೆ ನೈಸರ್ಗಿಕ ವಿಪತ್ತುಗಳ ಕಾಲದಲ್ಲಿ ಪತ್ರಿಕೆಗಳು ನಿರ್ವಹಿಸುವ ಪತ್ರಗಳು ನಿರ್ಣಾಯಕವಾಗಿದೆ. ಪ್ರಯೋಜನ ದೃಷ್ಟಿಯಿಂದ ಪತ್ರಿಕೆಗಳ ಮೌಲ್ಯ ಅಗಣಿತವಾಗಿದೆ ಎಂದರು.
ಹಿರಿಯ ಪ್ರತಕರ್ತ ಬಾಲಶೇಖರ ಬಂದಿ, ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ್, ಪಿಎಸ್ ಆಯ್ ಎಚ್.ವಾಯ್.ಬಾಲದಂಡಿ, ಮಾತನಾಡಿ, ಪ್ರಸುತ್ತ ಕೊರೋನಾ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯ ಹಾಗೂ ಸಂಬಂಧದೊಂದಿಗೆ ಇನ್ನಷ್ಟು ಜಾಗೃತಿ ಮೂಡಿಸುವಂತ ಕಾರ್ಯ ಪತ್ರಕರ್ತರಿಂದ ಆಗಬೇಕು ಎಂದರು.
ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ಮಾತನಾಡಿ, ಪತ್ರಕರ್ತರ ಜೀವನ ನಿರ್ವಹಣೆ, ಪತ್ರಿಕೆಗಳ ಮೇಲ್ವಿಚಾರಣೆ ಸವಾಲು ಎದುರಿಸುವುದರ ಜೊತೆಗೆ ಓದುರಗ ನಂಬಿಕೆಗೆ ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಎಲ್ಲ ಮಹನೀಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ಬಿ.ಇ.ಒ ಅಜೀತ ಮನ್ನಿಕೇರಿ, ಬಿ.ಜಿ.ಗಡಾದ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ, ಡಾ. ಭಾರತಿ ಕೋಣಿ, ಚಿಕ್ಕೋಡಿ ಡಿಡಿಪಿಐ ಕಚೇರಿಯ ಅರಿಹಂತ ಬಿರಾದಾರ ಪಾಟೀಲ, ಪತ್ರಕರ್ತ ಎಲ್ ವೈ ಅಡಿಹುಡಿ, ಅಕಬರ ಪೀರಜಾದೆ, ಹಣಮಂತ ತೇರದಾಳ, ಕಿತ್ತೂರ ಚನ್ನಮ್ಮಾ ಬ್ಯಾಂಕಿನ ಮ್ಯಾನೇಜರ್ ಸಂಜಯ ಪಾರ್ಶಿ ಹಾಗೂ ಸಂಘದ ಪದಾಧಿಕರಿಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಶಂಕರ ಹಾದಿಮನಿ ಎಲ್ಲರನ್ನೂ ಸ್ವಾಗತಿಸಿದರು. ಸಿದ್ದಣ್ಣ ದುರದುಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ