Breaking News
Home / Recent Posts / ಲೋಳಸೂರ ಕೆಳಗಿನ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ : ಶಾಸಕ ಬಾಲಚಂದ್ರ ಜಾರಕಿಹೊಳಿ

ಲೋಳಸೂರ ಕೆಳಗಿನ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಲೋಳಸೂರ ಕೆಳಗಿನ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಜತ್ತ-ಜಾಂಬೋಟಿ (ರಾಹೆ-31) ರಸ್ತೆಯ ಲೋಳಸೂರ ಸೇತುವೆ ಮಾರ್ಗದ ಬದಲಿ ರಸ್ತೆಯನ್ನು ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ಲೋಳಸೂರ ಸೇತುವೆಯ ಪಕ್ಕದಲ್ಲಿರುವ ಹಳೆಯ ಸೇತುವೆ ಮಾರ್ಗದಲ್ಲಿ ಅನುಕೂಲ ಕಲ್ಪಿಸಿಕೊಡಲಾಗಿದ್ದು, ಕಾರು, ಬೈಕ್‍ಗಳ ಸಂಚಾರಕ್ಕೆ ಮಾತ್ರ ರಸ್ತೆ ಸಂಚಾರವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಬದಲಿ ಮಾರ್ಗದಲ್ಲಿ ಹೆಚ್ಚು ತೂಕವನ್ನು ಹೊಂದಿರುವ ವಾಣಿಜ್ಯ ವಾಹನಗಳ ಸಂಚಾರವನ್ನು ಮುಂದಿನ ಮೂರು ವಾರತನಕ ನಿರ್ಬಂಧಿಸಲಾಗಿದ್ದು, ಬಸ್ ಸಂಚಾರವನ್ನು ಕೂಡ ಸ್ಥಗಿತ ಮಾಡಲಾಗಿದೆ. ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ದುರಸ್ತಿಯಲ್ಲಿರುವ ಸೇತುವೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಅದು ಕೂಡ 21 ದಿನಗಳ ನಂತರ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.


Spread the love

About inmudalgi

Check Also

ಜ.21ರಂದು ಡಿಜಿಟಲ್-ಇ ಸ್ಟಾಂಪ್ ತರಬೇತಿ

Spread the loveಜ.21ರಂದು ಡಿಜಿಟಲ್-ಇ ಸ್ಟಾಂಪ್ ತರಬೇತಿ ಮೂಡಲಗಿ: ಮೂಡಲಗಿ ಉಪ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ದಸ್ತಾವ್ಭೆಜು ಬರಹಗಾರರು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ