ಕೋರ್ಟ ಕಾರ್ಯ ಕಲಾಪಗಳಿಂದ ಹೋರಗುಳಿದು ಪ್ರತಿಭಟಿಸಿದರು.
ಮೂಡಲಗಿ: ನ್ಯಾಯಾದೀಶರ ಮೇಲೆ ಮತ್ತು ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹೀನ ಕೃತ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ಮೇಲೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನ್ಯಾಯವಾದಿಗಳು ಕೋರ್ಟ ಕಾರ್ಯ ಕಲಾಪಗಳಿಂದ ಹೋರಗುಳಿದು ಪ್ರತಿಭಟಿಸಿದರು.
ದಿವಾನಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ನ್ಯಾಯವಾದಿಗಳ ಸಂಘದ ಸರ್ವ ಸದಸ್ಯರು ಸಭೆ ಸೇರಿ ಆದಷ್ಟು ಬೇಗನೆ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಪ್ರತಿಭಟಿಸಿ ಒತ್ತಾಸಿದರು.
ಘಟನೆಯ ಹಿನ್ನಲೆ, ಹುನಗುಂದ ವಕೀಲರ ಸಂಘದ ಸದಸ್ಯರಾದ ಸಂತೋಷ ರಾಂಪೂರ ಇವರ ಮೇಲೆ ಇಳಕಲ್ ಪಿ.ಎಸ್.ಆಯ್ ನಡೆಸಿದ ಹಲ್ಲೆಯ ವಿಷಯವಾಗಿ ಮತ್ತು ರ್ಝಾಖಂಡ ರಾಜ್ಯದ ಧನಭಾಗ ಜಿಲ್ಲೆಯ ಜಿಲ್ಲಾ ಸೆಷÉನ್ಸ ನ್ಯಾಯಾದೀಶರಾದ ಶ್ರೀ ಉತ್ತಮ ಆನಂದ ಅವರ ಹತ್ಯೆಯ ವಿಷಯವಾಗಿ, ಖಂಡಿಸಿ ಪ್ರತಿಭಟನೆ ನಡೆಸಿದರು. ಹುನಗುಂದ ಪಿ.ಎಸ್.ಐ ಮತ್ತು ರ್ಝಾಖಂಡ ನ್ಯಾಯದೀಶರ ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕೆಂದು ಪ್ರತಿಭಟನೆ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದರು .
ಪ್ರತಿಭಟನೆಯಲ್ಲಿ ನ್ಯಾಂiÀiವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ವಾಯ್.ಅಡಿಹುಡಿ ಉಪಾಧ್ಯಕ್ಷ ಎಸ್.ವಾಯ್.ಹೊಸಟ್ಟಿ ಸಹ ಕಾರ್ಯದರ್ಶಿ ಡಿ.ಎಸ್.ರೋಡ್ಡನವರ ಬಿ.ಎಚ್.ಮಳ್ಳಿವಡೆಯರ ಖಜಾಂಚಿ ವಿ.ಕೆ.ಪಾಟೀಲ ಹಿರಿಯ ವಕೀಲರಾದ ಎ.ಬಿ.ಬಾಗೋಜಿ ಎಸ್.ಜಿ.ಗೋಡಿಗೌಡರ ವಿ.ವಿ.ನಾಯಕ ಎಸ್.ಎಲ್.ಪಾಟೀಲ ಎಮ್.ಆಯ್.ಬಡಿಗೇರ ಎ.ಎಸ್.ಕೌಜಲಗಿ ವಿ.ಸಿ.ಗಾಡವಿ ಎಸ್.ಎಸ್.ತುಪ್ಪದ ಎಮ್.ಬಿ.ಹಲಗಿ ಪಿ.ಎಸ್.ಮಲ್ಲಾಪೂರ ಆರ್.ಎಮ್.ಐಹೋಳೆ ಎಸ್.ಎಮ್.ಗಿಡೋಜಿ ಎನ್.ಬಿ.ನೇಮಗೌಡರ ಆರ್.ಆರ್.ಕಾವಲದಾರ ಆರ್.ಬಿ.ಕುಳ್ಳುರ ಆರ್.ವಾಯ್.ಶಾಬನ್ನವರ ಪಿ.ಎಲ್.ಮನ್ನಿಕೇರಿ ವಾಯ್.ಎಸ್.ಖಾನಟ್ಟಿ ಭಾಗವಹಿಸಿದರು.