ವೇಮನ್ ಸೊಸಾಯಿಟಿಯ 20ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಸಭೆ
ಮೂಡಲಗಿ: ಪಟ್ಟಣದ ಶ್ರ್ರೀ ವೇಮನ್ ಕೋ-ಆಪ್.ಕ್ರೆಡಿಟ್ ಸೊಸಾಯಿಟಿಯ 20ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಸರ್ವ ಸಾಧಾರಣ ಸಭೆ ಸೋಸೈಟಿಯಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ ಸೊಸೈಟಿಯ ಅಧ್ಯಕ್ಷ ಸಂತೋಷ ಕೃ.ಸೋನವಾಲ್ಕರ ಮಾತನಾಡಿ, ಕಳೆದ ಮಾರ್ಚ ಅಂತ್ಯ ಸೋಸೈಟಿಯು 1.51 ಕೋಟಿ ರೂ ನಿವ್ವಳ ಲಾಭ ಹೊಂದಿ ಪ್ರಧಾನ ಕಛೇರಿ ಹಾಗೂ ಸೋಸೈಟಿಯ ಹುಲಕುಂದ, ರಾಮದುರ್ಗ, ಹೊಸಕೋಟಿ, ಯಾದವಾಡ ಹಾಗೂ ಮುಧೋಳದಲ್ಲಿ ಶಾಖೆಗಳು ವ್ಯಾಪಾರಸ್ಥರಿಗೆ, ರೈತರಿಗೆ ಮತ್ತು ಎಲ್ಲ ತರಹದ ಸಾಲ ವಿತರಿಸಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿವೆ
ಉಪಾಧ್ಯಕ್ಷ ಹಣಮಂತ. ರಂ. ಪ್ಯಾಟಿಗೌಡರ ಮಾತನಾಡಿ, ಸೋಸೈಟಿಯ ಕಳೆದ ಮಾರ್ಚ ಅಂತ್ಯಕ್ಕೆ ಸೋಸೈಟಿಯು 5.02 ಕೋಟಿ ರೂ ನೀಧಿಗಳು, 2.47 ಕೋಟಿ ರೂ ಶೇರು ಬಂಡವಾಳ, 87 ಕೋಟಿ ರೂ ಸಾರ್ವಜನಿಕ ವಲಯದಿಂದ ಶೇರು ಹೊಂದಿದ್ದು, 32.26 ಕೋಟಿ ರೂ ವಾರ್ಷಿಕ ವಹಿವಾಟು ನಡೆಸಿ ಒಟ್ಟು 99.57 ಕೋಟಿ ರೂ ದುಡಿಯು ಬಂಡವಾಳ ಹೊಂದಿದೆ ಎಂದರು.
ಈ ಸಂಧರ್ಭದಲ್ಲಿ ಸೋಸೈಟಿಯ ನಿರ್ದೇಶಕರಾದ ವಿಜಯಕುಮಾರ ಸೋನವಾಲ್ಕರ, ಪಾಂಡಪ್ಪ. ಸೋನವಾಲ್ಕರ, ಯಮನಪ್ಪ ಮಂಟನವರ, ತಮ್ಮಣ್ಣಾ ಝಂಡೇಕುರಬರ, ಹಣಮಂತ ದಂಡಪ್ಪನವರ, ಸಿದ್ದಪ್ಪ ದೊ.ಕ.ಪೂಜೇರಿ, ಸಚೀನ ಸೋನವಾಲ್ಕರ, ರಾಮಪ್ಪ ಹಾದಿಮನಿ, ಪಾಂಡಪ್ಪ ಸಂತಿ, ವೆಂಕಟೇಶ ಸತರಡ್ಡಿ, ಪ್ರಧಾನ ವ್ಯವಸ್ಥಾಪಕ ಪರಶುರಾಮ ಕುಟರಟ್ಟಿ ಮತ್ತು ಗಣ್ಯರು ಮತ್ತು ಸದಸ್ಯರು ಇದ್ದರು.